ವಿಡಿಯೋದಲ್ಲಿ ಕಣ್ಣೀರಿಟ್ಟು ಮನವಿ ಮಾಡಿಕೊಂಡಿದ್ದ ಅನುಶ್ರೀಗೆ ಧೈರ್ಯ ತುಂಬಿದ ಗುಂಡಮ್ಮ ಹೇಳಿದ್ದೇನು ನೋಡಿ..

News
Advertisements

ಸ್ನೇಹಿತರೇ, ಸ್ಯಾಂಡಲ್ವುಡ್ ನಲ್ಲಿ ಹಲ್ ಚಲ್ ಎಬ್ಬಿಸಿರುವ ವಿಷಯದ ಕುರಿತಂತೆ ಖ್ಯಾತ ನಿರೂಪಕಿ ಹಾಗೂ ನಟಿಯೂ ಹಾಗಿರುವ ಅನುಶ್ರೀ ವಿಚಾರಣೆಯನ್ನ ಎದುರಿಸಿದ್ದು, ಬಳಿಕ ವಿಡಿಯೋವೊಂದನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಪೋಸ್ಟ್ ಮಾಡಿ ತಮ್ಮ ನೋವನ್ನ ಕನ್ನಡಿಗರ ಮುಂದೆ ಹೇಳಿಕೊಳ್ಳುವ ಮೂಲಕ ಕಣ್ಣೀರಿಟ್ಟಿದ್ದರು. ತನ್ನ ಸುತ್ತಮುತ್ತಿನವರು ತನ್ನ ಬಗ್ಗೆ ಮಾತನಾಡಿಕೊಳ್ಳುತ್ತಿರುವುದರ, ಅಂತೆಕಂತೆಗಳ ಬಗ್ಗೆ ಮಾತನಾಡಿ, ಈ ರೀತಿಯಾಗಿ ನನ್ನ ಬಗ್ಗೆ ಇಲ್ಲ ಸಲ್ಲದ ಸುದ್ದಿಗಳನ್ನ ಹಬ್ಬಿಸಬೇಡಿ, ಇದರಿಂದ ನನಗೆ ನನ್ನ ಕುಟುಂಬದವರಿಗೆ ನೆಮ್ಮದಿ ಇಲ್ಲದಂತಾಗಿದೆ.

Advertisements

ನಾನು ವಿಚಾರಣೆಗೆ ಹೋದ ಮಾತ್ರಕ್ಕೆ ಅಪರಾಧಿ ಅನ್ನೋ ಹಾಗೆ ಎಂದು ಕೆಲವರು ಬಿಂಬಿಸುತ್ತಿದ್ದಾರೆ. ಆದರೆ ಕನ್ನಡಿಗರಿಗೆ ಮನಸ್ಸು ನೋಯಿಸುವಂತಹ ಯಾವುದೇ ಕೆಲಸವನ್ನ ನಾನು ಮಾಡಿಲ್ಲ..ಮುಂದೆಯೂ ಮಾಡುವುದಿಲ್ಲ ಎಂದು ವಿಡಿಯೋದಲ್ಲಿ ಮನವಿ ಮಾಡಿಕೊಂಡು ಕಣ್ಣೀರು ಹಾಕಿದ್ದರು. ಇನ್ನು ಇದೆ ವಿಷಯವಾಗಿ ಅನುಶ್ರೀ ಅವರ ವಿಡಿಯೋಗೆ ಕಾಮೆಂಟ್ ಮಾಡಿರುವ ಬ್ರಹ್ಮಗಂಟು ಧಾರವಾಹಿ ಖ್ಯಾತಿಯ ನಟಿ ಗೀತಾ ಭಾರತಿ ಭಟ್ ಧೈರ್ಯ ತುಂಬುವ ಮಾತುಗಳನ್ನಾಡಿದ್ದಾರೆ.

ಇನ್ನು ಇದೆ ವಿಚಾರ ಸಂಬಂದಪಟ್ಟಂತೆ, ಇದಕ್ಕೂ ಮೊದಲು ವಿಚಾರಣೆ ಎದುರಿಸಿದ್ದ ಗೀತಾ ಭಾರತಿ ನಾವೆಲ್ಲಾ ನಿಮ್ಮ ಜೊತೆಗೆ ಇದ್ದೇವೆ..ಧೈರ್ಯವಾಗಿ ಎದುರಿಸಿ..ನಮ್ಮ ಪ್ರೀತಿ ಹಾಗೂ ಧೈರ್ಯ ಯಾವಾಗಲು ನಿಮ್ಮ ಜೊತೆಗೆ ಇರುತ್ತದೆ ಎಂದು ಹೇಳುವ ಮೂಲಕ ಅನುಶ್ರೀಗೆ ಧೈರ್ಯ ತುಂಬಿದ್ದಾರೆ. ಇನ್ನು ನಿರೂಪಕಿ ಅನುಶ್ರೀ ಕಣ್ಣೀರು ಹಾಕುತ್ತಾ ಮನವಿ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಅವರ ಅಭಿಮಾನಿಗಳು ಧೈರ್ಯದಿಂದ ಇರಿ ಎಂದು ಕಾಮೆಂಟ್ ಗಳನ್ನ ಮಾಡುತ್ತಿದ್ದಾರೆ.