ಲಾಕ್ ಡೌನ್ ನಡುವೆ ಕಿತ್ತಾಡಿಕೊಂಡ ನಟ ಜೈ ಜಗದೀಶ್ ವಿರುದ್ಧ ಎಫ್‍ಐಆರ್

Cinema
Advertisements

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ಹಾಗೂ ಬಿಗ್ ಬಾಸ್ ಸಂಚಿಕೆ 7ರಲ್ಲಿ ಸ್ಪರ್ಧಿಯೂ ಆಗಿದ್ದ ಜೈ ಜಗದೀಶ್ ಅವರ ವಿರುದ್ದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಲಚಿತ್ರ ಕಾರ್ಮಿಕರಿಗೆ ಅಗತ್ಯವಸ್ತುಗಳು ಸೇರಿದಂತೆ ದಿನ ಬಳಕೆಯ ವಸ್ತುಗಳನ್ನ ನೀಡುವ ಸಲುವಾಗಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾಗಿರುವ ಸಾ.ರಾ.ಗೋವಿಂದು ಅವರನ್ನ ಅವ್ಯಾಚ ಶಬ್ದಗಳಿಂದ ನಿಂದಿಸಿರುವ ಪರಿಣಾಮ ಹಿರಿಯ ನಟ ಜೈಜಗದೀಶ್ ರವರ ಮೇಲೆ ಪ್ರಕರಣ ದಾಖಲಾಗಿದೆ.

Advertisements

ನಮಗೆಲ್ಲಾ ಗೊತ್ತಿರುವಂತೆ ಲಾಕ್ ಡೌನ್ ಆಗಿರುವ ಪರಿಣಾ ಧಾರಾವಾಹಿಗಳು, ಸಿನಿಮಾ ಚಿತ್ರೀಕರಣಗಳು ನಿಂತುಹೋಗಿವೆ. ಇದರ ನೇರ ಪರಿಣಾಮ ಕಲಾವಿದರು, ತಂತ್ರಜ್ಞರು ಸೇರಿದಂತೆ ಸಿನಿಮಾ ಕಾರ್ಮಿಕರ ಮೇಲೆ ಬಿದ್ದಿದೆ. ಹೀಗೆ ಸಂಕಷ್ಟದಲ್ಲಿರುವ ಮಂದಿಗೆ ಚಲಚಿತ್ರ ವಾಣಿಜ್ಯ ಮಂಡಳಿ ಸಹಾಯಕ್ಕೆ ನಿಂತಿದ್ದು, ನಿರ್ಮಾಪಕ ಸಾ.ರಾ.ಗೋವಿಂದು ಮತ್ತು ಚಲನಚಿತ್ರ ವಾಣಿಜ್ಯಮಂಡಳಿ ಸದಸ್ಯರ ನೇತೃತ್ವದಲ್ಲಿ ಆಹಾರ ಕಿಟ್ ವಿತರಿಸುವ ಸಲುವಾಗಿ ರಾಜ್ಯ ಸರ್ಕಾರದೊಂದಿಗೆ ಮಾತನಾಡಿ ಸಂಕಷ್ಟದಲ್ಲಿರುವವರ ಸಹಾಯಕ್ಕೆ ನಿಂತಿದ್ದರು.

ಇನ್ನು ಇದೆ ವಿಚಾರವಾಗಿ ನಟ ಜೈ ಜಗದೀಶ್ ಮತ್ತು ಸಾ.ರಾ.ಗೋವಿಂದು ನಡುವೆ ಜಗಳ ಶುರುವಾಗಿದ್ದು, ಸಾವಿರಾರು ಜನಕ್ಕೆ ಅನ್ನ ನೀಡಿದ ನಿರ್ಮಾಪಕರು ಅನ್ನದಾತರು, ಹಾಗಾಗಿ ನಮಗೆ ಆಹಾರದ ಕಿಟ್ ನೀಡಿ ಅವಮಾನ ಮಾಡಬೇಡಿ ಎಂದು ಹೇಳಿದ್ದರು. ಜೊತೆಗೆ ಅವ್ಯಾಚ ಶಬ್ದಗಳಿಂದ ಸಾ.ರಾ.ಗೋವಿಂದು ಅವರನ್ನ ನಿಂದಿಸಿದ್ದರು. ಇನ್ನು ಜೈ ಜಗದೀಶ್ ರವರು ಮಾತನಾಡಿರುವ ಆಡಿಯೋ ಕ್ಲಿಪ್ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಇನ್ನು ಜೈ ಜಗದೀಶ್ ರವರ ಈ ವರ್ತನೆಯಿಂದ ಅಸಮಾಧಾನಗೊಂಡ ಸಾ.ರಾ.ಗೋವಿಂದುರವರು ಅವರು ಉದ್ದೇಶಪೂರ್ವಕವಾಗಿಯೇ ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನ ಮಾಡಿದ್ದಾರೆ. ತೀರಾ ಕೆಳಮಟ್ಟದ ಭಾಷೆಯಲ್ಲಿ ನನ್ನನ್ನ ನಿಂದಿಸಿದ್ದಾರೆ. ಹಾಗಾಗಿ ನಟ ಜೈ ಜಗದೀಶ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಪ್ರಕರಣ ದಾಖಲಿಸಿದ್ದಾರೆ.