ಸ್ಯಾನಿಟೈಸರ್ ಸ್ಟ್ಯಾಂಡ್‍ ಕಂಡುಹಿಡಿದ 7ನೇ ತರಗತಿ ಓದಿದ ಯುವಕ ! ಏನೆಲ್ಲಾ ಉಪಯೋಗ ಇದೆ ಗೊತ್ತಾ?

Advertisements

ವಿದ್ಯೆ ಇಲ್ಲದಿದ್ದರೂ ಬುದ್ಧಿಯೊಂದಿದ್ದರೆ ಏನಾದರು ಸಾಧಿಸಬಹುದು ಅನ್ನೋದಕ್ಕೆ, ನಮ್ಮ ನಡುವೆಯೇ ಸಾಧಿಸಿ ತೋರಿಸಿದವರು ಅನೇಕರಿದ್ದಾರೆ. ವೆಲ್ಡಿಂಗ್ ಕೆಲಸ ಮಾಡುವ ಚೇತನ್ ಪ್ರಸಾದ್ ಅನ್ನೋ ಯುವಕ ‘ಫುಟ್ ಪೆಡಲ್ ಡಿಸ್‍ಪ್ಯಾನ್ಸರ್ ಸ್ಯಾನಿಟೈಸರ್ ಸ್ಟ್ಯಾಂಡ್’ ನ್ನ ತಯಾರಿಸಿದ್ದು ಇಂಜಿನಿಯರ್ ವಿದ್ಯಾರ್ಥಿಗಳೇ ಹುಬ್ಬೇರುವಂತೆ ಮಾಡಿದ್ದಾನೆ.

Advertisements

ಹೌದು, ಮಹಾಮಾರಿ ಕೊರೋನಾ ಹಬ್ಬುತ್ತಿರುವ ಈ ಸಮಯದಲ್ಲಿ ನಮ್ಮ ಆರೋಗ್ಯದ ದೃಷ್ಟಿಯಿಂದ ಸ್ಯಾನಿಟೈಸರ್ ನ್ನ ಖಡ್ಡಾಯವಾಗಿ ಬಳಸಲೇಬೇಕಾಗಿದೆ. ಈಗ ಇದೇ ವೇಳೆ ಕೇವಲ ಏಳನೇ ತರಗತಿ ಮಾತ್ರ ಓದಿರುವ ರಾಯಚೂರಿನ ಯುವಕ ಚೇತನ್ ಪ್ರಸಾದ್ ಕಾಲಿನಿಂದ ಒತ್ತುವ ‘ಫುಟ್ ಪೆಡಲ್ ಡಿಸ್‍ಪ್ಯಾನ್ಸರ್ ಸ್ಯಾನಿಟೈಸರ್ ಸ್ಟ್ಯಾಂಡ್’ ನ್ನ ತಯಾರು ಮಾಡಿದ್ದು, ಈ ಯಂತ್ರದ ಸಹಾಯದಿಂದ ಯಾರ ಸಹಾಯವು ಇಲ್ಲದೆ, ಕೈನಿಂದ ಮುಟ್ಟದೆ, ಈ ಯಂತ್ರದ ಪೆಡಲ್ ನ್ನ ಒತ್ತುವ ಮುಖಾಂತರ ಕೈನ್ನ ಸ್ವಚ್ಛಗೊಳಿಸಬಹುದಾಗಿದೆ.

ಇನ್ನು ಕೈ ನಲ್ಲಿ ಸ್ಯಾನಿಟೈಸರ್ ಬಾಟಲ್ ಮುಟ್ಟುವ ಅವಶ್ಯಕತೆ ಇಲ್ಲ, ಬೇರೊಬ್ಬರು ಸ್ಯಾನಿಟೈಸರ್ ಹಾಕುವಾ ಅವಶ್ಯಕತೆ ಇಲ್ಲ, ಟೈಮ್ ಕೂಡ ಉಳಿತಾಯ ಮಾಡಬಹುದು. ಇನ್ನು ಈ ಯಂತ್ರವನ್ನ ಸ್ಟೇನ್ ಲೆಸ್ ಸ್ಟೀಲ್ ಮತ್ತು ಕಬ್ಬಿಣದಿಂದ ತಯಾರು ಮಾಡಿದ್ದು, ಇದಕ್ಕೆ ಯಾವುದೇ ರೀತಿಯ ಬ್ಯಾಟರಿಯ ಅವಶ್ಯಕತೆ ಇಲ್ಲ. ಇನ್ನು ಚೇತನ್ ಪ್ರಸಾದ್ ರವರು ತನ್ನ ಮಿತ್ರನೊಬ್ಬ ಕೊಟ್ಟ ಪ್ಲಾನ್ ನಿಂದ ಈ ಯಂತ್ರ ತಯಾರು ಮಾಡಿದ್ದು, ಸುಮಾರು ಒಂದು ಸಾವಿರದವರೆಗೆ ಖರ್ಚಾಗುತ್ತಿದೆ ಎಂದು ಚೇತನ್ ಹೇಳಿದ್ದಾರೆ.

ಇನ್ನು ಈ ಯಂತ್ರದ ಅವಶ್ಯಕತೆ ಇದ್ದವರಿಗೆ 1400ರೂಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಚೇತನ್ ಹೇಳಿದ್ದಾರೆ. ಆರೋಗ್ಯದ ದೃಷಿತಿಯಿಂದ ಈ ಯಂತ್ರ ತುಂಬಾ ಉಪಕಾರಿಯಾಗಿದೆ. ಯಾವುದೇ ಕರೆಂಟ್ ಬ್ಯಾಟರಿಗಳ ಅವಶ್ಯಕೆತೆ ಕೂಡ ಇಲ್ಲ. ಹಾಗಾಗಿ ಈ ಉಪಯುಕ್ತ ಲೇಖವನ್ನ ಆದಷ್ಟು ಶೇರ್ ಮಾಡಿ..ನಿಮ್ಮ ಅಭಿಪ್ರಾಯ ತಿಳಿಸಿ..