ಕೇವಲ 50 ಜನರ ಭೇಟಿ ಮಾಡುವ ಸಲುವಾಗಿ 11 ಗಂಟೆಗಳ ಕಾಲ ನಡೆದುಕೊಂಡು ಹೋದ ಸಿಎಂ !

Inspire
Advertisements

ಕೆಲ ರಾಜ್ಯಗಳ ಮುಖ್ಯಮಂತ್ರಿಗಳಿದ್ದಾರೆ ಅವರಿಗೆ ತಮ್ಮ ಪಕ್ಕದಲ್ಲಿರುವ ಜನರ ಸಮಸ್ಯೆಗಳನ್ನ ಆಲಿಸುವುದಕ್ಕೆ ಸಮಯ ಇರುವುದಿಲ್ಲ. ಆದರೆ ತಮ್ಮ ಜನರನ್ನ ಭೇಟಿ ಮಾಡಿ ಅವರ ಸಮಸ್ಯೆಗಳನ್ನ ಆಲಿಸುವ ಸಲುವಾಗಿ ಅರುಣಾಚಲ ಪ್ರದೇಶದ ಸಿಎಂ ೨೪ ಕಿಮೀ ದೂರದ ಅಂತರವನ್ನ ಕಾಲ್ನಡಿಗೆಯಲ್ಲೇ ನಡೆದುಕೊಂಡು ಹೋಗಿದ್ದಾರೆ. ಮುಖ್ಯಮಂತ್ರಿ ಪೆಮಾ ಖಂಡು ಅವರು ತವಾಂಗ್ ಜಿಲ್ಲೆಯಲ್ಲಿ ಬರುವ ಮುಕ್ತೋ ಕ್ಷೇತ್ರದ ಹಳ್ಳಿಯಲ್ಲಿ ವಾಸವಾಗಿರುವ ೫೦ ಜನರನ್ನ ಭೇಟಿ ಮಾಡುವ ಸಲುವಾಗಿ ಸುಮಾರು ೧೧ ಗಂಟೆಗಳ ನಡೆದುಕೊಂಡು ಹೋಗಿದ್ದಾರೆ.

೪೧ ವರ್ಷದ ಸಿಎಂ ಪೆಮಾ ಖಂಡು ಭಾರತ ಮತ್ತು ಚೀನಾ ದೇಶದ ಗಡಿಯಲ್ಲಿ ಹೊಂದಿಕೊಂಡಿರುವ ಕುಗ್ರಾಮ ಲುಗುಥಾಂಗ್ ಹಳ್ಳಿಗೆ ಯಾವುದೇ ರಸ್ತೆ ಮಾರ್ಗ ಇಲ್ಲದ ಕಾರಣ ಸಮುದ್ರ ಮಟ್ಟದಿಂದ 14,500 ಅಡಿ ಎತ್ತರದಲ್ಲಿರುವ ಈ ಗ್ರಾಮಕ್ಕೆ ಕಾಡುಗಳು ಪರ್ವತ ಪ್ರದೇಶಗಳ ಮೂಲಕ ನಡೆದುಕೊಂಡು ಹೋಗಿದ್ದಾರೆ. ಇನ್ನು ಈ ಕುಗ್ರಾಮದಲ್ಲಿ ಕೇವಲ ೧೦ ಮನೆಗಳಿವೆ. ತಮ್ಮ ಕ್ಷೇತ್ರದ ಜನರ ಸಮಸ್ಯೆಗಳನ್ನ ಆಲಿಸುವ ಸಲುವಾಗಿ ಸಿಎಂ ರವರು ೧೧ ಗಂಟೆಗಳ ನಿರಂತರವಾಗಿ ೨೪ ಕಿಮೀ ದೂರವನ್ನ ಕಾಲ್ನಡಿಗೆಯಲ್ಲೇ ಕ್ರಮಿಸಿದ್ದು ಎರಡು ದಿನಗಳ ಅದೇ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಸಿಎಂ ಪೆಮಾ ಖಂಡು ಅಲ್ಲಿನ ಜನರ ಸಮಸ್ಯಗಳನ್ನ ಆಲಿಸಿ ಬಳಿಕ ಅಲ್ಲಿಂದ ಮತ್ತೆ ಹಿಂತಿರುಗಿದ್ದಾರೆ.

Advertisements

ಇನ್ನು ತಮ್ಮ ಪ್ರವಾಸದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಿಎಂ ೨೪ ಕಿಮೀ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗಿದ್ದು ನನ್ನ ಜೀವಮಾನದಲ್ಲೇ ಅದ್ಭುತವಾದ ಅನುಭವ. ಹನ್ನೊಂದು ಗಂಟೆಗಳ ಕಾಲ ತಾಜಾ ಗಾಳಿಯನ್ನ ಸೇವಿಸಿದ ನನಗೆ ಸ್ವರ್ಗವನ್ನ ಸ್ಪರ್ಶ ಮಾಡಿದಷ್ಟೇ ಅನುಭಾವವಾಗಿತ್ತು ಎಂದು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಮುಖ್ಯಮಂತ್ರಿ ಪೆಮಾ ಖಂಡು ಅವರು ಕೇವಲ ೫೦ ಜನರ ಸಮಸ್ಯೆ ಅಲಿಸಲು ಮಾಡಿದ ಸಾಹಸ, ಎಸಿ ರೂಮಿನಲ್ಲಿ ಕುಳಿತುಕೊಂಡು ಜನರ ಸಮಸ್ಯೆಗಳನ್ನ ಪರಿಹಾರ ಮಾಡುತ್ತೇವೆ ಎನ್ನುವ ಎಷ್ಟೋ ಸಿಎಂಗಳಿಗೆ ಒಂದು ಪಾಠವಾಗಲಿದೆ ಎಂದರೆ ತಪ್ಪಾಗೊದಿಲ್ಲ..