ಕನ್ನಡಿಗರ ಮನಸೆಳೆದಿರುವ ರಾಧಾ ಕೃಷ್ಣ ಸೀರಿಯಲ್ ನಟಿ ಯಾರು ಗೊತ್ತಾ? ಈಕೆಯ ವಯಸ್ಸು ಕೇಳಿದ್ರೆ ನೀವು ನಂಬೋದಿಲ್ಲ !

Entertainment

ಕೊರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ಆಗಿದ್ದ ಕಾರಣ ಸಿನಿಮಾಗಳು ಸೇರಿದಂತೆ ಧಾರಾವಾಹಿಗಳ ಚಿತ್ರೀಕರಣಗಳು ನಿಂತುಹೋಗಿದ್ದವು. ಇನ್ನು ಇದೆ ವೇಳೆ ಹಿಂದಿಯ ಅನೇಕ ಪೌರಾಣಿಕ ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿವೆ. ಕನ್ನಡ ಕಿರುತೆರೆಯ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತ ಕಾರಣ ಮಹಾಭಾರತ ಸೇರಿದಂತೆ ರಾಧಾ ಕೃಷ್ಣ, ಪರಮಾವತಾರಿ ಕೃಷ್ಣ, ಗಣೇಶ, ಸೀತೆಯ ರಾಮ ಸೇರಿದಂತೆ ಹಲವು ಹಿಂದಿ ಪೌರಾಣಿಕ ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗುತ್ತಿದ್ದು ಕನ್ನಡಿಗರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿವೆ.

ಇನ್ನು ಈಗ ಪ್ರಸಾರವಾಗುತ್ತಿರುವ ಕನ್ನಡದ ರಾಧಾ ಕೃಷ್ಣ ಅತೀ ಹೆಚ್ಚು ಪ್ರೇಕ್ಷಕರನ್ನ ತನ್ನತ್ತ ಸೆಳೆಯುತ್ತಿದ್ದು ಕೃಷ್ಣ ರಾಧಾ ಸೇರಿದಂತೆ ಎಲ್ಲಾ ಪಾತ್ರಗಳು ಅದ್ಭುತವಾಗಿ ಮೂಡಿಬರುತ್ತಿದೆ. ಪರಿಶುದ್ಧವಾದ ಪ್ರೀತಿ ಹೇಗಿರುತ್ತೆ ಎಂಬುದಕ್ಕೆ ರಾಧಾ ಕೃಷ್ಣ ಅವರ ಮೂಲಕ ಪ್ರೇಕ್ಷಕರ ಮುಂದಿಡಲಾಗುತ್ತಿದೆ. ಇನ್ನು ರಾಧಾ ಕೃಷ್ಣ ಪಾತ್ರಗಳಲ್ಲಿ ಅಭಿನಯಿಸಿರುವ ಇಬ್ಬರು ಈಗಾಗಲೇ ತುಂಬಾ ಫೇಮಸ್ ಆಗಿದ್ದು ಈಗ ಕನ್ನಡ ಪ್ರೇಕ್ಷಕರು ಕೂಡ ಈ ಜೋಡಿಗೆ ಫಿದಾ ಆಗಿಬಿಟ್ಟಿದ್ದಾರೆ.

ಇನ್ನು ರಾಧಾ ಕೃಷ್ಣ ಅವರಿಗೆ ಸಂಬಂಧಪಟ್ಟಂತೆ ಫೋಟೋಗಳು, ಸ್ಟೇಟಸ್ ಗಳು ವಿಡಿಯೋಗಳು ಸೋಷಿಯಲ್ ಮಿಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಇನ್ನು ನಟ ಸುಮೇದ್ ಕೃಷ್ಣನಾಗಿ ಅಭಿನಯಿಸಿದ್ದಾರೆ ಯುವಕರ ಮನಸ್ಸು ಗೆದ್ದಿರುವ ರಾಧಾ ಪಾತ್ರದಾರಿ ನಟಿ ಮಲ್ಲಿಕಾ ಸಿಂಗ್. ಮೂಲತಃ ಕಾಶ್ಮೀರದವರಾಗಿರುವ ಮಲ್ಲಿಕಾ ಸಿಂಗ್ ಈ ಸೀರಿಯಲ್ ಗೋಸ್ಕರವೇ ಬಂದು ಮುಂಬೈನಲ್ಲಿ ನೆಲಸಿದ್ದಾರೆ. ಇನ್ನು ಇದು ಅವರ ಮೊದಲ ಧಾರವಾಹಿ ಕೂಡ. ವಿಶೇಷ ಎಂದರೆ ಮಲ್ಲಿಕಾ ಸಿಂಗ್ ತಾವು ಹತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುವಾಗಲೇ ರಾಧಾ ಕೃಷ್ಣ ಧಾರಾವಾಹಿಗೆ ಆಡಿಷನ್ ನೀಡಿದ್ದರು. ಆದರೆ ರಾಧಾ ಕೃಷ್ಣ ಪ್ರಾರಂಭವಾಗಿದ್ದು ಮಾತ್ರ ೨೦೧೮ರಲ್ಲಿ ಅಂದರೆ. ಮಲ್ಲಿಕಾ ಸಿಂಗ್ ಆಡಿಷನ್ ನೀಡಿದ 30 ತಿಂಗಳ ಬಳಿಕ.

ಇನ್ನು ಮಲ್ಲಿಕಾ ಸಿಂಗ್ ಅವರ ತಾಯಿ ಕ್ಲಾಸಿಕಲ್ ಡ್ಯಾನ್ಸರ್. ಹಾಗಗಿಯೇ ಮಲ್ಲಿಕಾ ಕೂಡ ಉತ್ತಮ ನೃತ್ಯಗಾರ್ತಿಯಾಗಿದ್ದರೆ. ಇನ್ನು ಅಭಿನಯದಲ್ಲಿ ಆಸಕ್ತಿ ಇಲ್ಲದ ಮಲ್ಲಿಕಾ ತಾಯಿಯ ಒತ್ತಾಯದ ಮೇರೆಗೆ ಆಡಿಷನ್ ನಲ್ಲಿ ಭಾಗಿಯಾಗಿದ್ದು ೨ ವರ್ಷಗಳ ಬಳಿಕ ನೀವು ಸೆಲೆಕ್ಟ್ ಆಗಿದ್ದೀರಾ ಎಂದು ಧಾರವಾಹಿ ನಿರ್ಮಾಪಕರ ಕಡೆಯಿಂದ ಫೋನ್ ಕಾಲ್ ಬಂತು ಎಂದು ಹೇಳಲಾಗಿದೆ. ಇನ್ನು ಕೇವಲ ೧೮ ವರ್ಷದವರಾಗಿರುವ ಈ ಮುದ್ದು ಮುಖದ ಚೆಲುವೆ ಚಿತ್ರೀಕರಣದ ಕಾರಣ ತನ್ನ ಪೋಷಕರನ್ನ ಬಿಟ್ಟು ಮುಂಬೈನ ತನ್ನ ಸಂಬಂದಿಕರ ಮನೆಯಲ್ಲಿ ನೆಲ್ಲೆಸಿದ್ದಾರಂತೆ.