ಮಳೆಯ ನಡುವೆಯೇ ವಯಸ್ಸಾದ ತಾಯಿಯನ್ನ ಹೊರಗೆ ಹಾಕಿದ ಪಾಪಿ ಮಗ..ಈ ಮನಕಲುಕುವ ಸುದ್ದಿ ನೋಡಿ

News

ಪಾಪಿ ಮಗನೊಬ್ಬ ತನ್ನ ಹೆತ್ತ ತಾಯಿಯನ್ನೇ ಮನೆಯಿಂದ ಹೊರಗೆ ಹಾಕಿದ್ದು ವಯಸ್ಸಾದ ಆ ತಾಯಿ ಲಾಕ್ ಡೌನ್ ಹಿನ್ನಲೆಯಲ್ಲಿ ಮಳೆಯ ನಡುವೆಯೇ ರಸ್ತೆಯಲ್ಲಿ ಪರದಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ಈರಮ್ಮ ಎಂಬ ಈ ವೃದ್ದೆ ರಾಯಚೂರಿನ ಮೇದರವಾಡಿ ನಿವಾಸಿಯಾಗಿದ್ದು ಮಳೆಯಲ್ಲೇ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ನರಳಾಡಿದ್ದಾರೆ.

ಇನ್ನು ವಯಸ್ಸಾದ ಈ ವೃದ್ಧೆಯ ನ’ರಳಾಟವನ್ನ ನೋಡಲಾರದ ಸಾರ್ವಜನಿಕರು ಅಲ್ಲೇ ಇದ್ದ ಬಸ್ ನಿಲ್ದಾಣದ ಬಳಿ ತಂದು ಬಿಟ್ಟಿದ್ದಾರೆ. ಆದರೆ ಮಳೆಯಿಂದ ನೆಂದಿದ್ದ ಈರಮ್ಮ ನಗರದಲ್ಲಿ ಮಳೆ ಆಗುತ್ತಿದ್ದ ಕಾರಣ ಚಳಿಯಿಂದ ಬಸ್ ನಿಲ್ದಾಣದಲ್ಲೇ ನಡುಗುತ್ತಾ ಕುಳಿತುಕೊಂಡಿದ್ದು ನೋಡುಗರಿಗೆ ಕಣ್ಣೀರು ತರಿಸುವಂತೆ ಇತ್ತು ಆ ದೃಶ್ಯ ಎಂದು ಹೇಳಲಾಗಿದೆ.

ಇನ್ನು ಈರಮ್ಮನ ಈ ನ’ರಳಾಟವನ್ನ ನೋಡಲಾರದೆ ಮಾಧ್ಯಮ ಪ್ರತಿನಿಧಿಗಳು ಜಿಲ್ಲಾಡಳಿತಕ್ಕೆ ಮಾಹಿತಿ ಕೊಟ್ಟಿದ್ದು ಜಿಲ್ಲಾಡಳಿತದ ನಿರಾಶ್ರಿತ ಕೇಂದ್ರ ಸಿಬ್ಬಂದಿಯವರು ರಿಮ್ ಆಸ್ಪತ್ರೆಗೆ ವೃದ್ದೆಯನ್ನ ದಾಖಲು ಮಾಡಿದ್ದು ತಪಾಸಣೆ ಬಳಿಕ ನಿರಾಶ್ರಿತ ಕೇಂದ್ರಕ್ಕೆ ಬಿಡುವಂತೆ ಜಿಲ್ಲಾಡಳಿತ ಸೂಚನೆ ಕೊಟ್ಟಿದೆ ಎಂದು ಹೇಳಲಾಗಿದೆ. ಮಕ್ಕಳಿಲ್ಲದವರಿಗೆ ಒಂದು ಕಷ್ಟವಾದರೆ ಮಕ್ಕಳಿದ್ದವರಿಗೆ ಮತ್ತೊಂದು ಕಷ್ಟ ಎಂಬಂತಾಗಿದೆ. ವಯಸ್ಸಾಗಿರುವ ತಾಯಿ ಎಂದು ಸಹ ನೋಡದ ಆ ಪಾಪಿ ಮಗ ಹೊರಗಡೆ ಮಳೆ ಬೀಳುತ್ತಿದ್ದರೂ ಒಂಚೂರು ಕರುಣೆ ಕೂಡ ತೋರಿಸದೆ ತಾಯಿಯನ್ನ ಹೊರಗೆ ಹಾಕಿರುವುದು ಮನುಷ್ಯನ ಕ್ರೂರತೆಗೆ ಸಾಕ್ಷಿಯಾಗಿದೆ.