ಈತನ ಒಂದು ಸೆಲ್ಫಿ ಫೋಟೋಗಾಗಿ ಕ್ಯೂನಲ್ಲಿ ಗಂಟೆಗಟ್ಟಲೆ ನಿಲ್ಲುತ್ತಾರೆ ಸುಂದರಿಯರು ! ಇವನ್ಯಾರು ಗೊತ್ತಾ.?

Advertisements

ಇದು ಇಂಟರ್ನೆಟ್ ಜಮಾನ. ಪ್ರತಿಭೆ ಒಂದಿದ್ದರೆ ಯಾರು ಬೇಕಾದ್ರು ರಾತ್ರೋ ರಾತ್ರಿ ಸ್ಟಾರ್ ಆಗಿಬಿಡಬಹುದು. ಎಲೆಮರೆಕಾಯಿಯಂತಿರುವ ಎಷ್ಟೋ ಪ್ರತಿಭೆಗಳಿಗೆ ಸಾಮಾಜಿಕ ಜಾಲತಾಣಗಳು ವೇದಿಕೆಯಾಗಿವೆ. ಆದರೆ ಪ್ರತಿಭೆ ಮುಖ್ಯವೇ ಹೊರತು ಅವರು ಹೇಗಿದ್ದಾರೆ ಅಂತ ಅಲ್ಲ. ಹಾಗೆಯೇ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಒಂದೇ ಒಂದು ಆಲ್ಬಮ್ ನಿಂದ ರಾತ್ರೋ ರಾತ್ರಿ ಸ್ಟಾರ್ ಆಗಿಬಿಟ್ಟಿದ್ದಾನೆ.

[widget id=”custom_html-4″]

Advertisements

ಹೌದು, ರಾತ್ರೋ ರಾತ್ರೋ ಫೇಮಸ್ ಆದ ವ್ಯಕ್ತಿ ಹೆಸರು ಅಲೋಮ್ ಎಂದು. ಬಾಂಗ್ಲಾದೇಶದವರು. ಅಷ್ಟೇನೂ ರೂಪವಂತನ್ನಲ್ಲದ ಈ ವ್ಯಕ್ತಿಯ ಫೋಟೋಗಾಗಿ ಸುಂದರ ಯುವತಿಯರು ಸಾಲಾಗಿ ಕ್ಯೂ ನಿಲ್ಲುತ್ತಾರೆ ಎಂದರೆ ಅರ್ಥ ಮಾಡಿಕೊಳ್ಳಿ. ಈತನ ಹವಾ ಹೇಗಿದೆಯಂತ..

[widget id=”custom_html-4″]

ಅಲೋಮ್ ಸ್ಟಾರ್ ಆಗಿದ್ದು ಹೇಗೆ.? ನೋಡಲು ಅಷ್ಟೇನೂ ಸ್ಪುರದ್ರೂಪಿಯಲ್ಲದ ಈತ, ಪ್ರತಿಭೆಯಿದ್ದರೂ ಅವಕಾಶಗಳು ಸಿಗದೇ ತುಂಬಾ ಕಷ್ಟಪಟ್ಟಿದ್ದಾರೆ. ಕೆಲವು ವರ್ಷಗಳ ಕಾಲ ಒಂದೊತ್ತಿನ ಊಟಕ್ಕೂ ಕಷ್ಟಪಟ್ಟಿರುವ ಈ ಅಲೋಮ್, ಬೇರೆ ಬೇರೆ ಕೆಲಸಗಳನ್ನ ಮಾಡಿಕೊಂಡು, ತನ್ನ ಕೆರಿಯರ್ ನತ್ತ ಮುನ್ನುಗ್ಗುತ್ತಾನೆ. ಇನ್ನು ತಕ್ಕ ಪ್ರತಿಭೆಯಿದ್ದರೂ ನೋಡಲು ಚೆನ್ನಾಗಿಲ್ಲದ ಕಾರಣ ಚಿತ್ರರಂಗದಲ್ಲೂ ಅವಕಾಶ ಸಿಗುವುದಿಲ್ಲ.

[widget id=”custom_html-4″]

ಏನಾದರು ಮಾಡಲೇಬೇಕು ಎಂಬ ಹಠದಿಂದ ಅಲೋಮ್ ಆಲ್ಬಮ್ ಒಂದನ್ನ ಮಾಡಿ ಯುಟ್ಯೂಬ್‌ನಲ್ಲಿ ಅಪ್ಲೋಡ್ ಮಾಡುತ್ತಾರೆ. ವೈರಲ್ ಆದ ಇವರ ಆಲ್ಬಮ್ ನ ಹಾಡು ನೋಡಿ ಜನ ಫಿದಾ ಆಗಿಬಿಡುತ್ತಾರೆ. ಹೀಗೆ ನಿಧಾನವಾಗಿ ಅಲೋಮ್ ಬಾಂಗ್ಲಾದಲ್ಲಿ ಸ್ಟಾರ್ ಆಗುತ್ತಾನೆ. ಇನ್ನು ಇಷ್ಟೆಲ್ಲಾ ಕಷ್ಟದ ನಡುವೆಯೂ ಬೆಳೆದುಬಂದ ಅಲೋಮ್ ೫೦೦ ಆಲ್ಬಮ್ ಗಳಲ್ಲಿ ನಟಿಸಿದ್ದಾರೆ. ಜೊತೆಗೆ ಹಲವಾರು ಬಂಗಾಳಿ ಭಾಷೆಗಳಲ್ಲಿಯೂ ಕೂಡ ನಟಿಸಿದ್ದಾರೆ.

ಯಾವುದೇ ಸೆಲೆಬ್ರೆಟಿಗೆ ಕಡಿಮೆ ಇಲ್ಲ ಅನ್ನುವಂತೆ ಸಂಭಾವನೆ ಪಡೆಯುತ್ತಾರೆ. ಇವರ ಒಂದು ವರ್ಷದ ಸಂಪಾದನೆ ೨ ಕೋಟಿಗಿಂತಲೂ ಅಧಿಕ ಇದೆ. ಈತನಿಗೆ ಬಾಂಗ್ಲಾದೇಶದಲ್ಲಿ ಕಿಂಗ್ ಆಫ್ ರೋಮ್ಯಾನ್ಸ್ ಮೇಬ ಬಿರುದನ್ನ ಕೂಡ ನೀಡಿದ್ದಾರೆ. ಸುಂದರನೇನು ಅಲ್ಲದ ಈತನ ಒಂದು ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಸುಂದರ ಹುಡುಗಿಯರು ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಕಾಯುತ್ತಾರೆ. ಅಷ್ಟರ ಮಟ್ಟಿಗೆ ಅಲೋಮ್ ನನ್ನ ಹುಡುಗಿಯರು ಇಷ್ಟಪಡುತ್ತಾರೆ. ಪ್ರತಿಭೆಯೊಂದಿದ್ದರೆ ಏನೆಲ್ಲಾ ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ಈ ಅಲೋಮ್ ಒಂದು ನೈಜ ನಿದರ್ಶನ.