ಖ್ಯಾತ ನಟಿ ಸಿತಾರಾ ಇನ್ನು ಮದ್ವೆಯಾಗದಿರಲು ಕಾರಣ ಆ ಒಬ್ಬವ್ಯಕ್ತಿ!ಮದ್ವೆ ಬಗ್ಗೆ ನಟಿ ಹೇಳಿದ್ದೇನು ಗೊತ್ತಾ?

Cinema
Advertisements

ಮುದ್ದು ಮುಖದ ಸುಂದರಿ ಪಂಚಭಾಷೆ ತಾರೆ ಖ್ಯಾತ ನಟಿ ಸಿತಾರಾ ಅವರು ಕನ್ನಡಿಗರಿಗೆ ಚಿರಪರಿಚಿತ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿರುವ ನಟಿ ಸಿತಾರಾ ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.

Advertisements

೪೬ ವರ್ಷ ವಯಸ್ಸಾಗಿದ್ದರೂ, ಈಗಲೂ ಚಿರ ಯವ್ವನೆಯಂತೆ ಕಾಣುವ ಖ್ಯಾತ ನಟಿ ಸಿತಾರಾ ಅವರಿಗೆ ಇನ್ನು ಮದ್ವೆನೇ ಆಗಿಲ್ಲ ಅಂದರೆ ನೀವು ನಂಬೋದಿಲ್ಲ. ಕೌಟಂಬಿಕ ಚಿತ್ರಗಳಿಂದಲೇ ಖ್ಯಾತರಾಗಿರುವ ಸಿತಾರಾ ಅವರು 46ವರ್ಷ ವಯಸ್ಸಾದರೂ ಇನ್ನು ಮದುವೆ ಆಗಿಲ್ಲ ಎಂಬುದಕ್ಕೆ ಸಂದರ್ಶನವೊಂದರಲ್ಲಿ ಅವರೇ ಹೇಳಿರುವ ಹಾಗೆ ಕಾರಣವೂ ಇದೆ. ಸದ್ಯಕ್ಕೆ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿರುವ ನಟಿ, ೯೦ರ ದಶಕದಲ್ಲಿ ಬೇರೆ ಬೇರೆ ಭಾಷೆಗಳ ಚಿತ್ರಗಳಲ್ಲಿ ಟಾಪ್ ನಟಿಯಾಗಿ ಮರೆದವರು.

ಸಾಹಸಸಿಂಹ ವಿಷುವರ್ಧನ್ ಅವರು ಅಭಿನಯಿಸಿದ್ದ ಹಾಲುಂಡ ತವರು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಈ ಚಿತ್ರದ ಸಕ್ಸಸ್ ಬಳಿಕ ಹಲವಾರು ಚಿತ್ರಗಳಲ್ಲಿ ನಟಿಸಿ ಮಿಂಚಿದ್ದವರು. ಖ್ಯಾತ ನಟಿ ಸಿತಾರಾ ಅವರು ಕೇರಳದ ಕೀಲಿಮನೂರ್ ಎಂಬಲ್ಲಿ ಎ.ಆರ್.ಪರಮೇಶ್ವರಂ ನಾಯರ್ ಮತ್ತು ವಲ್ಸಲಾ ನಾಯರ್ ದಂಪತಿಯ ಮಗಳಾಗಿ ಜನಿಸಿದ್ರು. ಇನ್ನು ಮುದ್ದುಮುಖದ ಸುಂದರಿಯಾಗಿದ್ದ ಸಿತಾರಾ ಕಾಲೇಜು ಓದುವಾಗಲೇ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ರು.

ಇನ್ನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕೆಲವೇ ದಿನಗಳಲ್ಲಿ ಫೇಮಸ್ ಆದ ನಟಿ ಸಿತಾರಾ ತಂದೆಯ ಜೊತೆಯಾಗಿಯೇ ಸಿನಿಮಾ ಚಿತ್ರೀಕರಣಕ್ಕೆ ಹೋಗುತ್ತಿದ್ದು, ತಂದೆಗೂ ಕೂಡ ಮಗಳೆಂದರೆ ಪಂಚಪ್ರಾಣವಾಗಿತ್ತು.ಆದರೆ ತನ್ನ ಪ್ರೀತಿಯ ತಂದೆ ತೀರಿಕೊಂಡಾಗ ಸೀತಾರಾವರಿಗೆ ದೊಡ್ಡ ಆಘಾತವೇ ಆಗಿತ್ತು. ತಮ್ಮ ತಂದೆಯನ್ನ ಕಳೆದುಕೊಂಡ ನೋವಿನಲ್ಲಿ ಚಿತ್ರರಂಗದಿಂದ ದೂರ ಉಳಿದುಬಿಟ್ಟರು. ಆದರೆ ತಾವು ಮದುವೆಯಾಗಿ ಒಂದು ಹೊಸ ಜೀವನ ರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ ಮಾತ್ರ ನಟಿ ಸೀತಾರಾವರು ಮಾಡಿಯೇ ಇಲ್ಲ. ಹಾಗೆಯೆ ಕಾಲ ಮುಂದಕ್ಕೆ ಹೋಯಿತು. ಮತ್ತೆ ಸಿನಿಮಾ ರಂಗಕ್ಕೆ ಮರಳಿದ ಸಿತಾರಾ ತಮ್ಮ ಮದುವೆಯ ಬಗ್ಗೆ ಮರೆತು ಬಿಟ್ಟರೇನೋ ಅನ್ನುವಷ್ಟರ ಮಟ್ಟಿಗೆ ಬ್ಯುಸಿಯಾಗಿಬಿಟ್ಟರು.

ಇನ್ನು ನಟಿ ಸಿತಾರಾ ಅವರೇ ಹೇಳಿರುವ ಹಾಗೆ, ಅಪ್ಪ ಇದ್ದಿದ್ದರೆ ನನಗೆ ಮದುವೆ ಮಾಡುತ್ತಿದ್ದರು. ಆದರೆ ಅದು ಆಗಲಿಲ್ಲ. ಕೆಲವು ವರ್ಷಗಲ್ ಹಿಂದೆ ಸಿತಾರಾ ಅವರಿಗೆ ಮದುವೆ ಆಗಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆದರೆ ಸಿತಾರಾ ಅವರೇ ಹೇಳಿರುವ ಹಾಗೆ, ನನಗಿನ್ನೂ ಮದ್ವೆ ಆಗಿಲ್ಲ, ಒಂದು ವೇಳೆ ನಾನು ಮದ್ವೆಯಾದರೆ ಅದನ್ನ ಎಲ್ಲರಿಗೂ ತಿಳಿಸುತ್ತೇನೆ ಎಂದು ೪೬ ವರ್ಷದ ಸಿತಾರಾ ಅವರು ಹೇಳಿದ್ದಾರೆ.