ಕೊರೋನಾ ಹಿನ್ನಲೆ ಉಸಿರಾಡಲಾಗದೆ ಜೀವ ಕಳೆದುಕೊಂಡ ಮಹಿಳಾ ಜಿಲ್ಲಾಧಿಕಾರಿ..ಅನಾಥವಾಯ್ತು 4 ವರ್ಷದ ಮಗು

News
Advertisements

ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮಾರಕ ಸೋಂಕು ಕೊರೋನಾ ಸಾವಿರಾರು ಜನರನ್ನ ಈಗಾಗಲೇ ಬಲಿ ತೆಗೆದುಕೊಂಡಿದೆ. ಇನ್ನು ಇತ್ತೀಚಿಗೆ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕೊರೋನೋ ಸೋಂಕಿಗೆ ಒಳಗಾಗುತ್ತಿದ್ದಾರೆ. ಈಗ ಪಚ್ಚಿಮ ಬಂಗಾಳದ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಮೊದಲ ಬಾರಿಗೆ ಕೊರೋನಾಗೆ ಬಲಿಯಾಗಿದ್ದಾರೆ.

Advertisements

ಕೇವಲ ೩೩ ವರ್ಷದ ದೇಬದತ್ತ ರಾಯ್ ಪಚ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಕೊರೋನಾ ವಾರಿಯರ್ ಆಗಿ ಕೆಲಸ ಮಾಡಿದ್ದ ರೇ ಅವರಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಹಾಗಾಗಿ ಅವರು ಮನೆಯಲ್ಲಿಯೇ ಕ್ವಾರಂಟೈನ್ ನಲ್ಲಿದ್ದರು. ಆದರೆ ವಿಪರೀತ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದ ಹಿನ್ನಲೆಯಲ್ಲಿ ಕಳೆದ ಭಾನುವಾರದಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಾರಣ ಇಹಲೋಕ ತ್ಯಜಿಸಿದ್ದಾರೆ.

2010ರ ಬ್ಯಾಚ್ ನ IAS ಅಧಿಕಾರಿಯಾಗಿದ್ದ 33 ವರ್ಷದ ದೇಬದತ್ತ ರಾಯ್ ವೆಸ್ಟ್ ಬೆಂಗಾಲ್ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಶ್ರಮಿಕ್ ರೈಲಿನ ಮೂಲಕ ಡಂಕಣಿಗೆ ಬಂದಿದ್ದ ವಲಸೆ ಕಾರ್ಮಿಕರ ಸೌಲಭ್ಯಗಳನ್ನ ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದರು. ಆದರೆ ಇದೆ ವೇಳೆ ಅವರಿಗೆ ಕೊರೋನಾ ಸೋಂಕು ತಗುಲಿದೆ ಎಂದು ಹೇಳಲಾಗಿದೆ. ಇನ್ನು ಕೇವಲ ನಾಲ್ಕು ವರ್ಷದ ಮಗಳು ಹಾಗೂ ಪತಿಯನ್ನ ಬಿಟ್ಟು ಹೋಗಿದ್ದಾರೆ ಜೆಲ್ಲಾಧಿಕಾರಿ ದೇಬದತ್ತ ರಾಯ್. ಆದರೆ ಕೇವಲ ಚಿಕ್ಕ ವಯಸ್ಸಿಗೆ ತನ್ನ ತಾಯಿಯನ್ನ ಕಳೆದುಕೊಂಡು ಅನಾಥವಾಗುವ ದುರ್ವಿಧಿ ಆ ಕಂದಮ್ಮನದಾಗಿದೆ.