ಕೊರೋನಾ ಅಂತ್ಯ ಯಾವಾಗ ಅಂತ ಮತ್ತೊಮ್ಮೆ ಭವಿಷ್ಯ ನುಡಿದ ಕೋಡಿ ಶ್ರಿಗಳು..

News
Advertisements

ಇಡೀ ಜಗತ್ತಿಗೆ ಮದ್ದಿಲ್ಲದ ಕಾಯಿಲೆ ಬರುತ್ತದೆ ಎಂದು ಮೊದಲೇ ಹಾಸನ ತಾಲ್ಲೂಕಿನ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದಿದ್ದರು. ಶ್ರೀಗಳ ಭವಿಷ್ಯವಾಣಿಯಂತೆ ಈಗ ಮಹಾಮಾರಿ ಕೊರೋನಾ ಸೋಂಕು ಭಾರತ ಸೇರಿದಂತೆ ಜಗತ್ತಿನ ಎಲ್ಲಾ ದೇಶಗಳಲ್ಲಿ ಹರಡುತ್ತಿದ್ದು, ಸಾವು ನೋವುಗಳು ಸಂಭವಿಸುತ್ತಿವೆ. ಈಗ ಮತ್ತೆ ಕೋಡಿ ಶ್ರೀಗಳು ಕೊರೋನಾ ಸೋಂಕು ಕುರಿತಂತೆ ಮತ್ತೊಂದು ಭವಿಷ್ಯ ನುಡಿದ್ದಿದ್ದಾರೆ.

Advertisements

ಈ ಸೋಂಕಿನಿಂದ ಹೆಚ್ಚಾಗಿ ಭಾರತದಲ್ಲಿ ಅಷ್ಟೇನೂ ದೊಡ್ಡ ಮಟ್ಟದ ಸಾವು ನೋವುಗಳು ಸಂಭವಿಸುವುದಿಲ್ಲ. ಭಾರತದಲ್ಲಿ ಮೇ ಅಂತ್ಯಕ್ಕೆ ಈ ಕೊರೋನಾ ಸೋಂಕು ಕೊನೆಯಾಗಲಿದ್ದು, ಗಂಡಾಂತರವೇನೂ ಇಲ್ಲ. ಆದರೆ ಈ ವ್ಯಾದಿ ಶೀಘ್ರವಾಗಿ ದೂರವಾಗಬೇಕಾದ್ರೆ ಪ್ರಕೃತಿ ಹಾಗೂ ಸರ್ಕಾರದ ಜೊತೆ ಜನರು ಎಚ್ಚರದಿಂದ ಸಹಕರಿಸಬೇಕು ಎಂದು ಭವಿಷ್ಯ ನುಡಿದಿದ್ದಾರೆ.

ಇನ್ನು ಕರ್ನಾಟಕದ ಮಟ್ಟಿಗೆ ಬಂದರೆ, ಹೆಚ್ಚಿನ ತೊಂದರೆ ಇಲ್ಲ. ಆದ್ರೆ ಜನರು ತಮ್ಮ ಬೇಜವಾಬ್ದಾರಿಯಿಂದ ಸಮಸ್ಯೆ ಸೃಷ್ಟಿ ಮಾಡದೆ, ಸರ್ಕಾರ ಮತ್ತು ವೈದ್ಯರ ಸಲಹೆಗಳನ್ನ ಜನರೂಪಾಲಿಸಬೇಕು ಎಂದು ಕೊಡಿ ಶ್ರೀಗಳು ಹೇಳಿದ್ದಾರೆ. ನಾಡವನ್ನಾಳುವ ಅರಸನಿಗೆ ಯಾವುದೇ ಕಂಟಕ ಇಲ್ಲ. ಆದ್ರೆ, ಕೆಲ ಮಂತ್ರಿಗಳಿಗೆ ಹಾಗೂ ಜನರಿಗೆ ಮಾತ್ರ ಕಂಟಕ ಇದೆ ಎಂದು ಕೊಡಿ ಶ್ರೀಗಳು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ.

ಇನ್ನು ಜಗತ್ತಿನ ದೊಡ್ಡಣ್ಣ ಎನಿಸಿಕೊಂಡಿರುವ ಅಮೇರಿಕಾ ಈಗಾಗಲೇ ಕೊರೋನಾ ಸೋಂಕಿನಿಂದ ನಲುಗಿ ಹೋಗಿದ್ದು, ಈ ದೇಶಕ್ಕೆ ಗಂಡಾಂತರ ಕಟ್ಟಿಟ್ಟ ಬುತ್ತಿ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ. ‘ಸಿರಿವಂತ ಮಗನುಟ್ಟಿ..ಆಳುವನು ಮುನಿಪುರವ..ಯುದ್ದವಿಲ್ಲದೆ ನುಡಿಯೆ ಪುರವೆಲ್ಲ ಕೂಳಾದೀತು..ಇನ್ನು ಇಲ್ಲಿ ಸಿರಿವಂತನ ಮಗ ಎಂದರೆ, ಅಮೆರಿಕಾ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್, ಮುನಿಪುರ ಎಂದರೆ ಅಮೆರಿಕಾ. ಅಂದರೆ ಶ್ರೀಗಳ ಈ ಭವಿಷ್ಯವಾಣಿಯ ಅರ್ಥ ಅಮೆರಿಕಕ್ಕೆ ದೊಡ್ಡ ಗಂಡಾಂತರ ಇದೆ ಎಂದು. ಹೀಗೆ ಯುದ್ಧ ಇಲ್ಲದೆಯೇ ಜನರು ಮಡಿಯುತ್ತಾರೆ ಎಂದು ಕೋಡಿ ಶ್ರೀಗಳು ಕಾಲ ಜ್ಞಾನ ಭವಿಷ್ಯ ನುಡಿದಿದ್ದಾರೆ. ಇಡೀ ಜಗತ್ತಿಗೆ ಲೋಕ ಪೀಡಕವಾಗಿ ಬಂದಿರುವ ಈ ಕಾಯಿಲೆ, ಶೀತ ವಾತಾವರಣದ ಪ್ರದೇಶಗಳಿಗೆ ಹೆಚ್ಚು ಹಾನಿ ಮಾಡುತ್ತದೆ ಎಂದು ಶ್ರೀಗಳು ತಮ್ಮ ಭವಿಷ್ಯವಾಣಿಯಲ್ಲಿ ಹೇಳಿದ್ದಾರೆ.