ಅಂದು ಬುಲೆಟ್ ಪ್ರಕಾಶ್ ಕುಟುಂಬಕ್ಕೆ ಕೊಟ್ಟ ಮಾತಿನಂತೆ ಈಗ ನಟ ದರ್ಶನ್ ಮಾಡಿರೋ ಕೆಲಸ ನೋಡಿ !

Cinema

ಸ್ಯಾಂಡಲ್ ವುಡ್ ಕಂಡ ಖ್ಯಾತ ಹಾಸ್ಯ ನಟರಲ್ಲಿ ಬುಲೆಟ್ ಪ್ರಕಾಶ್ ಕೂಡ ಒಬ್ಬರು. ತಮ್ಮ ವಿಭಿನ್ನ ಹಾಸ್ಯದ ಕಚಗುಳಿಯಿಂದ ಕೋಟ್ಯಾಂತರ ಕನ್ನಡಿಗರನ್ನ ಮನರಂಜಿಸಿದವರು. ಕನ್ನಡ ಸಿನಿಮಾರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದ ಬುಲೆಟ್ ಪ್ರಕಾಶ್ ಅವರು ಕಳೆದ ವರ್ಷವಷ್ಟೇ ನಮ್ಮನ್ನೆಲ್ಲಾ ಬಿಟ್ಟು ಅಗಲಿದ್ದಾರೆ. ಇನ್ನು ನಟ ದರ್ಶನ್ ಮತ್ತು ಬುಲೆಟ್ ಪ್ರಕಾಶ್ ಅವರ ಮಡುವೆ ಅಗಾಧವಾದ ಸ್ನೇಹವಿದ್ದುದ್ದರ ಬಗ್ಗೆ ನಮಗೆಲ್ಲಾ ತಿಳಿದೇ ಇದೆ..

ಇದೇ ಕಾರಣದಿಂದಾಗಿಯೇ ತನ್ನ ಸ್ನೇಹಿತ ಬುಲೆಟ್ ಪ್ರಕಾಶ್ ಅವರ ಮಗನ ಬೆನ್ನಹಿಂದೆ ನಿಲ್ಲುವುದಾಗಿ ದಾಸ ದರ್ಶನ್ ಮಾತು ಕೊಟ್ಟಿದ್ದರು. ಅದೇ ರೀತಿ ಬುಲೆಟ್ ಪ್ರಕಾಶ್ ಅವರ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಕೂಡ ಮಾಡಿದ್ದರು. ಇನ್ನು ತನ್ನ ಸ್ನೇಹಿತ ತೀರಿಕೊಂಡಾಗ ಅಂದು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ನಟ ದರ್ಶನ್. ಹೌದು, ಅಂದು ಬುಲೆಟ್ ಪ್ರಕಾಶ್ ಅವರ ಮಗನ ಸಿನಿಮಾ ಎಂಟ್ರಿಗೆ ನಾನು ಸಪೋರ್ಟ್ ಮಾಡುತ್ತೇನೆ ಎಂದು ಹೇಳಿದ್ದರು.

ಈಗ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಸಿನಿಮಾದಲ್ಲಿ ನಟಿಸಲು ಎಲ್ಲಾ ರೀತಿಯಿಂದ ಸಜ್ಜಾಗಿದ್ದು, ಸ್ಯಾಂಡಲ್ ವುಡ್ ನಲ್ಲಿ ತನ್ನ ಅದೃಷ್ಟ ಪರೀಕ್ಷೆ ಮಾಡಲು ಸಜ್ಜಾಗಿದ್ದಾರೆ. ನಟ ಶರಣ್ ಅವರು ಅಭಿನಯಿಸುತ್ತಿರುವ ತಮ್ಮ ಮುಂದಿನ ಚಿತ್ರ ಶಿಷ್ಯರು ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಟ ಶರಣ್ ಅವರ ಶಿಷ್ಯನ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್. ಇನ್ನು ತನ್ನ ಮಗ ಕೂಡ ಸ್ಯಾಂಡಲ್ ವುಡ್ ನಲ್ಲಿ ಮಿಂಚಬೇಕೆಂದು ಕನಸು ಕಂಡಿದ್ದ ಬುಲೆಟ್ ಪ್ರಕಾಶ್ ಅವರು ಆಗಲೇ ಮಗನಿಗೆ ಡ್ಯಾನ್ಸ್, ಜಿಮ್, ಪೈಟ್ ಅಂತ ತರಭೇತಿಯನ್ನು ಕಲಿಸಿದ್ದರು.

ಆದ್ರೆ ಮಗನನ್ನ ಬೆಳ್ಳಿಪರದೆ ಮೇಲೆ ನೋಡಬೇಕೆಂಬ ಬುಲೆಟ್ ಪ್ರಕಾಶ್ ಅವರ ಕನಸು ಈಡೇರಲಿಲ್ಲ. ಅನಾರೋಗ್ಯದಿಂದಾಗಿ ತೀರಿಹೋದ್ರು. ಈಗ ತನ್ನ ತಂದೆಯ ಆಸೆಯಂತೆ ನಟ ದರ್ಶನ್ ಅವರ ಮಾರ್ಗದರ್ಶನದಲ್ಲಿ ಶರಣ್ ಅಭಿನಯದ ಗುರು ಶಿಷ್ಯರು ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ ರಕ್ಷಕ್. ಇನ್ನು ಈ ಸಿನಿಮಾ ಬಳಿಕ ದರ್ಶನ್ ಅವರ ಮುಂದಿನ ಸಿನಿಮಾದಲ್ಲಿ ರಕ್ಷಕ್ ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ತನ್ನ ಸ್ನೇಹಿತನ ಕುಟುಂಬಕ್ಕೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ ಟಿ ಬಾಸ್ ದರ್ಶನ್..