ನಿಮ್ಮ ಕಂಕುಳ ಭಾಗದಲ್ಲಿ ದುರ್ವಾಸನೆಯೇ ? ಇಲ್ಲಿದೆ ಸುಲಭ ಪರಿಹಾರ

Kannada News
Advertisements

ನಮಸ್ತೇ ಸ್ನೇಹಿತರೆ, ಬೇಸಿಗೆ ಕಾಲದಲ್ಲಿ ದೇಹದಲ್ಲಿ ಉಂಟಾಗುವ ಬೆವರಿನಿಂದಾಗಿ ಕಂಕುಳಿನ ಭಾಗದಲ್ಲಿ ಉಂಟಾಗುವ ದುರ್ವಾಸನೆಯನ್ನ ತಡೆದುಕೊಳ್ಳುವುದು ಬಲು ಕಷ್ಟ. ಇನ್ನು ಈ ವಾಸನೆಯಿಂದಾಗಿ ಮದುವೆ ಮುಂಜಿ ಸಮಾರಂಭಗಳಲ್ಲಿ, ಕಚೇರಿಗಳಲ್ಲಿ ಕೆಲಸ ಮಾಡುವಾಗ, ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಮುಜುಗುರ ಉಂಟಾಗುವ ಸಾಧ್ಯತೆಗಳು ಹೆಚ್ಚು. ಇನ್ನು ಈ ಭಾದೆಯನ್ನ ಬಹಳಷ್ಟು ಮಂದಿ ಪ್ರತಿದಿನ ಅನುಭವಿಸುತ್ತಾರೆ. ಹಾಗಂತಾ ಅಂಗಡಿಗಳಲ್ಲಿ ಸಿಗುವ ರಾಸಾಯನಿಕದಿಂದ ಮಾಡಿದ ವಸ್ತುಗಳನ್ನ ಉಪಯೋಗಿಸಿದ್ರೆ ಚರ್ಮ ಸಂಭಂದಿತ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಆದರೆ ಕೆಲವೊಂದು ಸುಲಭ ಪರಿಹಾರಗಳನ್ನ ಅನುಸರಿಸುವುದರಿಂದ ಕಂಕುಳದ ದೂರವಾಸನೆಯಿಂದ ನಾವು ಮುಕ್ತಿ ಪಡೆಯಬಹುದಾಗಿದೆ..

*ಇಂದಿನ ಆಹಾರ ಜೀವನ ಶೈಲಿಯೇ ಹಲವಾರು ತೊಂದರೆಗಳಿಗೆ ಕಾರಣವಾಗಿದೆ. ಹಾಗಾಗಿ ನಾವು ಪ್ರತಿದಿನ ಸೇವಿಸುವ ಆಹಾರದ ಮೇಲೆ ನಮಗೆ ಗಮನವಿರಬೇಕು. ಇನ್ನು ಧೂ’ಮಪಾನ ಸೇರಿದಂತೆ ಕೊಬ್ಬಿನಾಂಶ ಪದಾರ್ಥಗಳು, ಕೆಲವೊಂದು ಖಾರದ ತಿಂಡಿಗಳು, ಫಾಸ್ಟ್ ಫುಡ್, ಕಾಫಿ ಯಿಂದ ದೂರವಿದ್ದರೆ ಕಂಕುಳದ ವಾಸನೆಯಿಂದ ಮುಕ್ತಿ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.

*ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ನಮ್ಮ ದೇಹದಲ್ಲಿ ಬೆವರು ಉಂಟಾಗುವುದು ಜಾಸ್ತಿ. ಇಂತಹ ಸಮಯದಲ್ಲಿ ತುಸು ಬೆಚ್ಚಗಿನ ನೀರು ಹಾಗೂ ಉತ್ತಮವಾದ ಸೋಪನ್ನ ಉಪಯೋಗಿಸಿ ಕಂಕುಳನ್ನ ಚೆನ್ನಾಗಿ ಸ್ವಚ್ಛಗೊಳಿಸಬೇಕು. ಸಾಧ್ಯವಾದಲ್ಲಿ ಪ್ರತಿದಿನ ಎರಡುಬಾರಿ ಸ್ನಾನ ಮಾಡಿದಲ್ಲಿ ದುರ್ವಾಸನೆ ಉಂಟುಮಾಡುವ ಬ್ಯಾಕ್ಟಿರಿಯಾಗಳನ್ನ ತಡೆಯಬಹುದು.

Advertisements

*ಇನ್ನು ಮಾರುಕಟ್ಟೆಯಲ್ಲಿ ಈ ಕಂಕುಳ ದುರ್ವಾಸನೆಯನ್ನ ಹೋಗಲಾಡಿಸುವ ಸಲುವಾಗಿ ಹಲವಾರು ಡಿಯೋಡ್ರಂಟ್ ಗಳು ಸಿಗುತ್ತವೆ. ಆದರೆ ಇವುಗಳನ್ನ ಉಪಯೋಗಿಸುವ ಬದಲು ಆ್ಯಪಲ್ ಸೈಡರ್ ವಿನೆಗರ್ ನ್ನ ತೆಗೆದುಕೊಂಡು ಹತ್ತಿಯಿಂದ ಅದ್ದಿ ನಿಮ್ಮ ಕಂಕುಳದ ಭಾಗಕ್ಕೆ ಹಚ್ಚುವುದರಿಂದ ವಾಸನೆಯಿಂದ ದೂರವಿರಬಹುದು.

*ಇನ್ನು ಈ ವಿಷ್ಯದಲ್ಲಿ ಮನೆ ಮದ್ದುಗಳನ್ನು ಹೆಚ್ಚು ಪ್ರಭಾವ ಬೀರುತ್ತವೆ. ಮನೆ ಮುಂದೆಯೇ ಸಿಗುವ ತುಳಸಿ ಮತ್ತು ಬೇವು, ಈ ಎರಡನ್ನು ಸೇರಿಸಿ ಚೆನ್ನಾಗಿ ಅರೆದು ಪೇಸ್ಟ್ ರೂಪಕ್ಕೆ ಬಂದ ಮೇಲೆ ಕಂಕುಳದ ಭಾಗಕ್ಕೆ ಹಚ್ಚಿ ಸ್ವಲ್ಪ ಸಮಯ ಬಿಟ್ಟ ಬಳಿಕ ಸ್ನಾನ ಮಾಡಿ. ಹೀಗೆ ವಾರದಲ್ಲಿ ಮೂರ್ನಾಲ್ಕು ಬಾರೀ ಮಾಡುವುದರಿಂದ ನೀವು ಕಂಕುಳದ ವಾಸನೆಯಿಂದ ಮುಕ್ತಿ ಪಡೆಯಬಹುದು. ಇನ್ನು ನಿಂಬೆಹಣ್ಣಿನ ರಸವನ್ನು ಸಹ ಹಚ್ಚುವುದು ಸಹ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.