ಕೊರೋನಾ ಹಿನ್ನಲೆ ಅಪಾರ್ಟ್‍ಮೆಂಟ್‍ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಸ್ಯಾಂಡಲ್ವುಡ್ ಖ್ಯಾತ ನಟ !

Advertisements

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಇನ್ನು ಇದರ ಪರಿಣಾಮ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರೆಟಿಗಳಲ್ಲಿಯೂ ಕೂಡ ತಟ್ಟುತ್ತಿದೆ. ಇನ್ನು ಈಗ ಕನ್ನಡದ ಧಾರಾವಾಹಿಗಳು ಸೇರಿದಂತೆ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟರೊಬ್ಬರು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ.

ಸೀರಿಯಲ್ ಗಳಲ್ಲಿ ಪೋಷಕ ಪಾತ್ರ ಹಾಗೂ ಸಿನಿಮಾಗಳಲ್ಲಿ ನಟನಾಗಿ ಅಭಿನಯಿಸಿರುವ ಆ ಖ್ಯಾತ ನಟನೇ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಶ್ರೀನಾಥ್ ವಸಿಷ್ಠ.ಆದರೆ ಅವರು ಆರ್ಥಿಕ ಸಮಸ್ಯೆಯಿಂದೋನು ಈ ಕೆಲಸ ಮಾಡುತ್ತಿಲ್ಲ. ಆದರೆ ಶ್ರೀನಾಥ್ ವಸಿಷ್ಠ ಅವರು ವಾಸವಾಗಿರುವ ಅಪಾರ್ಟ್‍ಮೆಂಟ್‍ನಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಒಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಅವರ ಜೊತೆ ಕೆಲಸ ಮಾಡುತ್ತಿದ್ದ ಇತರೆ ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ.

ಈ ಕಾರಣದಿಂದಲೇ ಅಪಾರ್ಟ್‍ಮೆಂಟ್‍ನಲ್ಲಿ ವಾಸ ಮಾಡುತ್ತಿರುವವರೇ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಬೇಕು ಎಂದು ಅಪಾರ್ಟ್ ಮೆಂಟ್ ನ ಕಮಿಟಿನವರು ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ನಟ ಶ್ರೀನಾಥ್ ವಸಿಷ್ಠ ಹಾಗೂ ಅವರ ಮಗ ಎರಡು ಪಾಳಿಗಳಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಇದರ ಬಗ್ಗೆ ಸ್ವತಃ ನಟ ಶ್ರೀನಾಥ್ ವಸಿಷ್ಠ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಇದೊಂದು ಹೊಸ ಅನುಭವ ಎಂದು ಬರೆದುಕೊಂಡಿದ್ದಾರೆ.

Advertisements

ಸದ್ಯಕ್ಕೆ ಕೊರೋನಾ ಹಿನ್ನಲೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಗಳು ಇಲ್ಲದ ಕಾರಣ ಅಪಾರ್ಟ್‍ಮೆಂಟ್‍ ನಿವಾಸಿಗಳೇ ಹತ್ತು ದಿನಗಳ ಕಾಲ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುವಂತೆ ಕಮಿಟಿಯವರು ಮನವಿ ಮಾಡಿಕೊಂಡಿದ್ದು ಸೋಮವಾರದಂದು ಮಧ್ಯಾನ್ಹ ಎರಡು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ಗೇಟ್ ನಲ್ಲಿ ಕುಳಿತು ಕೆಲಸ ಮಾಡಿದ್ದೇನೆ. ಇನ್ನು ರಾತ್ರಿ ಪಾಳಿಯಲ್ಲಿ (ಭಾನುವಾರ) ದಂದು ನನ್ನ ಮಗ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿದ್ದಾನೆ ಎಂದು ಹೇಳಿದ್ದಾರೆ. ಒಬ್ಬ ಖ್ಯಾತ ನಟನಾದರೂ ಯಾವುದ್ ಅಹಂ ಇಲ್ಲದೆ ಸೆಕ್ಯೂರಿಟಿ ಗಾರ್ಡ್ ಶ್ರೀನಾಥ್ ವಸಿಷ್ಠ ಅವರು ಮಾಡಿರುವ ಕೆಲಸಕ್ಕೆ ಮುಚ್ಚುಗೆಗಳು ಕೇಳಿಬಂದಿವೆ.