ಲಾಂಚ್ ಆಯ್ತು VIVO V19 ಡ್ಯುಯಲ್ ಸೆಲ್ಫಿ ಕ್ಯಾಮೆರಾ ಫೋನ್-ಇದರ ಬೆಲೆ ಎಷ್ಟು ಗೊತ್ತಾ?

Kannada News
Advertisements

ಸ್ಮಾರ್ಟ್ ಫೋನ್ ಕಂಪನಿಯಾಗಿರುವ ವಿವೊ, ತನ್ನ ಲೇಟೆಸ್ಟ್ ಡಿವೈಸ್ ಆಗಿರುವ VIVO V19 ಸ್ಮಾರ್ಟ್ ಫೋನ್ ನ್ನ ಇತ್ತೀಚೆಗಷ್ಟೇ ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್ ಫೋನ್ ಡ್ಯುಯಲ್ ಸೆಲ್ಫಿ ಕ್ಯಾಮೆರಾ, ಎಚ್‌ಡಿ ಡಿಸ್ಪ್ಲೇ ಹೊಂದಿದ್ದು ಜೊತೆಗೆ ಸ್ನ್ಯಾಪ್ ಡ್ರಾಗನ್ 712 ಪ್ರೊಸೆಸರ್ ತಂತ್ರಜ್ನ್ಯಾನವನ್ನ ಹೊಂದಿದೆ. ಮಾರ್ಚ್ ತಿಂಗಳ ಅಂತ್ಯದಲ್ಲೇ ಭಾರತದಲ್ಲಿ ಲಾಂಚ್ ಆಗಬೇಕಿದ್ದ ಫೋನ್, ಕೊರೋನಾ ಕಾರಣದಿಂದಾಗಿ ಫೋನ್ ಲಾಂಚಿಂಗ್ ಕಾರ್ಯಕ್ರಮವನ್ನ ರದ್ದು ಮಾಡಲಾಗಿತ್ತು.

Advertisements

ವಿವೊ ವಿ19 ಸ್ಮಾರ್ಟ್ ಫೋನ್ ಬೆಲೆ ಎಷ್ಟಿದೆ ನೋಡಿ ಈ ಸ್ಮಾರ್ಟ್ ಫೋನ್ 8gb ರ್ಯಾಮ್ + 128gb ಸ್ಟೋರೇಜ್,(ಇದ ಮತ್ತು gb ರ್ಯಾಮ್ + 256gb ಸ್ಟೋರೇಜ್ ಗಳನ್ನ ಹೊಂದಿದ್ದು ಬೇರೆ ಬೇರೆ ಫ್ಯೂಚರ್ಸ್ ಗಳಲ್ಲಿ ಈ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇನ್ನು ಈ ಮೊಬೈಲ್ ಬೆಲೆ ಕ್ರಮವಾಗಿ 27990ರೂ ಹಾಗೂ 31990ರೂಗಳಲ್ಲಿ ಲಭ್ಯವಿದೆ. ಪಿಯಾನೋ ಬ್ಲ್ಯಾಕ್ ಮತ್ತು ಮಿಸ್ಟಿಕ್ ಸಿಲ್ವರ್ ಈ ಎರಡು ಕಲರ್ ಗಳಲ್ಲಿ ಈ ಸ್ಮಾರ್ಟ್ ಫೋನ್ ಲಭ್ಯವಿದೆ. ಇನ್ನು Vivo V19 ಸ್ಮಾರ್ಟ್ ಫೋನ್ ಮೇ 15ರಿಂದ ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ನಲ್ಲಿ ಸಿಗಲಿದೆ.

Vivo V19 ಮೊಬೈಲ್ ಮೇಲೆ ಸಿಗುವ ಆಫರ್ ಗಳು

ಎಚ್‌ಡಿಎಫ್‌ಸಿ ಬ್ಯಾಂಕಿನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗ್ರಾಹಕರು ಈ ಸ್ಮಾರ್ಟ್‌ಫೋನ್ ಖರೀದಿಸುವಾಗ 10% ಕ್ಯಾಶ್‌ಬ್ಯಾಕ್ಪಡೆಯಬಹುದು. ಇದಲ್ಲದೆ, ಈ ಸ್ಮಾರ್ಟ್ಫೋನ್ ಅನ್ನು ಯಾವುದೇ ವೆಚ್ಚವಿಲ್ಲದ ಇಎಂಐನೊಂದಿಗೆ ಖರೀದಿಸಬಹುದು. ಇದಲ್ಲದೆ, ಕಂಪನಿಯು ಈ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರಿಗೆ ಒನ್-ಟೈಮ್ ಸ್ಕ್ರೀನ್ ಬದಲಿ ನೀಡುತ್ತದೆ. ಇನ್ನು ಮತ್ತೊಂದೆಡೆ ಜಿಯೋ ತನ್ನ ಗ್ರಾಹಕರಿಗೆ ಈ ಫೋನ್ ಖರೀದಿ ಮಾಡಿದಲ್ಲಿ 40 ಸಾವಿರದವರೆಗೆ ಬೆನ್ಪಿಟ್ ನೀಡಲಿದೆ.

ವಿವೋ ವಿ 19 ಸ್ಮಾರ್ಟ್‌ಫೋನ್ 6.44 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದ್ದು, ಇದು 1,080×2,400 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಇನ್ನು ಈ ಫೋನ್ ಆಂಡ್ರಾಯ್ಡ್ 10 ಅಪರೇಷನ್ಗ್ ಸಿಸ್ಟಮ್ ನ್ನ ಹೊಂದಿದೆ. ಇನ್ನು ಈ ಫೋನ್ ನ ಕ್ಯಾಮೆರಾದ ಬಗ್ಗೆ ಹೇಳಬೇಕೆಂದರೆ ಕ್ವಾಡ್ ಕ್ಯಾಮೆರಾ ಸೆಟಪ್ (ನಾಲ್ಕು ಕ್ಯಾಮೆರಾಗಳು) ಜೊತೆಗೆ ಇದು 48 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್, 8 ಮೆಗಾಪಿಕ್ಸೆಲ್ ವೈಡ್-ಆಂಗಲ್ ಲೆನ್ಸ್, 2 ಮೆಗಾಪಿಕ್ಸೆಲ್ ಮೈಕ್ರೋ ಲೆನ್ಸ್ ಹಾಗೂ 2 ಮೆಗಾಪಿಕ್ಸೆಲ್ ಬೊಕೆ ಲೆನ್ಸ್ ಹೊಂದಿದೆ. ಇದಲ್ಲದೆ ಫೋನ್‌ನ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್‌ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನುಹೊಂದಿದೆ.

ಈ ಸ್ಮಾರ್ಟ್‌ಫೋನ್‌ನಲ್ಲಿ 33W ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯದೊಂದಿಗೆ 4,500mAh ಬ್ಯಾಟರಿಯನ್ನು ಕಂಪನಿ ನೀಡಿದೆ. ಇದಲ್ಲದೆ, ಬಳಕೆದಾರರು ಈ ಸ್ಮಾರ್ಟ್‌ಫೋನ್‌ನಲ್ಲಿ ಬ್ಲೂಟೂತ್ ವರ್ಷನ್ 5.0, ವೈ-ಫೈ, ಜಿಪಿಎಸ್, ಒಟಿಜಿ ಮತ್ತು ಯುಎಸ್‌ಬಿ ಪೋರ್ಟ್ ಟೈಪ್-ಸಿ ನಂತಹ ಫ್ಯೂಚರ್ ಗಳನ್ನ ಹೊಂದಿದೆ.