ಶಾಕಿಂಗ್: ಇದೆಂತಹ ನಿರ್ಧಾರಕ್ಕೆ ಬಂದುಬಿಟ್ರು ಬಿಗ್ ಬಾಸ್ ಖ್ಯಾತಿಯ ನಟಿ ?

News
Advertisements

ಲಾಕ್ ಡೌನ್ ಹಿನ್ನಲೆಯಲ್ಲಿ ಇತ್ತೀಚಿಗೆ ಖಿನ್ನತೆಗೆ ಒಳಗಾಗುವ ಸೆಲೆಬ್ರೆಟಿಗಳು ತಪ್ಪು ನಿರ್ಧಾರಗಳನ್ನ ಮಾಡಿ ಜೀವ ಕಳೆದುಕೊಳ್ಳುವ ಘಟನೆಗಳು ಹೆಚ್ಚಾಗುತ್ತಿವೆ. ಈಗ ಕನ್ನಡದ ಬಿಗ್ ಬಸ್ ಖ್ಯಾತಿಯ ನಟಿ ಅಂತಹ ಕೆಲಸಕ್ಕೆ ಮುಂದಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಆತಂಕ ಸೃಷ್ಟಿಸುವ ಕೆಲಸ ಮಾಡಿದ್ದಾರೆ. ಕನ್ನಡದ ಖ್ಯಾತ ರಿಯಾಲಿಟಿ ಷೋ ಬಿಗ್ ಬಾಸ್ ಸಂಚಿಕೆ ೩ರಲ್ಲಿ ಸ್ಪರ್ಧಿಯಾಗಿದ್ದ ಜಯಶ್ರೀ ರಾಮಯ್ಯ ಖಿನ್ನತೆಗೆ ಹಾಗೂ ಈ ಪ್ರಪಂಚಕ್ಕೆ ಗುಡ್ ಬೈ ಎಂದು ಬರೆದುಕೊಂಡಿದ್ದಾರೆ.

Advertisements

ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಖ್ಯಾತರಾಗಿದ್ದ ನಟಿ ಜಯಶ್ರೀ ರಾಮಯ್ಯ ಈ ಜಗತ್ತಿಗೆ ಗುಡ್ ಬೈ ಹೇಳುತ್ತಿರುವುದಾಗಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಇದನ್ನ ಕಂಡ ಕುಟುಂಬದವರು ಸ್ನೇಹಿತರು ಆತಂಕಕ್ಕೆ ಒಳಗಾಗಿ ತಡ ಮಾಡ್ದೆ ಅವರನ್ನ ಸಂಪರ್ಕ ಮಾಡುವ ಪ್ರಯತ್ನ ಮಾಡಿದ್ದಾರೆ. ಇಷ್ಟೇ ಅಲ್ಲದೆ ಅವರ ಮನೆಗೆ ಹತ್ತಿರದಲ್ಲಿರುವರು ತಕ್ಷಣವೇ ಹೋಗಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಬಳಿಕ ಜಯಶ್ರೀ ಮನೆಗೆ ರೀಚ್ ಅವರ ಸ್ನೇಹಿತರು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇನ್ನು ಮಾಹಿತಿಗಳ ಪ್ರಕಾರ ಜಯಶ್ರೀಯವರನ್ನ ಆಸ್ಪತ್ರೆಗೆ ಸೇರಿಸಲಾಗಿದ್ದು ಅವರಿಗೆ ಯಾವುದೇ ತೊಂದರೆ ಇಲ್ಲ..ಸೇಫ್ ಆಗಿದ್ದಾರೆ ಎಂದು ಹೇಳಲಾಗಿದೆ. ಇನ್ನು ಕೌಟಂಬಿಕ ಸಮಸ್ಯೆಯಿಂದಾಗಿ ಕೆಲವು ತಿಂಗಳುಗಳಿಂದ ಖಿನ್ನತೆಗೆ ಒಳಗಾಗಿದ್ದರೆ ಎಂದು ಹೇಳಲಾಗಿದ್ದು ಇತ್ತೀಚೆಗಷ್ಟೇ ಜಯಶ್ರೀ ತಮ್ಮ ತಾಯಿಯ ಜೊತೆ ಹೊಸ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಹೇಳಲಾಗಿದೆ.ಇನ್ನು ಸ್ವತಃ ಜಯಶ್ರೀಯವರೇ ನಾನು ಸುರಕ್ಷಿತವಾಗಿದ್ದೇನೆ ಎಂದು ಮತ್ತೆ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.