ತೆಲುಗು ಚಾನಲ್ ವಿರುದ್ಧ ಹೋರಾಟಕ್ಕೆ ನಿಂತ KGF ಚಿತ್ರ ತಂಡ?

Cinema
Advertisements

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ದೊಡ್ಡ ಹಿಸ್ಟರಿ ಕ್ರಿಯೇಟ್ ಮಾಡಿದ ಚಿತ್ರ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1.ಇಡೀ ಭಾರತೀಯ ಸಿನಿಮಾ ರಂಗ ಸ್ಯಾಂಡಲ್ವುಡ್ ಕಡೆ ನೋಡುವಂತೆ ಮಾಡ ಚಿತ್ರ. ಕನ್ನಡದಲ್ಲಿ ಮೊದಲ ಬಾರಿಗೆ ಹಲವಾರು ದಾಖಲೆಗಳನ್ನ ಬರೆದ ಚಿತ್ರ ಇದೆಯೂ. ನಟ ಯಶ್ ರವರನ್ನ ಇಂಡಿಯನ್ ಸ್ಟಾರ್ ಆಗಿ ಮಾಡಿದ ಚಿತ್ರ.

Advertisements

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದ ಚಾಪ್ಟರ್ 2 ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಇದರ ನಡುವೆ ಕೆಜಿಎಫ್ ಚಿತ್ರದ ಭಾಗ ಒಂದನ್ನ ಆಕ್ರಮವಾಗಿ ಪ್ರಸಾರ ಮಾಡಿರುವ ತೆಲುಗು ಚಾನೆಲ್ ಒಂದರ ವಿರುದ್ಧ ಹೋರಾಟ ನಡೆಸಲು KGF ಚಿತ್ರ ತಂಡ ನಿರ್ಧಾರ ಮಾಡಿದೆ.ಕೆಜಿಎಫ್ ಚಿತ್ರದ ಭಾಗ ಒಂದರ ತೆಲುಗಿನ ಅವತರಣಿಕೆಯನ್ನ ಸ್ಥಳೀಯ ಎವರಿ ಎಂಬ ತೆಲಗು ವಾಹಿನಿ ಯಾವುದೇ ರೈಟ್ಸ್ ಪಡೆದುಕೊಳ್ಳದೇ ಅಕ್ರಮವಾಗಿ ಪ್ರಸಾರ ಮಾಡಿರುವುದು ಬೆಳೆಕಿಗೆ ಬಂದಿದೆ.

ಈ ಹಿನ್ನಲೆಯಲ್ಲಿ ಆ ಚಾನೆಲ್ ವಿರುದ್ದ ಕಾನೂನಿನ ಹೋರಾಟ ಮಾಡಲಾಗುವುದು ಎಂದು ಚಿತ್ರತಂಡ ಹೇಳಿದೆ. ವಿತರಕರಾಗಿರುವ ಕಾರ್ತಿಕ್ ಗೌಡ ಎಂಬುವವರು ಕೆಜಿಎಫ್ ಚಿತ್ರದ ಸ್ಯಾಟಲೈಟ್ ಹಕ್ಕುಗಳ ಬಗ್ಗೆ ಮಾತುಕತೆ ಇರುವಾಗಲೇ ಈ ಘಟನೆ ನಡೆದಿದು, ತೆಲಗು ವಾಹಿನಿ ಅಕ್ರಮವಾಗಿ ಪ್ರಸಾರಮಾಡಿರುವ ಬಗ್ಗೆ ನಮ್ಮ ಬಳಿ ವಿಡಿಯೋ ಸೇರಿದಂತೆ ಸ್ಕ್ರೀನ್ ಶಾಟ್ಸ್ ಸಾಕ್ಷಿಗಳಿ ಇವೆ ಎಂದು ಟ್ವೀಟ್ ಮಾಡಿದ್ದಾರೆ.