ತನ್ನ ಮಗನನ್ನು ನೋಡಿಕೊಳ್ಳುವ ದಾದಿಗೆ ಈ ನಟಿ ಕೊಡುವ ಸಂಬಳ ಕೇಳಿದ್ರೆ ಶಾಕ್ ಆಗ್ತೀರಾ !

Cinema
Advertisements

ನವಾಬ್ ಕುಟುಂಬದ ಸೈಫ್ ಅಲಿ ಖಾನ್ ಮತ್ತು ಬಾಲಿವುಡ್ ನಟಿ ಕರೀನಾ ಕಪೂರ್ ಅವರ ಮುದ್ದಾದ ಮಗನೆ ತೈಮೂರ್ ಅಲಿ ಖಾನ್. ತನ್ನ ತಂದೆ ತಾಯಿಗಳಂತೆ ತೈಮೂರ್ ಕೂಡ ಆಗಾಗ ಸುದ್ದಿಯಲ್ಲಿರುತ್ತಾನೆ. ಈಗ ತೈಮೂರ್ ನನ್ನು ನೋಡಿಕೊಳ್ಳುವ ದಾದಿ ಕೂಡ ಸುದ್ದಿಯಲ್ಲಿದ್ದಾರೆ. ಹೌದು, ನಟಿ ಕರೀನಾ ಕಪೂರ್ ಮತ್ತು ನಟ ಸೈಫ್ ಅಲಿ ಖಾನ್ ದಂಪತಿಯ ಪುತ್ರ ತೈಮೂರ್ ಅಲಿ ಖಾನ್ ನ್ನು ನೋಡಿಕೊಳ್ಳುವ ದಾದಿ ಪಡೆಯುವ ಸಂಬಳ ಈಗ ಸುದ್ದಿಯಲ್ಲಿದೆ. ಕರೀನಾ ಕಪೂರ್ ತನ್ನ ಮಗನನ್ನು ಪ್ರತೀ ದಿನ ನೋಡಿಕೊಳ್ಳಲು ದಾದಿಗೆ ಕೊಡುವ ಸಂಬಳ ಕೇಳಿದ್ರೆ ನೀವು ಶಾಕ್ ಆಗ್ದೆ ಇರಲ್ಲ.

Advertisements

ಶೋ ಒಂದರಲ್ಲಿ ಕರೀನಾ ಕಪೂರ್ ತನ್ನ ಮಗನನ್ನು ನೋಡಿಕೊಳ್ಳುವ ದಾದಿಯ ಸಂಬಳದ ಬಗ್ಗೆ ಮಾತನಾಡಿದ್ದಾರೆ. ನಿಮ್ಮ ಮಗನನ್ನು ನೋಡಿಕೊಳ್ಳುವ ದಾದಿಗೆ ತಿಂಗಳ ಸಂಬಳವಾಗಿ ಬರೋಬ್ಬರಿ 1.5 ಲಕ್ಷ ರೂಪಾಯಿ ಕೊಡಲಾಗುತ್ತಿದೆಯಂತೆ ಇದು ನಿಜವೇ ಎಂಬ ಪ್ರಶ್ನೆ ಮಾಡಲಾಗಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕರೀನಾ ಕಪೂರ್ ನಾನು ದಾದಿಗೆ ಎಷ್ಟು ಸಂಬಳ ಕೊಡುತ್ತಿದ್ದೇನೆ ಎಂದು ಬೇರೆಯವರಿಗೆ ಹೇಗೆ ತಿಳಿಯುತ್ತದೆ ಗೊತ್ತಿಲ್ಲ. ಆದರೆ ಇಲ್ಲಿ ನಾನು ಎಷ್ಟು ಸಂಬಳ ಕೊಡುತ್ತೇನೋ ಅದು ಮುಖ್ಯವಲ್ಲ. ನನ್ನ ಮಗನ ಸುರುಕ್ಷತೆ ಬಹು ಮುಖ್ಯ. ನನ್ನ ಮಗನನ್ನು ಸುರುಕ್ಷಿತವಾಗಿ ನೋಡಿಕೊಳ್ಳುವುದು ಮುಖ್ಯ. ನನ್ನ ಮಗನ ಸುರಕ್ಷತೆಗಿಂತ ಹಣ ಹೆಚ್ಚೆಲ್ಲ.ನನ್ನ ಮಗನನ್ನು ನೋಡಿಕೊಳ್ಳುವವರು ಖುಷಿಯಾಗಿದ್ದರೆ ತಾನೇ ನನ್ನ ಮಗ ಕೂಡ ಖುಷಿಯಾಗಿರಲು ಸಾಧ್ಯ. ಹಾಗಾಗಿ ಮಗನಿಗಿಂತ ಸಂಬಳ ದೊಡ್ಡದಲ್ಲ ಎನ್ನುವ ಮೂಲಕ, ಕರೀನಾ ಕಪೂರ್ 1.5 ಲಕ್ಷ ಆಸುಪಾಸಿನಲ್ಲಿಯೇ ಸಂಬಳ ಕೊಡುತ್ತಿರುವುದು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.