ಲೈವ್ ನಲ್ಲಿ ಸ್ನೇಹಿತ ಕೇಳಿದ ಬೇಸಿಕ್ ಪ್ರಶ್ನೆಗಳಿಗೂ ಉತ್ತರಿಸಲಾಗದೆ ಜಾರಿಕೊಂಡ ಡ್ರೋನ್ ಪ್ರತಾಪ್

News
Advertisements

ಕೊನೆಗೂ ಡ್ರೋನ್ ಪ್ರತಾಪ್ ನಾನು ಮಾಡಿರುವ ಸಂಶೋಧನೆ ಸಾಧನೆಗಳೆಲ್ಲವೂ ನಿಜ ಅದೆಲ್ಲವನ್ನು ಪ್ರೂಫ್ ಸಮೇತ ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದ್ದರು. ಅದರಂತೆ ಖಾಸಗಿ ಸುದ್ದಿವಾಹಿನಿಯ ಲೈವ್ ಕಾರ್ಯಕ್ರಮದಲ್ಲಿ ಬಂದು ಕುಳಿತ ಪ್ರತಾಪ್ ಕೇಳಲಾದ ಸಿಂಪಲ್ ಪ್ರಶ್ನೆಗಳಿಗೂ ಉತ್ತರ ಕೊಡಲಾರದೆ ಜಾಣತನದಿಂದ ಜಾರಿಕೊಂಡರು. ಆದರೆ ನಿರೂಪಕ ಕೇಳಲಾದ ಹಲವಾರು ಪ್ರಶ್ನೆಗಳಿಗೆ ಉತ್ತರ ಒಂದೇ ಆಗಿತ್ತು..ಈಗ ಅದನ್ನ ಸೆಕ್ಯೂರಿಟಿ ಕಾರಣಗಳಿಂದ ತೋರಿಸೊಕ್ಕೆ ಆಗೋದಿಲ್ಲ..ಹೇಳೋದಕ್ಕೂ ಆಗೋದಿಲ್ಲ ಎಂಬ ಉತ್ತರವನ್ನೇ ಕೊಡುತ್ತಿದ್ದರು.

Advertisements

ವಿದೇಶದಲ್ಲಿ ಗೆದ್ದಿದ್ದೇನೆ ಎನ್ನಲಾದ ಕೆಲವು ಪ್ರಶಸ್ತಿ ಮೆಡಲ್ ಗಳನ್ನ ತೋರಿಸಿದರೆ ಹೊರತು ಜರ್ಮನಿ ಜಪಾನ್ ನಲ್ಲಿ ಗೆದ್ದಿದ್ದೇನೆ ಪ್ರಶಸ್ತಿ ಮೆಡಲ್ ಗಳನ್ನ ಗೆದ್ದಿದ್ದೇನೆ ಎಂದು ಹೇಳಿದ್ದ ಪ್ರತಾಪ್ ಅದಕ್ಕೆ ಸಂಬಂಧಪಟ್ಟ ವಿಡಿಯೊಗಳನ್ನಾಗಲಿ ಫೋಟೋಗಳನ್ನಾಗಲಿ ತೋರಿಸಲಿಲ್ಲ. ಮಾತಿನಲ್ಲಿಯೇ ಮಂಟಪ ಕಟ್ಟುತ್ತಿದ್ದಾರೆ ವಿನಃ ಯಾವುದಕ್ಕೂ ಸರಿಯಾದ ಉತ್ತರ ಕೊಡುತ್ತಿರಲಿಲ್ಲ. ಇನ್ನು ಅದೇ ಲೈವ್ ಕಾರ್ಯಕ್ರಮದಲ್ಲಿ ಅವರ ಸ್ನೇಹಿತ ಎಂದು ಹೇಳಲಾದ ಜಪಾನ್ ಟೋಕಿಯೊದಲ್ಲಿದ್ದ ದರ್ಶನ್ ಅವರೊಂದಿಗೆ ಕನೆಕ್ಟ್ ಮಾಡಲಾಗಿತ್ತು. ಆದರೆ ಪ್ರತಾಪ್ ದರ್ಶನ್ ಯಾರೆಂದು ನನಗೆ ಗೊತ್ತಿಲ್ಲ..ಮೇ ಬಿ ಕ್ಲಾಸ್ಮೆಟ್ಸ್ ಅಥ್ವಾ ಒಂದೇ ಕಾಲೇಜಿನ ಬೇರೆ ವಿಭಾಗದವರು ಆಗಿರಬಹುದು ಎಂದು ಹೇಳಿದ್ರು.

ಇನ್ನು ಜಪಾನ್ ನಲ್ಲಿ ಏರೋಸ್ಪೇಸ್ ಬಗ್ಗೆ ರಿಸರ್ಚ್ ಮಾಡುತ್ತಿರುವ ದರ್ಶನ್ ನಾನು ಕೇವಲ ತಾಂತ್ರಿಕವಾಗಿ ಮಾತ್ರ ನಿಮಗೆ ಕೆಲವು ಪ್ರಶ್ನೆಗಳನ್ನ ಕೇಳುತ್ತೇನೆ ಎಂದ ದರ್ಶನ್ ಕೆಲವೊಂದು ಬೇಸಿಕ್ ಟೆಕ್ನಿಕಲ್ ಪ್ರಶ್ನೆಗಳನ್ನ ಪ್ರತಾಪ್ ಗೆ ಕೇಳಿದ್ರು. ಆದರೆ ಅದಕ್ಕೆ ಉತ್ತರಿಸದೆ ಜಾರಿಕೊಂಡ ಪ್ರತಾಪ್ ಈ ಸಮಯದಲ್ಲಿ ಅದಕ್ಕೆ ಉತ್ತರ ಕೊಡೋದಕ್ಕೆ ಆಗೋದಿಲ್ಲ..ಎಲ್ಲವನ್ನವು ಮೇಲ್ ಮಾಡುತ್ತೇನೆ ಎಂದು ಹೇಳಿದ್ರು. ದರ್ಶನ್ ಕೇಳಿದ ಯಾವುದೇ ಟೆಕ್ನಿಕಲ್ ಪ್ರಶ್ನೆಗಳಿಗೂ ಪ್ರತಾಪ್ ನಿಂದ ಉತ್ತರ ದೊರೆಯಲಿಲ್ಲ.

ಇನ್ನು ಪ್ರತಾಪ್ ಮೊದಲಿಗೆ ಭಾಷಣ ಮಾಡಿದ್ದ ವಿಡಿಯೊಗಳನ್ನ ಪ್ಲೇ ಮಾಡಿ ಅದರ ಬಗ್ಗೆ ಪ್ರಶ್ನೆಗಳನ್ನ ಕೇಳಿದಾಗ ಅವರು ಭಾಷಣದಲ್ಲಿ ಹೇಳಿರುವ ಶೇ80 ಭಾಗ ಸುಳ್ಳು ಎಂದು ಸ್ವಯಂ ಪ್ರತಾಪ್ ಒಪ್ಪಿಕೊಂಡಿದ್ದು ಮನುಷ್ಯ ಅಂದಮೇಲೆ ತಪ್ಪು ಮಾಡಿಯೇ ಮಾಡುತ್ತಾನೆ..ಏನೋ ಮಾತಿನ ಭರದಲ್ಲಿ ಹೇಳಿಬಿಟ್ಟೆ ಎಂದು ಪ್ರತಾಪ್ ಹೇಳಿದ. ಇನ್ನು ಆಫ್ರಿಕಾ ಖಂಡದ ಸುಡಾನ್ ನಲ್ಲಿ ಹಾವು ಕಚ್ಚಿದ ಬಾಲಕಿಯೊಬ್ಬಳನ್ನ ಡ್ರೋನ್ ಮೂಲಕ ಮೆಡಿಸಿನ್ ತಲುಪಿಸಿ ಬದುಕಿಸಿದ ಕತೆಯ ಬಗ್ಗೆ ವಿಡಿಯೋಗಳಲ್ಲಿ ಬಹಳ ರೋಚಕವಾಗಿ ಹೇಳಿದ್ದ ಪ್ರತಾಪ್..ಖಾಸಗಿ ವಾಹಿನಿಯ ಲೈವ್ ನಲ್ಲಿ ಮಾತ್ರ ಅದು ನಾನೊಬ್ಬನೇ ಮಾಡಿಲ್ಲ..

ಬೇರೆ ಕಂಪನಿಯೊಂದಿಗೆ ಕೊಲಾಬ್ರೇಟ್ ಆಗಿ ಮಾಡಿರೋದು ಎಂದು ಹೇಳಿದ..ಇನ್ನು ಡ್ರೋನ್ ಹತ್ತು ಗಂಟೆ ಚಲಿಸಬೇಕಾದ ಅವಧಿಯನ್ನ ಕೇವಲ 9 ನಿಮಿಷದಲ್ಲಿ ತಲುಪಿ ಹಾವು ಕಚ್ಚಿದ ಬಾಲಕಿಗೆ ಮೆಡಿಸಿನ್ ನೀಡಿದೆ ಎಂಬುದರ ಬಗ್ಗೆ ಹಾಗೂ ಡ್ರೋನ್ ತಲುಪಿದ ಸ್ಪೀಡ್ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡದೆ ಅದರಲ್ಲಿ ಕೆಲವೊಂದು ಸುಳ್ಳು ಎಂಬುದರ ಬಗ್ಗೆ ಪ್ರತಾಪ್ ಒಪ್ಪಿಕೊಂಡಿದ್ದಾನೆ. ಒಟ್ಟಿನಲ್ಲಿ ಲೈವ್ ಕಾರ್ಯಕ್ರಮದಲ್ಲಿ ಕೇಳಲಾದ ಬಹುತೇಕ ಪ್ರಶ್ನೆಗಳಿಗೆ i am not suppose to disclose.. i am not suppose tell ಎಂಬ ಹಾರೈಕೆಯ ಉತ್ತರವನ್ನೇ ನೀಡಿ ಜಾರಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.