ಅಂದು CBSE ಪರೀಕ್ಷೆಯಲ್ಲಿ ಕೇವಲ 24 ಅಂಕ ಪಡೆದವ ಇಂದು IAS ಅಧಿಕಾರಿ !

News
Advertisements

ಇಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಎಲ್ಲಾ ಕಡೆ ಯಾರು ಟಾಪರ್, ಯಾವ ಕಾಲೇಜು ಟಾಪ್ ನಲ್ಲಿದೆ ಎಂಬುದರ ಬಗ್ಗೆಯೇ ಚರ್ಚೆಗಳು ನಡೆಯುತ್ತಿದೆ. ಜೊತೆಗೆ CBSE ಪರೀಕ್ಷೆಯ ಫಲಿತಾಂಶದ ಬಗ್ಗೆಯೂ ಕೂಡ ಚರ್ಚೆಯಾಗುತ್ತಿದೆ. ಇನ್ನು ಇದರ ನಡುವೆ IAS ಅಧಿಕಾರಿಯೊಬ್ಬರು ತಮ್ಮ CBSE ಮಾರ್ಕ್ಸ್ ಕಾರ್ಡ್ ನ್ನ ಶೇರ್ ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅವರು ಅಂಕಪಟ್ಟಿ ಶೇರ್ ಮಾಡಿಕೊಂಡ್ರೆ ಅದರಲ್ಲೇನಿದೆ ವಿಶೇಷ ಏನಂತೀರಾ..ನಿತಿನ್ ಸಂಗ್ವಾನ್ ಎಂಬುವವರೇ ತಮ್ಮ ಸಿಬಿಎಸ್ಇ ಅಂಕಪಟ್ಟಿ ಹಂಚಿಕೊಂಡಿರುವ ಐಎಎಸ್ ಅಧಿಕಾರಿ. ಇವರು ೨೦೦೨ರ ತಮ್ಮ CBSE ಮಾರ್ಕ್ಸ್ ಕಾರ್ಡ್ ನ್ನ ಹಂಚಿಕೊಂಡಿದ್ದು ಅದರಲ್ಲಿ ರಾಸಾಯನ ವಿಭಾಗದಲ್ಲಿ ಕೇವಲ ೨೪ ಮಾರ್ಕ್ಸ್ ಪಡೆದುಕೊಂಡಿದ್ದಾರೆ.

ಅಧಿಕಾರಿ ಹೀಗೆ ಮಾಡಲು ಕೂಡ ಒಂದು ಕಾರಣವಿದೆ. ಹೌದು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ಅನಾಹುತ ಮಾಡಿಕೊಳ್ಳುವವರೇ ಹೆಚ್ಚು. ಹಾಗಾಗಿ ಅಂತಹವರಿಗೆ ಧೈರ್ಯ ತುಂಬುವ ಸಲುವಾಗಿಯೇ ನನ್ನ ಅಂಕಪಟ್ಟಿಯನ್ನ ಶೇರ್ ಮಾಡಿದ್ದೇನೆ ಎಂದು ಐಎಎಸ್ ಅಧಿಕಾರಿ ಹೇಳಿದ್ದಾರೆ. ನನಗೆ ಪಾಸಿಂಗ್ ಅಂಕಗಳಿಗಿಂತ ಕೇವಲ ಒಂದೇ ಅಂಕ ಜಾಸ್ತಿ ಬಂದಿತ್ತು ಅಷ್ಟೇ. ಆದರೆ ಜೀವನದಲ್ಲಿ ನಾನು ಧೈರ್ಯಗೆಡದೆ ಜೀವನದಲ್ಲಿ ನಾನು ನನ್ನ ಗುರಿಯ ಕಡೆಗೆ ಗಮನ ಕೊಟ್ಟೆ. ಹಾಗಾಗಿ ಅನುತ್ತೀರ್ಣರಾದಲ್ಲಿ ಅಥ್ವಾ ಅಂಕಗಳು ಕಡಿಮೆ ಬಂದಿದೆ ಎಂದು ಯಾವುದೇ ಅನಾಹುತ ಮಾಡಿಕೊಳ್ಳಬೇಡಿ..ನೀವು ಜೀವನದಲ್ಲಿ ಏನಾಗಬಯಸುವಿರೋ ಅದರ ಕಡೆ ಗಮನ ಕೊಡಿ ಎಂದು ಹೇಳಿದ್ದಾರೆ ನಿತಿನ್ ಸಂಗ್ವಾನ್.