ಇತಿಹಾಸ ಬರೆದ ಅವಳಿ ಮಕ್ಕಳು: CBSE ಪರೀಕ್ಷೆಯಲ್ಲಿ ಇಬ್ಬರಿಗೂ ಸಮಾನ ಅಂಕಗಳು !

News
Advertisements

ಈಗಾಗಲೇ ದ್ವಿತೀಯ ಪಿಯುಸಿ ಮತ್ತು CBSE 12ನೇ ಪರೀಕ್ಷೆಯ ಫಲಿತಾಂಶ ಬಿಡುಗಡೆಯಾಗಿದ್ದು ಯಾವ ಕಾಲೇಜು ಟಾಪ್ ರಾಂಕ್ ಪಡೆದಿದೆ, ಯಾರು ಹೆಚ್ಚು ಅಂಕಗಳನ್ನ ಪಡೆದು ಸಾಧನೆ ಮಾಡಿದ್ದಾರೆ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅದೇ ರೀತಿ ಇಲ್ಲೊಬ್ಬ ಅವಳಿ ಜವಳಿ ಮಕ್ಕಳಿಗೆ ಪರೀಕ್ಷೆಯಲ್ಲಿ ಸಮಾನ ಅಂಕಗಳು ಬಂದಿರುವುದು ವಿಶೇಷವಾಗಿದೆ.

Advertisements

ಹೌದು, ನೋಯ್ಡಾದ ಅವಳಿ ಮಕ್ಕಳು CBSE 12ನೇ ತರಗತಿಯ ಪರೀಕ್ಷೆಯಲ್ಲಿ ಸಮಾನ ಅಂಕಗಳನ್ನ ಪಡೆದು ಎಲ್ಲರನ್ನ ಚಕಿತರನ್ನಾಗಿ ಮಾಡಿದ್ದಾರೆ. ಅವಳಿ ಮಕ್ಕಳಾದ ಮಾನ್ಸಿ ಮತ್ತು ಮಾನ್ಯಾ ಎನ್ನುವ ವಿಧ್ಯರ್ಥಿನಿಯರು ಸಮನಾಗಿ ಶೇ 95.8 ಅಂಕಗಳನ್ನ ಪಡೆಯುವುದರ ಮೂಲಕ ಸಾಧನೆ ಮಾಡಿದ್ದು ಎಲ್ಲರೂ ಅಚ್ಚರಿಗೊಳ್ಳುವಂತೆ ಮಾಡಿದ್ದಾರೆ.

ನೋಯ್ಡಾದ ಆಸ್ಟರ್ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಈ ಅವಳಿ ಮಕ್ಕಳು ಕಂಪ್ಯೂಟರ್ ಸೈನ್ಸ್ ಮತ್ತು ಇಂಗ್ಲಿಷ್ ನಲ್ಲಿ ಸಮನಾಗಿ ೯೮ ಮಾರ್ಕ್ಸ್ ದೈಹಿಕ ಶಿಕ್ಷಣ ಸೇರಿದಂತೆ ಫಿಸಿಕ್ಸ್ ಮತ್ತು ಕೆಮೆಸ್ಟ್ರಿಯಲ್ಲಿ ತಲಾ 95 ಅಂಕಗಳನ್ನ ಪಡೆದುಕೊಂಡಿದ್ದಾರೆ. ಇನ್ನ್ನು ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾನ್ಸಿ ಮತ್ತು ಮಾನ್ಯಾ ನಾವು ಒಂದೇ ರೀತಿಯ ಹವ್ಯಾಸಗಳನ್ನ ಬೆಳೆಸಿಕೊಂಡಿದ್ದೇವೆ. ಪರೀಕ್ಷೆಯಲ್ಲಿ ಒಳ್ಳೆಯ್ ಅಂಕಗಳು ಬರುತ್ತವೆ ಮೇಬ ನಂಬಿಕೆ ಇತ್ತು ಆದರೆ ಇಬ್ಬರಿಗೂ ಸಮನಾಗಿ ಒಂದೇ ರೀತಿಯ ಅಂಕ ಬರುತ್ತದೆ ಎಂದು ಊಹೆ ಕೂಡ ಮಾಡಿರಲಿಲ್ಲ ಎಂದು ಮಾನ್ಸಿ ಮತ್ತು ಮಾನ್ಯಾ ಹೇಳಿದ್ದಾರೆ.