5ದಿನಗಳ ಕಾಲ ಸೆಲ್ಫ್ ಕ್ವಾರಂಟೈನ್ ಆದ ಮುಖ್ಯಮಂತ್ರಿ ಯಡಿಯೂರಪ್ಪ !

News

ಒಂದು ಕಡೆ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಮತ್ತೊಂದು ಕಡೆ ಇತ್ತೀಚಿಗೆ ರಾಜಕಾರಣಿಗಳು ಅಧಿಕಾರಿಗಳಲ್ಲಿ ಕೊರೋನಾ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇನ್ನು ಮೊನ್ನೆಯಷ್ಟೇ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆಯಾಗಿರುವ ನಟಿ ರಾಜಕಾರಣಿ ಸುಮಲತಾ ಅಂಬರೀಷ್ ರವರಿಗೆ ಕೊರೋನಾ ಪಾಸಿಟಿವ್ ಆಗಿದೆ. ಹೊಸಕೋಟೆ ಶಾಸಕರಾಗಿರುವ ಶರತ್ ಬಚ್ಚೇಗೌಡಗೆ ಕೂಡ ಕೊರೋನಾ ಕಾಣಿಸಿಕೊಂಡಿದೆ.

ಈಗ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಕೂಡ ಕೊರೋನಾ ದಾಳಿಇಟ್ಟಿದೆ. ಹೌದು ಸಿಎಂ ಗೃಹಕಚೇರಿಯಲ್ಲಿರುವ ಇಬ್ಬರು ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್ ಇರುವುದಾಗಿ ಧೃಡಪಟ್ಟಿದೆ. ಹಾಗಾಗಿ ಸಿಎಂ ಯಡಿಯೂರಪ್ಪನವರು ಇಂದಿನಿಂದ ೫ ದಿನಗಳ ಕಾಲ ಮನೆಯಲ್ಲೇ (ಸೆಲ್ಫ್ ಕ್ವಾರಂಟೈನ್) ಇರುವುದಾಗಿ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಸ್ವತಃ ಯಡಿಯೂರಪ್ಪನವರೇ ಇದರ ಬಗ್ಗೆ ಮಾಹಿತಿ ನೀಡಿದ್ದು ಗೃಹ ಕಚೇರಿಯಲ್ಲಿ ಇಬ್ಬರು ಸಿಬ್ಬಂದಿಗಳಿಗೆ ಕೊರೋನಾ ಸೋಂಕು ಪಾಸಿಟಿವ್ ಬಂದಿರುವ ಕಾರಣ ಸೆಲ್ಫ್ ಕ್ವಾರಂಟೈನ್ ಅಗಲಿದ್ದು ಮನೆಯಿಂದಲೇ ಕಚೇರಿ ಕೆಲಸಗಳ ಕಾರ್ಯ ನಿರ್ವಹಿಸುವುದಾಗಿ ಪ್ರಕಟಣೆ ಹೊರಡಿಸಿದ್ದಾರೆ. ನಾನು ಆರೋಗ್ಯವಾಗಿಯೇ ಇದ್ದೇನೆ. ಆತಂಕ ಪಡುವೆ ಅಗತ್ಯ ಅಲ್ಲ. ವಿಡಿಯೋ ಕಾನ್ಪರೆನ್ಸ್ ಮೂಲಕ ಅಗತ್ಯ ಸೂಚನೆಗಳನ್ನ ನೀಡುವೆ..ಸಾರ್ವಜನಿಕರು ಸರ್ಕಾರದ ಕಾನೂನುಗಳನ್ನ ಪಾಲಿಸಬೇಕು. ಖಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸುವುದ್ರ ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.ಇದರೊಂದಿಗೆ ಕೊರೋನಾ ನಿಯಂತ್ರಣಕ್ಕಾಗಿ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಹೇಳಿದ್ದಾರೆ.