ಲಾಕ್ ಡೌನ್ ವೇಳೆ ಚುನಾವಣೆ ಕುರಿತು ಮಾತನಾಡಿದ ಅಂಬಿ ಪುತ್ರ ! ಅಭಿಷೇಕ್ ಅಂಬರೀಷ್ ಹೇಳಿದ್ದೇನು ಗೊತ್ತಾ?

Cinema
Advertisements

ಕನ್ನಡ ಚಿತ್ರರಂಗದ ಹಿರಿಯ ನಟ ರಾಜಕಾರಣಿ ರೆಬೆಲ್ ಸ್ಟಾರ್ ಅಂಬರೀಷ್ ರವರ ಬಳಿಕ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಪರವಾಗಿ ನಿಂತಿದ್ದ ಸುಮಲತಾ ಅಂಬರೀಷ್ ರವರು ಭರ್ಜರಿಯಾಗಿ ಜಯ ಸಾಧಿಸಿದ್ದರು. ಇದಾದ ಬಳಿಕ ಅಭಿಷೇಕ್ ಅಂಬರೀಷ್ ರಾಜಕೀಯಕ್ಕೆ ಬರ್ತಾರೆ, ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಹಲವಾರು ಬರಿ ಕೇಳಿಬಂದಿದ್ದವು.

Advertisements

ಈಗ ಇದಕ್ಕೆಲ್ಲಾ ಸ್ಪಷ್ಟನೆ ಕೊಟ್ಟಿದ್ದಾರೆ ಮರಿ ರೆಬೆಲ್ ಸ್ಟಾರ್. ಲಾಕ್ ಡೌನ್ ಆಗಿರುವ ಹಿನ್ನಲೆಯಲ್ಲಿ ಇತ್ತೀಚೆಗಷ್ಟೇ ಮಂಡ್ಯ ಜಿಲ್ಲೆಯ ಗೆಜ್ಜಲಗೆರೆ ಎಂಬಲ್ಲಿ ಸಂಕಷ್ಟದಲ್ಲಿರುವ ಬಡವರಿಗೆ ಆಹಾರದ ಕಿಟ್ ಗಳನ್ನ ವಿತರಣೆ ಮಾಡಿದ್ದಾರೆ. ಇದೆ ವೇಳೆ ತಾವು ರಾಜಕೀಯ ಪ್ರವೇಶ ಮಾಡುವ ಸುದ್ದಿಗಳ ಕುರಿತು ಮಾತನಾಡಿದ ನಟ ಅಭಿಷೇಕ್ ನಾನು ಚಿತ್ರರಂಗದಲ್ಲಿಯೇ ಮುಂದುವರಿಬೇಕೆಂದು ನಿರ್ಧಾರ ಮಾಡಿ ಆಗಿದೆ.

ರಾಜಕೀಯ ಪ್ರವೇಶ ಮಾಡುವ, ಚುನಾವಣೆಗೆ ಸ್ಪರ್ಧೆ ಮಾಡುವ ಸುದ್ದಿಗಳೆಲ್ಲಾ ಸುಳ್ಳು. ಇನ್ನು ಮುಂದೆ ಬರುವ ಚುನಾವಣೆಯಲ್ಲಿ ಮಂಡ್ಯದ ಮದ್ದೂರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂಬುದು ಸುಳ್ಳು ಎಂದು ಹೇಳಿರುವ ಅಭಿಷೇಕ್ ಅಂಬರೀಷ್ ರವರು ನಾನು ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಕೇವಲ ಸಿನಿಮಾಗಳ ಬಗ್ಗೆ ಮಾತ್ರ ನನ್ನ ಬಳಿ ಕೇಳಿ, ರಾಜಕೀಯದ ವಿಷಯವಿದ್ದರೆ ನನ್ನ ತಾಯಿಯವರ ಬಳಿ ಕೇಳಿ ಎಂದು ಹೇಳಿದ್ದಾರೆ. ಸ್ನೇಹಿತರೆ ಮರಿ ರೆಬೆಲ್ ಸ್ಟಾರ್ ಚುನಾವಣೆಯ ಕುರಿತು ಮಾತನಾಡಿರುವುದರ ಬಗ್ಗೆ ನೀವ್ ಏನ್ ಹೇಳ್ತೀರಾ.?ಕಾಮೆಂಟ್ ಮಾಡಿ ತಿಳಿಸಿ..