ಬ್ರೇಕಿಂಗ್ ನ್ಯೂಸ್: ರಾಜ್ಯದ ಈ ಜಿಲ್ಲೆಗಳಿಗೆ 7 ದಿನಗಳ ಕಂಪ್ಲೀಟ್ ಲಾಕ್ ಡೌನ್ ಘೋಷಣೆ ಮಾಡಿದ ಸರ್ಕಾರ !

News
Advertisements

ದಿನದಿಂದ ದಿನಕ್ಕೆ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೊರೋನಾ ಸುನಾಮಿಯಿಂದಾಗಿ ಕರ್ನಾಟಕ ತತ್ತರಿಸಿಹೋಗಿದೆ. ಸರ್ಕಾರ ಏನೇ ಕ್ರಮಗಳನ್ನ ಕೈಗೊಂಡರೂ ಮಹಾಮಾರಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ದಿನೇ ದಿನೇ ಸೋಂಕಿತರು ಹಾಗೂ ಸಾವಿನ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಾಗುತ್ತಲೇ ಇದೆ. ಇದೆ ಕಾರಣದಿಂದ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವೊಂದನ್ನ ತೆಗೆದುಕೊಂಡಿದೆ.

Advertisements

ಹೌದು, ಮತ್ತೆ ರಾಜ್ಯದ ಎರಡು ಜಿಲ್ಲೆಗಳಲ್ಲಿ ಒಂದು ವರದ ಲಾಕ್ ಡೌನ್ ಘೋಷಣೆ ಮಾಡಿದೆ ರಾಜ್ಯ ಸರ್ಕಾರ. ಬೆಂಗಳೂರು ನಗರ ಸೇರಿದಂತೆ ಬೆಂಗಳೂರು ಗ್ರಾಮಾಂತರ ಎರಡು ಜಿಲ್ಲೆಗಳು ೭ ದಿನಗಳ ಕಾಲ ಲಾಕ್ ಡೌನ್ ಆಗಲಿದ್ದು ಜುಲೈ 14 ಮಂಗಳವಾರ ರಾತ್ರಿ ೮ ಗಂಟೆಯಿಂದ ಜುಲೈ ೨೨ ಬುಧವಾರದ ಬೆಳಿಗ್ಗೆ ೫ ಗಂಟೆಯವರೆಗೂ ಲಾಕ್ ಡೌನ್ ಇರಲಿದೆ ಎಂದು ಆದೇಶ ಹೊರಡಿಸಿದೆ ಕರ್ನಾಟಕ ರಾಜ್ಯ ಸರ್ಕಾರ.

ಪ್ರತೀ ಭಾನುವಾರದ ಲಾಕ್ ಡೌನ್ ಮಾಡದಿದ್ದರೂ ಸೋಂಕು ಹರಡುವುದರಲ್ಲಿ ಯಾವುದೇ ನಿಯಂತ್ರಣ ಬಂದಿರಲಿಲ್ಲ. ಹೀಗಾಗಿ ಸಂಪೂರ್ಣ ಲಾಕ್ ಡೌನ್ ಗೆ ತಜ್ಞರಿಂದ ಸಲಹೆ ಬಂದಿದ್ದು ಕಡಿಮೆ ಎಂದರೂ ಬೆಂಗಳೂರನ್ನ ೧೦ ರಿಂದ ೧೫ ದಿನಗಳ ಕಾಲ ಲಾಕ್ ಡೌನ್ ಮಾಡುವಂತೆ ಸಲಹೆ ನೀಡಿದ್ದರು. ಆದರೆ ಸಿಎಂ ಯಡಿಯೂರಪ್ಪನವರು ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಕುಸಿಯಬಹುದು ಎಂಬ ಕಾರಣದಿಂದ ಇದಕ್ಕೆ ಸಮ್ಮತಿ ನೀಡಿರಲಿಲ್ಲ. ಆದರೆ ನೆನ್ನೆ ಒಂದೇ ದಿನವೇ ಬೆಂಗಳೂರಿನಲ್ಲಿ 1500 ಕ್ಕಿಂತ ಹೆಚ್ಚು ಕೊರೋನಾ ಸೋಂಕು ಪ್ರಕಾರಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಯಡಿಯೂರಪ್ಪನವರು ಕೇಂದ್ರ್ರ ಸರ್ಕಾರದ ಸಲಹೆ ಪಡೆದು ಲಾಕ್ ಡೌನ್ ಗೆ ಆದೇಶ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ಈ ಕಂಪ್ಲೀಟ್ ಲಾಕ್ ಡೌನ್ ಕೇವಲ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಮಾತ್ರ ಅನ್ವಯವಾಗಲಿದ್ದು ಕರ್ನಾಟಕದ ಉಳಿದ ಜಿಲ್ಲೆಗಳಿಗೆ ಅನ್ವಯವಾಗುವುದಿಲ್ಲ. ಇನ್ನು ಸಾರ್ವಜನಿಕರು ತಮ್ಮ ಊರುಗಳಿಗೆ ಹೋಗಬೇಕಾದಲ್ಲಿ ಹಾಗೂ ಅಗತ್ಯ ವಸ್ತುಗಳನ್ನ ಪೂರೈಸಿಕೊಳ್ಳಲೆಂದೇ ಮಂಗಲವಾರದವರೆಗೆ ಅವಕಾಶ ನೀಡಲಾಗಿದೆ ಎಂದು ಹೇಳಲಾಗಿದೆ.