ಬಿಗ್ ಬ್ರೇಕಿಂಗ್: ಡ್ರೋನ್ ಪ್ರತಾಪ್ ಬಂಧನಕ್ಕೆ ಫೋನ್ ಲೊಕೇಶನ್ ಟ್ರ್ಯಾಕ್ ಮಾಡುತ್ತಿರುವ ಪೊಲೀಸರು!ಆದ್ರೆ ಅಸಲಿ ಕಾರಣ ಬೇರೆಯೇ ಇದೆ?

News
Advertisements

ನಾನೊಬ್ಬ ಯುವ ವಿಜ್ನ್ಯಾನಿ ಡ್ರೋನ್ ಕಂಡುಹಿಡಿದಿದ್ದೇನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಿತ ಕಂಪನಿಗಳಿಂದ ಸರ್ಟಿಫಿಕೇಟ್ ಗೋಲ್ಡ್ ಮೆಡಲ್ ಗಳನ್ನ ಪಡೆದಿದ್ದೇನೆ ಎಂದು ಓಡಾಡುತ್ತಿದ್ದ ಡ್ರೋನ್ ಪ್ರತಾಪ್ ಇತ್ತೀಚೆಗಷ್ಟೇ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ್ದು ಇಡೀ ರಾಜ್ಯದ ಜನರ ಮುಂದೆ ಪ್ರತಾಪನ ಅಸಲಿ ಸತ್ಯ ಬಹಿರಂಗವಾಗಿದೆ. ಇನ್ನು ಈಗಾಗಲೇ ಡ್ರೋನ್ ಪ್ರತಾಪ್ ಮೇಲೆ ಕೆಲವೊಂದು ಕಡೆ ಪ್ರಕರಣಗಳು ಕೂಡ ದಾಖಾಲಾಗಿವೆ.

ಇನ್ನು ಈಗಾಗಲೇ ಮೂರು ಪೊಲೀಸರು ತಂಡಗಳನ್ನ ರಚನೆ ಮಾಡಿಕೊಂಡು ಪ್ರತಾಪ್ ನನ್ನ ವಶಕ್ಕೆ ಪಡೆಯುವ ಸಲುವಾಗಿ ಮೊಬೈಲ್ ಲೊಕೇಶನ್ ಟ್ರ್ಯಾಕ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಂದಹಾಗೆ ಡ್ರೋನ್ ಪ್ರತಾಪ್ ನನ್ನ ಪೊಲೀಸರು ಬಂಧನ ಮಾಡಲು ಹುಡುಕಾಡುತ್ತಿರುವುದು ಆತ ಸುಳ್ಳು ಹೇಳಿದ್ದಾನೆ ಅಂತಲ್ಲ. ಇದ್ಕಕೆ ಬೇರೆಯೇ ಕಾರಣ ಇದೆ.

Advertisements

ಹೌದು, ಮಾಹಿತಿಗಳ ಪ್ರಕಾರ ಡ್ರೋನ್ ಪ್ರತಾಪ್ ೧೫ನೇ ತಾರೀಖಿನಂದು ಹೈದರಾಬಾದ್ ನಿಂದ ಬೆಂಗಳೂರಿಗೆ ಬಂದಿದ್ದಾನೆ. ಇನ್ನು ಕೋವಿಡ್ 19 ನಿಯಮಗಳಾ ಪ್ರಕಾರ ಹೊರ ರಾಜ್ಯದಿಂದ ಬಂದವರು ಕ್ವಾರಂಟೈನ್ ಆಗಲೇಬೇಕು. ಅದರಂತೆ ಬೆಂಗಳೂರಿನ ತಲಘಟ್ಟಪುರದ ಅಪಾರ್ಟ್ಮೆಂಟ್ ವೊಂದರಲ್ಲಿ ಹೋಮ್ ಕ್ವಾರಂಟೈನ್ ಆಗಿದ್ದಾನೆ. ಇನ್ನು ಸರ್ಕಾರದ ನಿಯಮಗಳ ಪ್ರಕಾರ ೧೪ ದಿನಗಳ ಕಾಲ ಕ್ವಾರಂಟೈನ್ ಆಗಲೇಬೇಕು. ಆದರೆ ತನ್ನ ಮೇಲೆ ಸುಳ್ಳಿನ ಆರೋಪಗಳು ಕೇಳಿಬಂದ ಮೇಲೆ ಡ್ರೋನ್ ಪ್ರತಾಪ್ ಕ್ವಾರಂಟೈನ್ ಆದ ಮಾರನೇ ದಿನವೇ ಬಿಟಿವಿಯ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರೆ.

ಇನ್ನು ಸರ್ಕಾರದ ಕ್ವಾರಂಟೈನ್ ನಿಯಮಗಳ ಪ್ರಕಾರ ಡ್ರೋನ್ ಪ್ರತಾಪ್ ನಿಯಮಗಳನ್ನ ಉಲ್ಲಂಘನೆ ಮಾಡಿರುವುದು ಕಂಡುಬಂದಿದ್ದು ತಲಘಟ್ಟಪುರದ ಪೊಲೀಸ್ ಸ್ಟೇಷನ್ ನಲ್ಲಿ ಬಿಬಿಎಂಪಿ ಅಧಿಕಾರಿಗಳು ಪ್ರತಾಪ್ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ. ಹೀಗಾಗಿ ಪೊಲೀಸರು ಪ್ರತಾಪ್ ನನ್ನ ವಶಕ್ಕೆ ತೆಗೆದುಕೊಳ್ಳಲು ಹುಡುಕಾಡುತ್ತಿದ್ದಾರೆ. ಪ್ರತಾಪ್ ಫೋನ್ ಸ್ವಿಚ್ ಆಫ್ ಆಗಿರುವ ಕಾರಣ ಚಿಕ್ಕಮಗಳೂರು ಹಾಗೂ ಮಂಡ್ಯದ ಭಾಗದಲ್ಲಿ ಇದ್ದಾನೆ ಎನ್ನುವ ಮಾಹಿತಿ ಮೇರೆಗೆ ಪೊಲೀಸರು ಹುಡುಕಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.