ರಾತ್ರಿ ಉಳಿದಿರುವ ಅನ್ನದಿಂದ ದೀಡಿರ್ ಅಂತ ಮಾಡಿ ಗರಂ ಗರಂ ಚಕ್ಲಿ,ತುಂಬಾ ಸುಲಭ ತಿಳಿಯಲು ಈ ವಿಡಿಯೋ ನೋಡಿ

Kannada News
Advertisements

ರಾತ್ರಿ ಉಳಿದಿರುವ ಅನ್ನವನ್ನ ಬಿಸಾಡದೆ, ಧಿಡೀರನೆ ಗರಂ ಗರಂ ಚಕ್ಕಲಿ ಯಾವ ರೀತಿ ಮಾಡೋದು ಅನ್ನೋದನ್ನ ನಾನು ಇಲ್ಲಿ ತೋರಿಸುತ್ತೇನೆ. ಮನೆಯಲ್ಲಿಹೇಗಿದ್ದರೂ ಒಂದಲ್ಲ ಒಂದು ಟೈಮ್ ಉಳಿದ ಅನ್ನ ಇದ್ದೇ ಇರುತ್ತದೆ. ಆ ಸಮಯದಲ್ಲ್ ನೀವು ಚಕ್ಕಲಿ ಮಾಡಿ ಕೊಡೊದ್ರಿಂದ ಮಕ್ಕಳು ಜೊತೆಗೆ ದೊಡ್ಡವರು ಸಹ ತುಂಬಾ ಇಷ್ಟಪಡ್ತಾರೆ. ಹಾಗಾದ್ರೆ ಮಾಡೋದು ಹೇಗೆ ಎಂದು ನೋಡೋಣ ಬನ್ನಿ..ಮೊದಲನೆಯದಾಗಿ ಅರ್ಧ ಕಪ್ ಅಷ್ಟು ಅನ್ನ ತೆಗೆದುಕೊಳ್ಳಬೇಕು.ಬಳಿಕ ಒಂದು ಕಪ್ ಅಷ್ಟು ಹುರಿಗಡಲೆಯನ್ನ ಮಿಕ್ಸಿಗೆ ಹಾಕಿಕೊಳ್ಳಬೇಕು.ಬಳಿಕ ಹಿಟ್ಟನ್ನ ಜರಡಿ ಹಿಡಿದುಕೊಳ್ಳಬೇಕು. ನಂತರ ರೈಸ್ ನ್ನ ಮಿಕ್ಸಿಗೆ ಹಾಕಿಕೊಳ್ಳಿ. ಮಿಕ್ಸಿಗೆ ಹಾಕಿದ ಬಳಿಕ ಅನ್ನವನ್ನ ಹುರಿಗಡಲೆ ಹಿಟ್ಟಿಗೆ ಮಿಕ್ಸ್ ಮಾಡಿ. ಅರ್ಧ ಟೀ ಸ್ಫೂನ್ ಆಜ್ ವೈನ್, ಒಂದು ಟೀ ಸ್ಪೂನ್ ಕರಿ ಎಳ್ಳು, ರುಚಿಗೆ ತಕ್ಕಷ್ಟು ಉಪ್ಪು, ಬಳಿಕ ಎಲ್ಲವನ್ನ ಚೆನ್ನಾಗಿ ಕಲಿಸಿಕೊಳ್ಳಿ. ಬಳಿಕ ಅದಕ್ಕೆ ೨ ಸ್ಪೂನ್ ನಷ್ಟು ಕಾರ್ನ್ ಫ್ಲೋರ್ ಇಲ್ಲವೇ ಅಕ್ಕಿ ಇಟ್ಟನ್ನ ಹಾಕಿಕೊಳ್ಳಿ. ಸಂಪೂರ್ಣ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿ..

ಕೇವಲ ಚಕ್ಕಲಿಯನ್ನಷ್ಟೇ ಅಲ್ಲದೆ ರಾತ್ರಿ ಉಳಿದಿರುವ ಅನ್ನದಿಂದ ನೀವು ಸಿಹಿಯಾದ ರಸಗುಲ್ಲ ಕೂಡಾ ಮಾಡಬಹುದು. ಮಾಡುವುದುಹೇಗೆದು ಹೇಳುತ್ತೇವೆ ನೋಡಿ. ಮೊದಲಿಗೆ ಉಳಿದ ರೈಸ್ ನ್ನ ಮಿಕ್ಸಿಗೆ ಹಾಕಿ ಪೇಸ್ಟ್ ರೀತಿ ಮಾಡಿಕೊಳ್ಳಿ. ಬಳಿಕ ಅದಕ್ಕೆ ಕಾರ್ನ್ ಫ್ಲೋರ್ ಹಾಗೂ ಮೈದಾ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ತದನಂತರ ಉಂಡೆಗಳನ್ನಾಗಿ ಮಾಡಿ.ಇದಾದ ಬಳಿಕ ಪಾತ್ರೆಯೊಂದಕ್ಕೆ ಒಂದುಕಪ್ ನಷ್ಟು ಸಕ್ಕರೆ ಹಾಕಿ ಹಾಗೂ ಅಷ್ಟೇ ಪ್ರಮಾಣದಲ್ಲಿ ನೀರನ್ನ ಹಾಕಿ ಚೆನ್ನಾಗಿ ಕುದಿಸಿ. ಚೆನ್ನಾಗಿ ನೀರು ಕುಡಿದ ನಂತರ ಕೇಸರಿ ದಳ ಮತ್ತು ಯಾಲಕ್ಕಿ ಪುಡಿಯನ್ನ ಹಾಕಿ, ಈ ಮೊದಲೇ ಮಾಡಿಟ್ಟುಕೊಂಡಿದ್ದ ಉಂಡೆಗಳನ್ನ ಅದೇ ಪಾತ್ರೆಯಲ್ಲ ಹಾಕಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಬೇಯಿಸಿ.ಈಗ ಸಿಹಿ ಸಿಹಿಯಾದ ರಸಗುಲ್ಲ ರೆಡಿ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ.