ನನ್ನ ಗಂಡನನ್ನ ಹುಡುಕೋದಾ ಮಗು ನೋಡಿಕೊಳ್ಳೋದಾ ಇಲ್ಲಾ ಕೊರೋನಾ ಕೆಲಸ ಮಾಡೋದಾ ಎಂದು ಕಣ್ಣೀರು ಹಾಕಿದ ನರ್ಸ್

News
Advertisements

ಕೊರೋನಾ ಹಿನ್ನಲೆಯಲ್ಲಿ ವೈದ್ಯರು ಸೇರಿದಂತೆ ನರ್ಸ್ ಗಳುರಾತ್ರಿ ಹಗಲೆನ್ನದೆ ಕೊರೋನಾ ಸೋಂಕಿತರನ್ನ ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಆದರೆಇದೇ ಸಮಯದಲ್ಲಿ ಕೊರೋನಾ ವಾರಿಯರ್ಸ್ ಆಗಿ ಜನರಿಗೋಸ್ಕರ ದುಡಿಯುತ್ತಿರುವ ನರ್ಸ್ ಒಬ್ಬರ ಪತಿ ಲಾಕ್ ಡೌನ್ ಇರುವ ಸಮಯದಲ್ಲೇ ನಾಪತ್ತೆಯಾಗಿದ್ದು, ಈಗ ನರ್ಸ್ ನನಗೆ ನನ್ನ ಪತಿ ಬೇಕು ಎಂದು ಕಣ್ಣೀರು ಹಾಕುತ್ತಿರುವ ಘಟನೆ ನಡೆದಿದೆ.

Advertisements

ದಾವಣೆಗೆರೆ ಮೂಲದವರಾಗಿರುವ ನರ್ಸ್ ಶಾಂತ ಎನ್ನುವವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಈಗ ಶಾಂತರವರ ಪತಿ ಸಿದ್ದರಾಜು ಎಂಬುವವರು ನಾಪತ್ತೆಯಾಗಿದ್ದು, ನನ್ನ ಪತಿಯ ಫೋನ್ ಸ್ವಿಚ್ ಆಪ್ ಬರುತ್ತಿದೆ. ಆತ ಬೇರೆ ಮದ್ವೆ ಆಗಿರಬಹುದು ಎಂಬ ಅನುಮಾನ ಇದೆ ಎಂದು ಕಣ್ಣೀರು ಹಾಕಿದ್ದಾರೆ.

ದಾವಣೆಗೆರೆಯ ಕುರುಡಿಯವರಾಗಿರುವ ನನ್ನ ಪತಿ ಮಗುವನ್ನ ನೋಡಿಕೊಂಡು ದಾವಣಗೆರೆಗೆ ಬಂದು ಹೋಗುತ್ತಿದ್ದರು. ಈಗ ಲಾಕ್ ಡೌನ್ ಇರುವ ಕಾರಣ ಡೇ ಕೇರ್ ಕೂಡ ಮುಚ್ಚಿದೆ. ೫ ತಿಂಗಳಿಂದ ಬೇರೆ ಮನೆ ಬಾಡಿಗೆ ಕಟ್ಟಿಲ್ಲ. ಕೊರೋನಾ ಇರುವ ಕಾರಣ ನಾನೂಫ್ ಕೆಲಸ ಮಾಡಲೇಬೇಕಾಗಿದೆ. ಊರಲ್ಲಿ ಕೆಲಸ ಇದೆ ಊರಿಗೆ ಹೋಗಿ ಬರುತ್ತೀನಿ ಅಂತ ಹೇಳಿ ಹೋದವರು ಒಂದು ತಿಂಗಳಾದ್ರು ಇನ್ನು ಬಂದಿಲ್ಲ. ಎಂದು ತಮ್ಮ ನೋವನ್ನ ತೋಡಿಕೊಂಡಿದ್ದಾರೆ ನರ್ಸ್.

ಇನ್ನು ನನಗೆ ನನ್ನ ಕುಟುಂಬದವರಿಂದ ಕೂಡ ಬೆಂಬಲವಿಲ್ಲ.ಮಗುವನ್ನು ಕೂಡ ನೋಡಿಕೊಳ್ಳೋರು ಯಾರೂ ಇಲ್ಲ. ಮುಂದೆ ಏನೂ ಮಾಡಬೇಕೆಂದು ನನಗೆ ಏನೂ ತೋಚುತ್ತಿಲ್ಲ. ಇನ್ನು ನನ್ನ ಪತಿ ಮನೆಯಲ್ಲಿ ಯಾರನ್ನೋ ಕರೆದುಕೊಂಡು ಬಂದು ಇರಿಸಿಕೊಂಡಿದ್ದಾರಂತೆ. ನನ್ನ ಪತಿಯ ಬಳಿ ನನ್ನನ್ನ ಕಳುಹಿಸಿಕೊಡಿ ಎಂದು ನರ್ಸ್ ಕಣ್ಣೀರು ಹಾಕಿದ್ದಾರೆ.

ನನ್ನ ಮಗು ಬೇರೆ ಪ್ರತಿ ದಿನಅಪ್ಪ ಎಲ್ಲಿ ಎಂದುಕೇಳುತ್ತಿದ್ದಾನೆ. ನನ್ನ ಹಾಗೂ ನನ್ನ ಮಗುವನ್ನ ನನ್ನ ಪತಿಯ ಬಳಿಗೆ ಕಳುಹಿಸಿಕೊಡಿ, ಇಲ್ಲದಿದ್ದರೆ ನಾವು ಏನಾದರು ಮಾಡಿಕೊಳ್ಳುತ್ತೇವೆ ಎಂದು ಕಣ್ಣೀರು ಹಾಕಿದ್ದಾರೆ. ಇನ್ನು ಇಂತಹ ಸಮಯದಲ್ಲಿ ನನ್ನ ಪತಿಯನ್ನಸ್ ಹುಡುಕೋದಾ, ನನ್ನ ಮಗುವನ್ನ ನೋಡಿಕೊಳ್ಳೋದಾ,ಇಲ್ಲ ಕೊರೋನಾ ಕೆಲಸ ಮಾಡೋದಾ ಎಂದು ಕಣ್ಣೀರು ಹಾಕಿದ್ದಾರೆ.