ರಾಕಿಂಗ್ ಸ್ಟಾರ್ ಯಶ್ ಮನೆಗೆ ಮತ್ತೊಂದು ಗಂಡು ಮಗ ಆಗಮನ

Cinema

ಲಾಕ್ ಡೌನ್ ವೇಳೆ ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು ಯಶ್ ಕುಟುಂಬಕ್ಕೆ ಮತ್ತೊಂದು ಗಂಡು ಮಗು ಆಗಮನವಾಗಿದೆ. ಹೌದು ನಟ ಯಶ್ ರವರ ಸಹೋದರಿಯಾಗಿರುವ ನಂದಿನಿ ಮತ್ತೆ ತಾಯಿಯಾಗಿದ್ದಾರೆ. ಇವರಿಗೆ ಈ ಮೊದಲೇ ಒಂದು ಗಂಡು ಮಗುವಾಗಿದ್ದು ಇದು ಎರಡನೇ ಮಗುವಾಗಿದೆ.

ಇನ್ನು ಸ್ವತಃ ಯಶ್ ಸಹೋದರಿ ನಂದಿನಿಯವರೇ ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ನಾನು ಎರಡನೇ ಬಾರಿಗೆ ತಾಯಿಯಾಗಿದ್ದು ಎರಡನೇ ಮಗು ಕೂಡ ಗಂಡು ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದು ತಮ್ಮ ಮಗುವಿನ ಪಾದದ ವೀಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈಗ ನಟ ಯಶ್ ಎರಡನೇ ಬಾರಿಗೆ ಮಾವ ಆಗಿದ್ದಾರೆ.

ಇನ್ನು ಯಶ್ ಸಹೋದರಿಯಾಗಿರುವ ನಂದಿನಿ ಉದ್ಯಮಿಯೊಬ್ಬರ ಜೊತೆ ಮದುವೆಯಾಗಿದ್ದು ಎಂಟು ವರ್ಷ ಆಗಿದೆ. ಇನ್ನು ಈಗಾಗಲೇ ಒಂದು ಗಂಡು ಮಗುವಿರುವ ಯಶ್ ಸಹೋದರಿಗೆ ಇದು ಎರಡನೆಯ ಗಂಡು ಮಾಗುವಾಗಿದೆ. ಇನ್ನು ನಟ ಯಶ್ ಗೆ ತನ್ನ ಸಹೋದರಿ ಎಂದರೆ ತುಂಬಾ ಪ್ರೀತಿ ಅಚ್ಚುಮೆಚ್ಚು. ಇನ್ನು ಯಶ್ ಕುಟುಂಬಕ್ಕೆ ಮತ್ತೊಂದು ಗಂಡು ಮಗು ಆಗಮನದ ಕಾರಣ ಸಂಭ್ರಮ ಮನೆ ಮಾಡಿದ್ದು ಅಭಿಮಾನಿಗಳು ಕಾಮೆಂಟ್ ಮಾಡಿ ಶುಭಾಶಯಗಳನ್ನ ತಿಳಿಸುತ್ತಿದ್ದಾರೆ.