ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ ಹರ್ಷ ನಿರ್ದೇಶನದ ಭಜರಂಗಿ 2 ಚಿತ್ರ ಸ್ಯಾಂಡಲ್ವುಡ್ ನ ಬಹು ನಿರೀಕ್ಷಿತ ಚಿತ್ರವಾಗಿದೆ. ಇನ್ನು ಶಿವಣ್ಣನ ಜನ್ಮದಿನದಂದೇ ಬಿಡುಗಡೆಯಾದ ಭಜರಂಗಿ 2 ಚಿತ್ರದ ಟೀಸರ್ ಅಂತೂ ಅಭಿಮಾನಿಗಳಲ್ಲಿ ಈ ಚಿತ್ರದ ಬಗೆಗೆ ಮತ್ತಷ್ಟು ಕುತೂಹಲ ಹೆಚ್ಚಲು ಕಾರಣವಾಗಿದೆ. ಯಾವುದೊ ನಿಗೂಢ ಲೋಕಕ್ಕೆ ಕರೆದೊಯ್ಯುವಂತೆ ಕುತೂಹಲ ಹೆಚ್ಚಿಸಿರುವ ಈ ಚಿತ್ರದಲ್ಲಿ ಹಲವು ಸರ್ಪ್ರೈಸಿಂಗ್ ಪಾತ್ರಗಳು ಇವೆ.

ಹೌದು, ಸಿಕ್ಕಾಪಟ್ಟೆ ಖಡಕ್ ಆಗಿದ್ದಾರೆ ಭಜರಂಗಿ ೨ ಚಿತ್ರದ ವಿಲನ್ಸ್. ಅದರಲ್ಲಿ ಅಳುವ ಪಾತ್ರಗಳಲ್ಲೇ ಹೆಚ್ಚು ನಟಿಸುತ್ತಿದ್ದ ಹಿರಿಯ ನಟಿ ಶ್ರುತಿ ಕೈನಲ್ಲಿ ಸಿಗಾರ್ ಹಿಡಿದು ಖಡಕ್ ಆಗಿ ಲುಕ್ ಕೊಟ್ಟಿರುವುದು ಸರ್ಪ್ರೈಸಿಂಗ್ ಆಗಿದೆ. ಇನ್ನು ಪಕ್ಕಾ ಕನ್ನಡದ ಪ್ರತಿಭೆಯಾಗಿರುವ ಆರಡಿ ಕಟೌನ್ಟ್ ನಂತೆ ಇರುವ ಈ ವಿಲನ್ ನನ್ನ ನೋಡಿದ್ರೆ ಬೆಚ್ಚಿ ಬೀಳಿಸುವಂತಿದೆ. ತುಂಬಾ ಕುತೂಹಲ ಹುಟ್ಟುಹಾಕಿರುವ ಶಿವಣ್ಣನ ಮುಂದೆ ತೊಡೆ ತಟ್ಟಲು ನಿಂತಿರುವ ಈ ವಿಲನ್ ಯಾರು ಗೊತ್ತಾ?

ಥೇಟ್ ಹಾಲಿವುಡ್ ವಿಲನ್ ನಂತೆ ಕಾಣುವ ಈ ಪಾತ್ರದಾರಿ ಅಪ್ಪಟ ಕನ್ನಡಿಗ. ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದವರಾಗಿರುವ ಈ ನಟನ ಹೆಸರು ಚೆಲುವರಾಜ್ ಎಂದು. ಪಕ್ಕಾ ಆರಡಿ ಕಟೌಟ್. ಭಜರಂಗಿ ೨ ಚಿತ್ರದಲ್ಲಿ ವಿಲನ್ ಗಳ ದಂಡೇ ಇದ್ದರೂ ಈ ವಿಲನ್ ಪಾತ್ರದಾರಿಯನಂ ನೋಡಿದಾಗ ಬಾಲಿವುಡ್ ನಿಂದಲೋ ಹಾಲಿವುಡ್ ನಿಂದಲೂ ಕರೆತಂದಿದ್ದಾರೆಯೇ ಅಂತ ಅನ್ನಿಸಿಬಿಡುತ್ತೆ. ಇನ್ನು ೩೩ ವರ್ಷದ ನಟ ಚೆಲುವರಾಜ್ ಭಜರಂಗಿಯಲ್ಲಿ ೬೬ ವರ್ಷದ ವಿಲನ್ ಆಗಿ ಶಿವಣ್ಣನ ಮುಂದೆ ತೊಡೆ ತಟ್ಟಿದ್ದಾರೆ. ಧಾರಾವಾಹಿ ಹಾಗೂ ಕೆಲವು ಸಿನಿಮಾಗಳಲ್ಲೂ ಕೂಡ ನಟಿಸಿದ್ದಾರೆ.

ಕನ್ನಡದ ಮಹಾಭಾರತ ಹಾಗೂ ಮಹಾ ಕಾಳಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ ಚೆಲುವರಾಜ್. ಇನ್ನು ಸುದೀಪ್ ಅಭಿನಯದ ಪೈಲ್ವಾನ್ ಮತ್ತು ವಿನೋಧ ಪ್ರಭಾಕರ್ ಅಭಿನಯದ ಫೈಟರ್ ಹಾಗೂ ನಟ ಗಣೇಶ್ ಅಭಿನಯದ ಗೀತಾ ಚಿತ್ರದಲ್ಲೂ ಕೂಡ ನಟಿಸಿದ್ದಾರೆ.ಆದರೆ ಈ ಎಲ್ಲಾ ಚಿತ್ರಗಳಿಗಿಂತ ಭಜರಂಗಿ ೨ ಚಿತ್ರದ ಇದೊಂದು ಪಾತ್ರದಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ ನಟ ಚೆಲುವರಾಜ್.