ಮಣ್ಣಿನ ಹರಕೆ ಹೊತ್ತರೆ ಮಕ್ಕಳಾಗದವರಿಗೆ ಮಕ್ಕಳಾಗುತ್ತೆ ಈ ದೇವಸ್ಥಾನದಲ್ಲಿ.ಎಲ್ಲಿದೆ ಗೊತ್ತಾ ಈ ವಿಶೇಷ ದೇವಾಲಯ.?

Adhyatma
Advertisements

ಹಲವಾರು ಕಾರಣಗಳಿಂದ ಅನೇಕ ದಂಪತಿಗಳಿಗೆ ಮದುವೆಯಾಗಿ ಮೂರ್ನಾಲ್ಕು ವರ್ಷಗಳಾದರೂ ಮಕ್ಕಳ ಭಾಗ್ಯ ಇರುವುದಿಲ್ಲ. ಇನ್ನು ಸಂತಾನ ಫಲಕ್ಕಾಗಿ ಸುತ್ತದಿರುವ ಆಸ್ಪತ್ರೆಗಳು, ದೇವಸ್ಥಾನಗಳು ಇರುವುದಿಲ್ಲ. ಇನ್ನು ಇಲ್ಲೊಂದು ವಿಶೇಷವಾದ ದೇವಸ್ಥಾನವಿದ್ದು ಮಕ್ಕಳಾಗದವರು ಹರಕೆ ಹೊತ್ತುಕೊಂಡರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

Advertisements

ಹೌದು, ಈ ದೇವಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರಲಿದ್ದು, ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಹೋಗುವ ಮಾರ್ಗದಲ್ಲಿ ಬೆಳ್ತಂಗಡಿ ತಾಲ್ಲೂಕು ಬರುತ್ತದೆ. ಅಲ್ಲಿಂದ ಹೋದರೆ ನಡ ಎಂಬ ಗ್ರಾಮ ಬರುತ್ತದೆ. ಇಲ್ಲಿಯೇ ಇರುವುದು ಮಕ್ಕಳ ಭಾಗ್ಯ ಕರುಣಿಸುವ ಸುರ್ಯ ಸದಾಶಿವ ರುದ್ರ ದೇವಸ್ಥಾನ. ಪ್ರಕೃತಿಯ ಮಡಿಲಲ್ಲಿ ಇರುವ ಈ ಸುಂದರ ದೇವಸ್ಥಾನದಲ್ಲಿ ಶಿವನ ಆರಾಧನೆ ನಡೆಯುತ್ತದೆ.

ಋಷಿಗಳ ತಪೋಭೂಮಿಯಾಗಿತ್ತು ಎಂದು ಹೇಳುವ ಈ ದೇವಸ್ಥಾಕ್ಕೆ ಸಾವಿರಾರುವರ್ಷಗಳ ಇತಿಹಾಸವಿದೆ. ಇನ್ನು ಪೌರಾಣಿಕ ಹಿನ್ನಲೆ ಹೊಂದಿರುವ ಈ ಪುಣ್ಯ ಭೂಮಿಯಲ್ಲಿ ಮಹಾನ್ ಬ್ರಹ್ಮರ್ಷಿಗಳಾಗಿದ್ದ ಭೃಗು ಮಹರ್ಷಿಗಳ ಶಿಷ್ಯರೊಬ್ಬರು ಇಲ್ಲಿ ತಪಸ್ಸು ಮಾಡಿದ್ದು, ಆ ತಪಸ್ಸಿಗೆ ಒಲಿದ ಸಾಕ್ಷಾತ್ ಶಿವ ಪಾರ್ವತಿಯರು ಆ ಋಷಿಗೆ ವರದ ರೂಪವಾಗಿ ಲಿಂಗ ರೂಪದಲ್ಲಿ ಇದೆ ಸ್ಥಳದಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆ ಇದೆ. ಇನ್ನು ಇದಕ್ಕೆ ಸಾಕ್ಷಿ ಎಂಬಂತೆ ಶಿಲಾಪಾದದ ಜೊತೆಗೆ ಲಿಂಗ ರೂಪದ ಪ್ರತಿಕೃತಿಗಳು ಇದೆ ಎಂದು ಹೇಳಲಾಗಿದೆ.

ಇನ್ನು ಮತ್ತೊಂದು ಕತೆಯ ಪ್ರಕಾರ ಅರಣ್ಯದಲ್ಲಿ ಸೊಪ್ಪು ಸಂಗ್ರಹ ಮಾಡುವ ಹೆಣ್ಣುಮಗಳೊಬ್ಬಳು ಈ ಪ್ರದೇಶಕ್ಕೆ ಬಂದಿದ್ದು, ಇದೆ ವೇಳೆ ಅಲ್ಲೊಂದು ಕಲ್ಲು ತಾಗಿದ್ದು, ಅದು ಶಿವನ ಲಿಂಗ ರೂಪವಾಗಿ ಶಿಲೆಯಾಗಿದ್ದು, ಅದರಿಂದ ರಕ್ತ ಚಿಮ್ಮಿದ್ದು, ಇದನ್ನು ಗಾಬರಿಗೀಡಾದ ಆ ಹೆಣ್ಣು ಮಗಳು ಸುರಿಯ ಎಂದು ಕರೆದಳಂತೆ. ನಂತರ ಆ ಊರು ಸುರಿಯ ಎಂದು ಹೆಸರಾಯಿತು ಎಂದು ಹೇಳಲಾಗಿದೆ. ಬಳಿಕ ಅದೇ ಶಿಲೆಗೆ ದೇವಾಲಯ ಕಟ್ಟಿ ಪೂಜಿಸಲಾಗುತ್ತಿದೆ ಎಂದು ನಂಬಿಕೆ ಇದೆ.

ಇಂತಹ ಪುಣ್ಯ ಕ್ಷೇತ್ರ ಸುರ್ಯ ದೇವಾಲಯಕ್ಕೆ ನೀವುಹೋದರೆ ನಿಮಗೆ ಮಣ್ಣಿನ ಮೂರ್ತಿಗಳು ಹೆಚ್ಚಾಗಿ ಕಾಣುತ್ತವೆ. ಮಕ್ಕಳ ರೂಪದಲ್ಲಿ ಕಾಣುವ ಈ ಮಣಿನಾ ಮೂರ್ತಿಗಳನ್ನ ಸಂತಾನಕ್ಕಾಗಿ ಹರಕೆ ಹೊತ್ತವರು ಹರಕೆ ಈಡೇರಿದ ಬಳಿಕ ಸಮರ್ಪಿಸಿದ ಮೂರ್ತಿಗಳಾಗಿವೆ ಎಂದು ಹೇಳಲಾಗಿದೆ.

ಇನ್ನು ಸಂತಾನ ಫಲ ಇಲ್ಲದಿರುವವರು, ನಿಮ್ಮ ಮನೆಯಲ್ಲಿಯೇ ಮಕ್ಕಳಾಗಬೇಕೆಂದು ಈ ದೇವರ ಹೆಸರಿನಲ್ಲಿ ಸಂಕಲ್ಪ ಮಾಡಿ ದೇವರಿಗೆ ಅಕ್ಕಿನಾಣ್ಯ ಕಟ್ಟಿಟ್ಟರೆ, ನಿಮ್ಮ ಹರಕೆ ಈಡೇರಿದ ಬಳಿಕ ಈ ದೇವಸ್ಥಾನಕ್ಕೆ ಬಂದು, ಬಿರುಕು ಇಲ್ಲದ ಅವೆ ಮಣ್ಣಿನ ಬೊಂಬೆಗಳನ್ನ ನೀವೇ ತಯಾರಿಸಬಹುದು ಅಥ್ವಾ ಇದೆ ಸ್ಥಳದಲ್ಲಿ ಸಿಗುವ ವಿವಿಧ ರೂಪದ, ಯಾವುದೇ ಲೋಪವಿಲ್ಲದ ಮಣ್ಣಿನ ಬೊಂಬೆಗಳನ್ನ ತೆಗೆದುಕೊಂಡು ತೆಂಗಿನಕಾಯಿ, ಅಕ್ಕಿ ಜೊತೆಗೆ ನೀವು ಮಾಡಿದ ಅಥ್ವಾಖರೀದಿಸಿದ ಮಣ್ಣಿನ ಬೊಂಬೆಯನ್ನ ಹರಿವಾಣದಲ್ಲಿಟ್ಟು ನಿಮ್ಮ ಹರಕೆಯನ್ನ ತೀರಿಸಬಹುದು ಎಂದು ಹೇಳಲಾಗಿದೆ.

ಸುರ್ಯ ಸದಾಶಿವನ ರುದ್ರ ದೇವಸ್ಥಾನಕ್ಕೆ ಹೋಗುವ ಮಾರ್ಗ : ಧರ್ಮಸ್ಥಳದಿಂದ ಸುಮಾರು 13ಕಿಮೀ ಇರುವ ಈ ಸ್ಥಳಕ್ಕೆ, ಉಜಿರೆಯಿಂದ ನಾಲ್ಕು ಕಿಮೀಗಳ ದೂರ ಆಗಲಿದೆ.