ಕೊನೆಗೂ ಕ್ಷಮೆ ಕೇಳಿದ ನಯನಾ ! ಆದ್ರೆ ವಿಡಿಯೋದಲ್ಲಿ ಹೇಳಿದ್ದೇ ಬೇರೆ ?

Cinema Entertainment
Advertisements

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ವ್ಯಕ್ತಿಯೊಬ್ಬರು ಮಾಡಿದ್ದ ಕಾಮೆಂಟ್ ಗೆ ಕೆಟ್ಟ ಭಾಷೆಯಲ್ಲಿ ಉತ್ತರ ಕೊಟ್ಟು ವಿವಾದ ಮಾಡಿಕೊಂಡಿದ್ದರು. ಹೌದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಫೋಟೋವೊಂದನ್ನ ಹಾಕಿದ್ದ ನಯನಾ ಇಂಗ್ಲಿಷ್ ನಲ್ಲಿ ಬರೆದು ಪೋಸ್ಟ್ ಮಾಡಿದ್ದರು. ಆದ್ರೆ ಅನೇಕರು ನಯನಾ ಇಂಗ್ಲಿಷ್ ಬಳಸಿದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ವ್ಯಕ್ತಿಯೊಬ್ಬರು ನೀವು ಬೆಳೆಯೋಕೆ ಕನ್ನಡ ಬೇಕು ಆದರೆ ಬೆಳೆದ ಮೇಲೆ ಇಂಗ್ಲಿಷಾ ಎಂದು ಕಾಮೆಂಟ್ ಮಾಡಿದ್ದರು. ಇನ್ನು ಈ ಕಾಮೆಂಟ್ ಗೆ ಉತ್ತರಿಸಿದ್ದ ನಯನಾ ಅಪ್ಪಾ ಕನ್ನಡದ ಭಕ್ತಾ..ಮುಚ್ಕೊಂಡು ನಿನ್ನ ಕೆಲಸ ನೋಡ್ಕೋ ಎಂದು ಉತ್ತರಿಸಿದ್ದು ನೆಟ್ಟಿಗರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.

Advertisements

ಇನ್ನು ನಯನಾ ಬಳಸಿದ ಕೀಳು ಮಟ್ಟದ ಪದಕ್ಕೆ ಆಕ್ರೋಶಗೊಂಡ ನೆಟ್ಟಿಗರು ನೀವು ಕನ್ನಡಿಗರಲ್ಲಿ ಕ್ಷಮೆ ಕೇಳಲೇಬೇಕು ಎಂದು ನಯನಾ ವಿರುದ್ಧ ಸಾಲು ಸಾಲು ಕಾಮೆಂಟ್ ಗಳನ್ನ ಮಾಡಿದ್ದರು. ಈಗ ವಿಡಿಯೋವೊಂದನ್ನ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪ್ಪೋಸ್ಟ್ ಮಾಡಿ ಕ್ಷಮೆ ಕೇಳಿ ನಯನಾ ಹೇಳಿದ್ದೇನು ಗೊತ್ತಾ?

ಎಲ್ಲರಿಗೂ ನಮಸ್ಕಾರ ಈ ವೀಡಿಯೋ ಅಪ್ಪಟ ಕನ್ನಡ ಅಭಿಮಾನಿಗಳಿಗೆ…ಈ ಮುಂಚೆ ನಾನು ಕನ್ನಡದಲ್ಲಿ ಸಾಲುಗಳನ್ನ ಹಾಕಿದಾಗ ಒಬ್ಬ ವ್ಯಕ್ತಿ ಅವ್ಯಾಚ್ಯ ಶಬ್ದ ಬಳಕೆ ಮಾಡಿದರು ನಿನಗೆ ಕೊಬ್ಬು ದುರಂಕರ ಅಂತ ಅದನ್ನ ಒಂದಷ್ಟು ಜನ ದುರುಪಯೋಗ ಪಡಿಸಿಕೊಂಡು ಅವರುಗಳು ಕೂಡ ಕೆಟ್ಟ ಪದಬಳಕೆ ಮಾಡಿದ್ದರೂ,, ನಾನು ಯಾವುದೇ ಪೋಸ್ಟ್ ಹಾಕಿದರು ಕೂಡ ಆ ತರಹದ ನೆಗೆಟಿವ್ ಕಾಮೆಂಟ್ ಗಳು ಬರುತ್ತಿದ್ದವು ನಾನು ತುಂಬಾ ದಿನಗಳಿಂದ ಗಮನಿಸುತ್ತಾ ಇದ್ದೆ ,, ನನ್ನ ತಾಳ್ಮೆಗೂ ಮಿತಿಯಿದೆ ಅಲ್ಲವೆ ನಾನು ಆ ವ್ಯಕ್ತಿಗೆ ಅದನ್ನು ಹೇಳಿರುವುದೆ ವಿನಹ ಅವರು ಕನ್ನಡದ ಅಭಿಮಾನಿ ಎಂದು ಅಥವಾ ಕನ್ನಡ ಭಾಷೆ ಬಗ್ಗೆಯಾಗಲಿ ನಾನು ಮಾತನಾಡಲಿಲ್ಲ,,

ನಾನು ಎಲ್ಲಿಯೂ ಯಾವುದೇ ಕಾರ್ಯಕ್ರಮಗಳಲ್ಲಿಯೂ ಕೂಡ ಕನ್ನಡ ಭಾಷೆ ಕನ್ನಡದ ಅಭಿಮಾನಗಳ ಬಗ್ಗೆ ಕೀಳಾಗಿ ಮಾತನಾಡಿದವಳು ಅಲ್ಲಾ ,,ನಮ್ಮ ಕನ್ನಡವನ್ನು ಎಲ್ಲಾ ಕಡೆಯೂ ನಾವು ಬೆಳೆಸಬೇಕು ಅನ್ನೊ ಕೆಲಸ ಮಾಡಬೇಕೆ ಹೊರೆತು ವ್ಯಕ್ತಿಗೆ ಹೇಳಿದನ್ನ ಕನ್ನಡ ಭಾಷೆಗೆ ಹೇಳಿದೀನಿ ಎಂದು ಹೇಳುವುದು ತಪ್ಪಾಗಿ ಕಾಣಿಸುತ್ತೆ ..ಆದರೆ ಕೆಲವರು ಕನ್ನಡ ಅಭಿಮಾನಿಗಳು ಎಂದು ಹೇಳಿ ಒಬ್ಬ ಹೆಣ್ಣಿಗೆ ಉಪಯೋಗಿಸಿರುವ ಪದಬಳಕೆ ಮೇಲೆ ಕೂಡ ಗಮನವಿರಲಿ ಅದರಲ್ಲಿ ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ .ನಮಸ್ಕಾರಗಳೊಂದಿಗೆ ನಯನಶರತ್..ನಯನಾ ಕ್ಷಮೆ ಕೇಳಿ ಹಾಕಿರುವ ವಿಡಿಯೋ ನೋಡಿ..