ರಾಜ್ಯಸರ್ಕಾರದಿಂದ ಗೃಹಿಣಿಯರಿಗೆ ಸಿಹಿ ಸುದ್ದಿ.?

Advertisements

ಕೊರೋನಾ ಹಿನ್ನಲೆಯಲ್ಲಿ ಇಡೀ ದೇಶವೇ ಸ್ಥಬ್ದವಾಗಿದ್ದು, ಲಾಕ್ ಡೌನ್ ಮಾಡಲಾಗಿತ್ತು. ಇಡೀ ದೇಶದಾದ್ಯಂತ ಲಾಕ್ ಡೌನ್ ಹೇರಿದ್ದ ಕಾರಣ ಯಾವುದೇ ಸಿನಿಮಾ, ಧಾರಾವಾಹಿಗಳ ಚಿತ್ರೀಕರಣಕ್ಕೆ ಅವಕಾಶ ಇರಲಿಲ್ಲ. ಈಗ ಒಂದೊಂದೇ ವಿಭಾಗದಲ್ಲಿ ಲಾಕ್ ಡೌನ್ ನ್ನ ರಾಜ್ಯ ಸಾರ್ಕಾರ ಸಡಿಲ ಮಾಡುತ್ತಿದ್ದು, ರಾಜ್ಯದ ಗೃಹಿಣಿಯರಿಗೆ ಖುಷಿ ಸುದ್ದಿಯೊಂದನ್ನ ಕೊಟ್ಟಿದೆ.

Advertisements

ಹೌದು, ಚಿತ್ರೀಕರಣವಿಲ್ಲದೆ ಮಹಿಳೆಯರ ಅಚ್ಚುಮೆಚ್ಚಿನ ಸೀರಿಯಲ್ ಗಳು ನಿಂತುಹೋಗಿದ್ದು ಹಳೆಯ ಎಪಿಸೋಡ್ ಗಳನ್ನ ಕಿರುತೆರೆ ವಾಹಿನಿಗಳಲ್ಲಿ ಪ್ರಸಾರ ಮಾಡಲಾಗುತಿತ್ತು. ಈಗ ಸರ್ಕಾರ ಲಾಕ್ ಡೌನ್ ಸಡಿಲಗೊಳಿಸುತ್ತಿರುವ ಹಿನ್ನೆಲಯಲ್ಲಿ ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರ ಬಳಿ ಮನವಿ ಮಾಡಲಾಗಿತ್ತು.

ಇನ್ನು ಸೀರಿಯಲ್ ಗಳ ಚಿತೀಕರಣಕ್ಕೆ ಕಂದಾಯ ಸಚಿವರಾಗಿರುವ ಆರ್.ಆಶೋಕ್ ರವರು ಅನುಮತಿ ನೀಡಿದ್ದಾರೆ ಎಂದು ಹೇಳಲಾಗಿದ್ದು,ಸರ್ಕಾರದ ಕೆಲ ಷರತ್ತುಗಳ ಮೇರೆಗೆ ಧಾರಾವಾಹಿಗಳ ಚಿತ್ರೀಕರಣ ಮಾಡಬಹುದಾಗಿದೆ. ಇನ್ನು ಕೇವಲ ಒಳಂಗಾಣ ಚಿತ್ರೀಕರಣಕ್ಕೆ ಮಾತ್ರ ಅನುಮತಿ ದೊರೆತಿದ್ದು, ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ನೀಡಿಲ್ಲ ಎಂದು ಹೇಳಲಾಗಿದೆ.

ಇನ್ನು ತತ್ ಕ್ಷಣವೇ ಕಿರುತೆರೆ ಧಾರಾವಾಹಿಗಳ ಚಿತ್ರೀಕರಣ ಪ್ರಾರಂಭ ಮಾಡಬಹುದಾದರೂ ಲಾಕ್ ಡೌನ್ ಪರಿಣಾಮ ಕಲಾವಿದರು, ತಂತ್ರಜ್ನ್ಯರು ಬೇರೆ ಬೇರೆ ಕಡೆಗಳಲ್ಲಿ ಇರುವುದರಿಂದ, ಎಲ್ಲರನ್ನ ಒಟ್ಟಿಗೆ ಸೇರಿಸಿ ಚಿತ್ರೀಕರಣದ ರೂಪರೇಷೆಗಳನ್ನ ಹಾಕಿಕೊಂಡು ಸೀರಿಯಲ್ ಗಳ ಚಿತ್ರೀಕರಣ ನಡೆಸಲಾಗುವುದು ಎಂದು ಹೇಳಲಾಗಿದೆ.

ಇನ್ನು ಸರ್ಕಾರದಿಂದ ಮೇ 11ರಿಂದಲೇ ಶೂಟಿಂಗ್ ನಡೆಸಲು ಅನುಮತಿ ದೊರೆತಿದ್ದರೂ, ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ನ ಕೆಲವು ವಾಹಿನಿಗಳು, ನಿರ್ಮಾಪಕರು, ತಂತ್ರಜ್ನ್ಯರ ಜೊತೆ ಚರ್ಚೆ ಮಾಡಿ ಮೇ 25ರಿಂದ ಧಾರಾವಾಹಿಗಳ ಚಿತ್ರೀಕರಣ ಪ್ರಾರಂಭವಾಗುವುದು ಎಂದು ಹೇಳಲಾಗಿದೆ. ಇನ್ನು ಚಿತ್ರೀಕರಣದ ಜಾಗದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಸುವುದು, ಮಾಸ್ಕ್ ಧರಿಸುವುದು ಖಡ್ಡಾಯವಾಗಿದೆ.