ನೆನ್ನೆ ಇರ್ಫಾನ್ ಖಾನ್, ಇಂದು ಮತ್ತೊಬ್ಬ ಸ್ಟಾರ್ ನಟ ವಿಧಿವಶ

Cinema
Advertisements

ನೆನ್ನೆ ಬುಧವಾರ ಬೆಳಿಗ್ಗೆಯಷ್ಟೇ ತನ್ನ ಅಭಿನಯದಿಂದಲೇ ಲಕ್ಷಾಂತರ ಅಭಿಮಾನಿಗಳನ್ನ ಹೊಂದಿದ್ದ ಖ್ಯಾತ ನಟ ಇರ್ಫಾನ್ ಖಾನ್ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದ ಕಾರಣ ವಿಧಿವಶರಾಗಿದ್ದರು. ಇದರ ನಡುವೆಯೇ ಬಾಲಿವುಡ್ ನ ಮತ್ತೊಬ್ಬ ಸೂಪರ್ ಸ್ಟಾರ್ ನಟ ನಿಧನರಾಗಿದ್ದು ಬಾಲಿವುಡ್ ಚಿತ್ರರಂಗಕ್ಕೆ ದೊನೆನ್ನೆ ಡ್ಡ ಆಘತವಾಗಿದೆ.

Advertisements

ಹೌದು, ಬಾಲಿವುಡ್ ನ ಸೂಪರ್ ಸ್ಟಾರ್ ನಟರಾಗಿದ್ದ ರಾಜ್ ಕಪೂರ್ ಅವರ ಪುತ್ರ ಖ್ಯಾತ ನಟ ರಿಷಿ ಕಪೂರ್ ಮುಂಬೈನ ಎಚ್‍ಎನ್ ರಿಯಲಯನ್ಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಇನ್ನು ಇದಕ್ಕೆ ಮೊದಲು ಕ್ಯಾನ್ಸರ್ ನಿಂದ ಚಿಕಿತ್ಸೆ ಪಡೆಯುತ್ತಿದ್ದ ರಿಷಿ ಕಪೂರ್ ಒಂದು ವರ್ಷದ ಹಿಂದೆಯೇ ಅಮೇರಿಕಾದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಮತ್ತೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದ 67 ವರ್ಷದ ರಿಷಿ ಕಪೂರ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಇಂದು ನಿಧನರಾಗಿದ್ದಾರೆ.

ಇನ್ನು ಖ್ಯಾತ ನಟ ಅಮಿತಾ ಬಚ್ಚನ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ರಿಷಿ ಕಪೂರ್ ಇನ್ನಿಲ್ಲ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿದ್ದ ರಿಷಿ ಕಪೂರ್ ಅವರು ಏಪ್ರಿಲ್ ೨ರಿಂದ ಅನಾರೋಗ್ಯವಿದ್ದ ಕಾರಣ ಏನೂ ಕೂಡ ಪೋಸ್ಟ್ ಮಾಡಿರಲಿಲ್ಲ. ಇನ್ನು ತಮ್ಮ ಮುಂದಿನ ಹಾಲಿವುಡ್ ಚಿತ್ರ ‘ದಿ ಇಂಟರ್ನ್’ ಎಂಬ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಜೊತೆಯಾಗಿ ನಟಿಸುತ್ತಿರುವುದಾಗಿ ತಿಳಿಸಿದ್ದರು. ಆದರೆ ಈ ಚಿತ್ರ ಪೂರೈಸುವುದಕ್ಕೆ ಮೊದಲೇ ಇಹಲೋಕ ತ್ಯಜಿಸಿದ್ದಾರೆ.