ಎಚ್ಚರ! ATMಗೆ ಹೋದಾಗ ಅಲ್ಲಿ ಹಾವಿದ್ರು ಇರಬಹುದು?ಭಯಹುಟ್ಟಿಸುವ ಈ ವಿಡಿಯೋ ನೋಡಿ

News

ಈಗಂತೂ ಸುಡು ಸುಡು ಬೇಸಿಗೆ ಕಾಲ. ಇನ್ನು ಈ ಬಿಸಿಲಿನ ತಾಪಕ್ಕೆ ಮನುಷ್ಯರೇ ನಲುಗಿಹೋಗುತ್ತಾರೆ. ಇನ್ನು ಪ್ರಾಣಿಗಳ ಕಷ್ಟ ಕೇಳಬೇಕೆ. ಅದರಲ್ಲೂ ಹುತ್ತದಲಿರುವ ಹಾವುಗಳು ಬಿಸಿಯ ತಾಪ ತಾಳಲಾರದೆ ಹೊರಗೆ ಬರುವುದು ಈಗ ಸಾಮಾನ್ಯ. ಇನ್ನು ಈ ಹಾವುಗಳು ಮನೆಯಲ್ಲಿ, ಬೈಕ್ ಗಳಲ್ಲಿ, ಹೆಲ್ಮೆಟ್ ನಲ್ಲಿ ಕಾಣಿಸಿಕೊಂಡ ವಿಡಿಯೊಗಳನ್ನ ನೋಡಿರುತ್ತೀರಿ, ಮೊನ್ನೆಯಷ್ಟೇ ಕೇರಳದಲ್ಲಿ ಜ್ಯೂವೆಲರಿ ಶಾಪ್ ಹೊಂದರಲ್ಲಿ ಹೆಬ್ಬ್ಬಾವು ಸೇರಿಕೊಂಡಿದ್ದು ಬಾರಿ ವೈರಲ್ ಆಗಿತ್ತು.

ಈಗ ಇಲ್ಲಿ ಹಾವೊಂದು ಬ್ಯಾಂಕ್ ಒಂದರ ಎಟಿಎಂ ಮಷಿನ್ ಒಳಗಡೆ ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸಡ್ಡು ಮಾಡುತ್ತಿದೆ. ಹೌದು, ಉತ್ತರಪ್ರದೇಶದ ಘಾಜಿಯಾಬಾದ್ ನ ಗೋವಿಂದಪುರಿ ಎಂಬಲ್ಲಿ ಐಸಿಐಸಿಐ ಬ್ಯಾಂಕ್‍ನ ಎಟಿಎಂ ಇದ್ದು, ಬುಸುಗುಡುತ್ತಾ ಹಾವೊಂದು ಮಷಿನ್ ಒಳಗಡೆ ಹೋದ ಘಟನೆ ನಡೆದಿದೆ.

ಇದ್ದಕಿದ್ದಂತೆ ಎಲ್ಲಿಂದಲೋ ಬಂದ ಹಾವೊಂದು ಏಟಿಎಂ ಸೆಂಟರ್ ಒಳಗಡೆ ನುಗ್ಗಿದೆ. ಇಡಾನ್ನ ನೋಡಿದ ಅಲ್ಲೇ ಭದ್ರತಾ ಕಾರ್ಯ ನಿರ್ವಹಿಸುತ್ತಿದ್ದ ಸೆಕ್ಯೂರಿಟಿ ತಕ್ಷಣವೇ ಎಟಿಮ್ ಸೆಂಟರ್ ಬಾಗಿಲು ಮುಚ್ಚಿದ್ದು, ಅಲ್ಲಿದ್ದ ಜನರನ್ನ ಕಂಡ ಹಾವು ಭಯಗೊಂಡು ಹೊರಗೆ ಬರಲು ಜಾಗ ಸಿಗದೇ ಎಟಿಎಂ ಮಷಿನ್ ಒಳಗಡೆ ಹೋಗಿದೆ.

ಇನ್ನು ಅಲ್ಲೇ ಇದ್ದವರು ಹಾವು ಮಷಿನ್ ಒಳಗಡೆ ಹೋಗುತ್ತಿರುವ ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನು ನೆಟ್ಟಿಗರು ಹಾವು ಹಣ ತೆಗೆದುಕೊಳ್ಳಲು ಎಟಿಎಂ ಗೆ ಬಂದಿರಬಹುದೇನೋ.? ಎಂದು ಕಾಮೆಂಟ್ ಮಾಡಿದ್ದಾರೆ ಇನ್ನು ಕೆಲವರು ಇದೊಂದು ಭಯಾನಕ ವಿಡಿಯೋ ಎಂದಿದ್ದಾರೆ.ಇನ್ನು ಅರಣ್ಯ ಇಲಾಖೆಯ ಸಿಬ್ಬಂದಿಯೂ ಬಂದು ಹಾವನ್ನ ರಕ್ಷಣೆ ಮಾಡಿದ್ದಾರೆ ಎಂದು ಹೇಳಲಾಗಿದೆ.