ಈ ಕಾಲದಲ್ಲಂತೂ ಮಾನವೀಯತೆಯನ್ನ ಜನ ಮರೆತೇ ಹೋಗಿದ್ದಾರೆ. ಇದರ ನಡುವೆಯೇ ವೃದ್ಧ ಭಿಕ್ಷುಕನೊಬ್ಬ ಮಾಡಿದ ಕೆಲಸ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಡವನಾದರೂ ವೃದ್ಧನು ಮಾಡಿದ ಮಾನವೀಯತೆಯ ಕೆಲಸ ಕಂಡು ನೆಟ್ಟಿಗರು ಮೆಚ್ಚುಗೆಗಳನ್ನ ವ್ಯಕ್ತಪಡಿಸಿದ್ದಾರೆ.
Poor by wealth…
— Susanta Nanda IFS (@susantananda3) July 16, 2020
Richest by heart 🙏 pic.twitter.com/OlMsYORNI2
ಹೌದು, ವೃದ್ಧ ಭಿಕ್ಷುಕರೊಬ್ಬರು ತನ್ನ ಪ್ಲೇಟಿನಲ್ಲಿಯೇ ಬೀದಿ ನಾಯಿಗಳಿಗೆ ಊಟ ನೀಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಬಾರಿ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಬೇರೆ ನಾಯಿಗಳು ಆ ನಾಯಿಯ ಮೇಲೆ ದಾಳಿ ಮಾಡದಂತೆ ಅಲ್ಲಿಯೇ ಕಾಯುತ್ತಿರುವುದು ಆ ವಿಡಿಯೋದಲ್ಲಿದೆ. ಇನ್ನು ಭಿಕ್ಷುಕನಾದರೂ ವೃದ್ಧನ ಮಾನವೀಯತೆಗೆ ಮಾರುಹೋಗಿದ್ದು ಇಲ್ಲಿಯವರೆಗೂ ಈ ವಿಡಿಯೋ ೪೬ ಸಾವಿರ ಬಾರಿ ವೀಕ್ಷಣೆಯಾಗಿದೆ.
ಇನ್ನು IFS ಅಧಿಕಾರಿಯೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೋವನ್ನ ಹಂಚಿಕೊಂಡಿದ್ದು ಸಂಪತ್ತಿನಲ್ಲಿ ಬಡವರಾದರು ಹೃದಯದಲ್ಲಿ ಶ್ರೀಮಂತರು ಎಂದು ವಿಡಿಯೋ ಕೆಳಗಡೆ ಬರೆದುಕೊಂಡಿದ್ದಾರೆ. ತನಗೆ ಹಸಿವಿದ್ದರೂ ತನ್ನ ಊಟದಲ್ಲಿಯೇ ಸ್ವಲ್ಪವನ್ನ ನಾಯಿಗಳಿಗೆ ಹಂಚಿರುವುದು ಕಣ್ಣಲ್ಲಿ ನೀರು ತರಿಸುತ್ತಿದೆ ಎಂದು ಒಬ್ಬರು ಬರೆದುಕೊಂಡಿದ್ದರೆ, ಕರುಣೆ ಇಲ್ಲದೆ ಜನರು ವರ್ತಿಸುತ್ತಿರುವ ಇಂತಹ ಕಾಲದಲ್ಲೂ ಈ ವೃದ್ಧ ಭಿಕ್ಷುಕನ ಕಾರ್ಯಕ್ಕೆ ಸೆಲ್ಯೂಟ್ ಹೊಡೆಯಲೇಬೇಕು ಎಂದು ಕಾಮೆಂಟ್ ಮಾಡಿದ್ದಾರೆ.