ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ-ಯಾರೆಲ್ಲಾ ಬಂದಿದ್ರು ಈ ಫೋಟೋಸ್ ನೋಡಿ

Cinema
Advertisements

ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಅದ್ದೂರಿ ಮದುವೆ ಸಮಾರಂಭಗಳಿಗೆ ಸರ್ಕಾರದಿಂದ ನಿಷೇಧ ಹೇರಲಾಗಿದೆ. ಇನ್ನು ಕೇವಲ ಇಂತಿಷ್ಟೇ ಜನ ಮಾತ್ರ ಮದುವೆಗೆ ಸೇರಬೇಕು ಎಂಬ ನಿಯಮಗಳಿವೆ. ಜೊತೆಗೆ ಸಾಮಾಜಿಕ ಅಂತರ ಖಡ್ಡಾಯವಾಗಿದ್ದು, ಮಾಸ್ಕ್ ಧರಿಸಿರಲೇಬೇಕಾದಾದ್ದು ಅನಿವಾರ್ಯವಾಗಿದೆ.

Advertisements

ಇನ್ನು ಇದೆಲ್ಲದ್ದರ ನಡುವೆಯೂ ಸ್ಯಾಂಡಲ್ ವುಡ್ ನಟ ನಟಿಯರು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈಗ ಸ್ಯಾಂಡಲ್ ವುಡ್ ನಲ್ಲಿ ಸದ್ದಿಲ್ಲದೇ ಮತ್ತೊಂದು ಮದುವೆ ನಡೆದಿದೆ. ಅದ್ದೂರಿ, ಐರಾವತ ಸೇರಿದಂತೆ ಬ್ಲಾಕ್ ಬಸ್ಟರ್ ಚಿತ್ರಗಳನ್ನ ನಿರ್ದೇಶನ ಮಾಡಿರುವ ಖ್ಯಾತ ನಿರ್ದೇಶಕ ಎ.ಪಿ. ಅರ್ಜುನ್ ಹಾಸನ ಮೂಲದವರಾದ ಬಿ.ಆರ್.ಅನ್ನಪೂರ್ಣ ಎನ್ನುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಐದು ವರ್ಷದಿಂದ ಒಬ್ಬರೊನ್ನೊಬ್ಬರು ಪ್ರೀತಿಸುತ್ತಿದ್ದರು. ಈಗ ನಾಗರಬಾವಿಯಲ್ಲಿರುವ ರಾಮಸಂದ್ರದ ಮಹಾಲಕ್ಷ್ಮಿ ಎನ್‍ಕ್ಲೇವ್ ನಲ್ಲಿ ಅರ್ಜುನ್ ಮತ್ತು ಅನ್ನಪೂರ್ಣ ಸರಳವಾಗಿ ವಿವಾಹ ಮಾಡಿಕೊಂಡಿದ್ದಾರೆ.

ಇನ್ನು ಲಾಕ್ ಡೌನ್ ಇರುವ ಕಾರಣ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಕಿಸ್ ಚಿತ್ರದ ನಾಯಕ ನಟರಾಗಿದ್ದ ವಿರಾಟ್ ಸೇರಿದಂತೆ ಕೆಲವೇ ಆಪ್ತರು ಈ ಮದುವೆ ಸಮಾರಂಭದಲ್ಲಿ ಭಾಗವಹಿಸಿ ನವ ವಧುವರರಿಗೆ ಶುಭಕೋರಿದ್ದಾರೆ.