33ವರ್ಷ ದಾಟಿದ ಬೇಬಿ ಶಾಮಲಿ ಈಗ ಹೇಗಿದ್ದಾರೆ ಗೊತ್ತಾ?ಇನ್ನು ಮದ್ವೆಯಾಗಿಲ್ಲ ಏಕೆ?

Cinema
Advertisements

90ರ ದಶಕದ ಕನ್ನಡ ಚಿತ್ರರಂಗದಲ್ಲಿ ಬಾಲ ಕಲಾವಿದರಾಗಿ ಮೆರೆದು ಹಲವು ಬಾಲ ನಟ ನಟಿಯರಲ್ಲಿ ಬೇಬಿ ಶಾಮಲಿ ಕೂಡ ಒಬ್ಬರು. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಅತೀ ಹೆಚ್ಚು ಚಿತ್ರಗಳಲ್ಲಿ ಬಾಲ ನಟಿಯಾಗಿ ಫೇಮಸ್ ಆದ ಪುಟ್ಟ ಹುಡುಗಿ. ಇನ್ನು ಇದ್ದಕಿದ್ದಂತೆ ಚಿತ್ರರಂಗದಿಂದ ದೂರವಾದ ಬೇಬಿ ಶಾಮಿಲಿಗೆ ಈಗ 33 ವರ್ಷ. ವಿಶೇಷ ಎಂದರೆ ಈಗಲೂ ಸಹ ಇವರನ್ನ ಬೇಬಿ ಶಾಮಲಿ ಅಂತಲೇ ಕರೆಯುತ್ತಾರೆ. ಹಾಗಾದ್ರೆ ಈಗ ಹೇಗಿದ್ದಾರೆ ಗೊತ್ತಾ ಬೇಬಿ ಶಾಮಲಿ..

Advertisements

ತಮ್ಮ ಬಾಲ್ಯದಿಂದಲೇ ಆಕ್ಟರ್ ಗಳಾಗಿ ಚೈಲ್ಡ್ ಆರ್ಟಿಸ್ಟ್ ಗಳಾಗಿ ಬಂದವರನ್ನ ಅವರು ಎಷ್ಟೇ ದೊಡ್ಡವರಾದ್ರು ಬೇಬಿ, ಮಾಸ್ಟರ್ ಅಂತಲೇ ಕರೆಯುತ್ತಾರೆ. ಇನ್ನು ಇತ್ತೀಚೆಗಷ್ಟೇ ಬೇಬಿ ಶಾಮಲಿ ತಮ್ಮ 33 ವರ್ಷದ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡಿದ್ದಾರೆ. ಅಂದ ಹಾಗೆ ಬೇಬಿ ಶಾಮಲಿ ಆ ಪುಟ್ಟ ಪುಟ್ಟ ಕಣ್ಣುಗಳು ದೊಡ್ಡ ದೊಡ್ಡ ಗುಂಡಾದ ಎರಡು ಜುಟ್ಟುಗಳನ್ನ ಹಾಕಿಕೊಂಡು..ಪಿಳಿ ಪಿಳಿ ಅಂತ ಕಣ್ಣುಗಳನ್ನ ಬಿಟ್ಕೊಂಡು ಮಾತಾಡ್ತಾ ಓಡ್ತಾ ನಗಿತಾ ೯೦ರ ದಶಕದಲ್ಲಿ ಕನ್ನಡಿಗರನ್ನೆಲ್ಲಾ ನಗಿಸಿದ ಮಗು..

ಅಂದಹಾಗೆ ಈಗ ಬೆಳೆದು ಬೆಡಗಿಯಂಗೆ ದೊಡ್ಡವಳಾದ್ರು ಕೂಡ ಜನ ಮಾತ್ರ ಇವರನ್ನ ಬೇಬಿ ಶಾಮಲಿ ಅಂತಾನೆ ಕರೀತಾರೆ. ಇನ್ನು ಈಗ ೩೩ ವರ್ಷವಾಗಿರುವ ಬೇಬಿ ಶಾಮಲಿಗೆ ಅವರ ಬಾವನಾಗಿರುವ ತಮಿಳು ಸ್ಟಾರ್ ನಟ ಅಜಿತ್ ಮದುವೆ ಮಾಡುವ ಸಲುವಾಗಿ ಹುಡುಗನನ್ನ ಹುಡುಕ್ತಾ ಇದ್ದಾರೆ ಎನ್ನೋ ಸುದ್ದಿ ಕೂಡ ಇದೆ.

ಅಂದಹಾಗೆ ಆ ಕಾಲಕ್ಕೆ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ನಟಿಸಿದ್ದ ಬೇಬಿ ಶಾಮಲಿ ರಾಷ್ಟ್ರಪ್ರಶಸ್ತಿ ಕೂಡ ಪಡೆದುಕೊಂಡಿದ್ದರು. ಇನ್ನು ಬಲ ನಟಿಯಾಗಿ ೩೫ ಸಿನಿಮಾಗಳಲ್ಲಿ ನಟಿಸಿದ್ದರು ಸಹ ಏಕೋ ಏನೋ ಸಿನಿಮಾದಲ್ಲಿ ಹೀರೋಯಿನ್ ಆಗಿ ಬೆರಳಿಣಿಕೆಯಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಹೆಚ್ಚಾಗಿ ನಟಿಸಲಿಲ್ಲ.