25 ಕೋಟಿ ಕೊಟ್ಟು ಕಾರ್ ಕೊಂಡ..ಆದ್ರೆ ನಂಬರ್ ಪ್ಲೇಟ್ ಗಾಗಿ ಖರ್ಚು ಮಾಡಿದ್ದು 52 ಕೋಟಿ !

Kannada Mahiti
Advertisements

ಸ್ನೇಹಿತರೇ, ಒಂದೊತ್ತಿನ ಊಟಕ್ಕೂ ಪರದಾಡುವ ಕೋಟ್ಯಂತರ ಜನರ ನಡುವೆ, ಐಷಾರಾಮಿ ಕಾರುಗಳನ್ನ ಕೊಂಡು ಅದರ ಫ್ಯಾನ್ಸಿ ನಂಬರ್ ಗಾಗಿ ಲಕ್ಷಾಂತರ ಹಣ ಸುರಿಯೋ ಕ್ರೇಜ್ ಹೊಂದಿರುವ ಮತ್ತೊಂದು ವರ್ಗದ ಜನರು ಈ ಜಗತ್ತಿನಲ್ಲಿದ್ದಾರೆ. ಹೌದು, ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ 25ಕೋಟಿಯ ಐಷಾರಾಮಿ ಕಾರನ್ನ ಖರೀದಿ ಮಾಡಿದ್ದು ಅದರ ಫ್ಯಾನ್ಸಿ ನಂಬರ್ ಗಾಗಿ ಕೋಟ್ಯಾಂತರ ರೂಪಾಯಿ ಸುರಿದಿದ್ದು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾನೆ. ಸ್ನೇಹಿತರೇ, ವಿಶ್ವದ ಐಷಾರಾಮಿಯಾದ ದುಬಾರಿ ಕಾರ್ ಗಳಲ್ಲಿ ಬುಗಾಟಿ ಚಿರಾನ್ ಕಾರು ಕೂಡ ಒಂದು. ದುಬೈನ ಉದ್ದಿಮಿಯೊಬ್ಬ ಈ ಐಷಾರಾಮಿ ಕಾರನ್ನ ೨೫ ಕೋಟಿಗೆ ಖರೀದಿ ಮಾಡಿದ್ದು ಅದರ ಫ್ಯಾನ್ಸಿ ನಂಬರ್ ಗೋಸ್ಕರ ಆ ಕಾರಿನ ಎರಡು ಪಟ್ಟು ಹಣವನ್ನ ಖರ್ಚು ಮಾಡಿದ್ದಾನೆ.

[widget id=”custom_html-4″]

Advertisements

ಯಾವುದೇ ವಾಹನ ತೆಗೆದುಕೊಂಡರು ನಂಬರ್ ಪ್ಲೇಟ್ ರಿಜಿಸ್ಟ್ರೇಷನ್ ಮಾಡಿಸಲೇಬೇಕಲ್ಲವೇ..ಇನ್ನು ಈ ಉದ್ಯಮಿಯೂ ಕೂಡ ಆ ಅದೃಷ್ಟದ ನಂಬರ್ ತನ್ನದಾಗಲೇ ಬೇಕೆಂದು ಹಠ ಹಿಡಿದ್ದಾನೆ. ಇನ್ನು ಈತನಂತೆ ಹಲವು ಉದ್ಯಮಿಗಳು ತಮ್ಮ ಕಾರಿಗೂ ಅದೇ ನಂಬರ್ ಬೇಕೆಂದು ಪ್ರಯತ್ನ ಮಾಡಿದ್ದಾರೆ. ಇನ್ನು ಆ ಅದೃಷ್ಟದ ಸಂಖ್ಯೆಗಾಗಿ ಪ್ರಯತ್ನ ಪಡುವವರ ಸಂಖ್ಯೆ ಹೆಚ್ಚಾದ ಕಾರಣ ದುಬೈ ಪೊಲೀಸರು ಈ ನಂಬರ್ ಬೇಕಾಗಿರುವವರು ಬಿಡ್ಡಿಂಗ್ ಮಾಡಬೇಕೆಂದು ಬಿಡ್ಡಿಂಗ್ ಆಯೋಜನೆ ಮಾಡಿದ್ದಾರೆ. ಇನ್ನು ದುಬೈನಲ್ಲಿರುವ ಶ್ರೀಮಂತರ ಬಗ್ಗೆ ಹೇಳಬೇಕೇ..

[widget id=”custom_html-4″]

ನಾ ಮುಂದು ತಾ ಮುಂದು ಅಂತ ಪ್ರತಿಷ್ಠೆಗಿಳಿದು ಬಿಡ್ಡಿಂಗ್ ಮಾಡಿದ್ದಾರೆ ಈ ವಿಶೇಷ ನಂಬರ್ ಗೋಸ್ಕರ..ನೀವು ನಂಬೋದಿಲ್ಲ..ಬರೋಬ್ಬರಿ 52 ಕೋಟಿ ಬಿಡ್ ಮಾಡಿದ್ದಾರೆ. ಇನ್ನು ಬುಗಾಟಿ ಚಿರಾನ್ ಕಾರ್ ಕೊಂಡಿದ್ದ ವ್ಯಕ್ತಿ ಆ ನಂಬರ್ ಗೋಸ್ಕರ ಪ್ರತಿಷ್ಠೆಗಿಳಿದಿದ್ದು 52 ಕೋಟಿಗೆ ಆ ನಂಬರ್ ನ್ನ ತನ್ನದಾಗಿಸಿಕೊಂಡಿದ್ದಾನೆ. ಕೋಟ್ಯಾಂತರ ಬಿಡ್ಡಿಂಗಿಗೆ ಕಾರಣವಾದ ಆ ನಂಬರ್ ಯಾವುದು ಗೊತ್ತಾ..ನಂಬರ್ 9. ಇನ್ನು ಪ್ರತಿಷ್ಠೆಗಿಳಿದಿದ್ದ ಈ ವ್ಯಕ್ತಿ ಎರಡು ಬುಗಾಟಿ ಚಿರಾನ್ ಐಷಾರಾಮಿ ಕಾರ್ ಗಳನ್ನ ಕೊಳ್ಳಬಹುದಾಗಿದ್ದ ಕೋಟ್ಯಂತರ ಹಣವನ್ನ ಒಂದು ನಂಬರ್ ಪ್ಲೇಟ್ ಗಾಗಿ ಖರ್ಚು ಮಾಡಿರುವುದು ಸಿಕ್ಕಾಪಟ್ಟೆ ಸುದ್ದಿಯಾಗಿದೆ.

[widget id=”custom_html-4″]

ಜಗತ್ತಿನ ಐಷಾರಾಮಿ ಕಾರ್ ಗಳಲ್ಲಿ ಹೊಂಡಾಗಿರುವ ಬುಗಾಟಿ ಚಿರಾನ್ ಕಾರು ಗಂಟೆಗೆ 490 ಕಿಮೀ ಸ್ಪೀಡ್ ವೇಗದಲ್ಲಿ ಚಲಿಸುತ್ತದೆ ಎಂದು ಹೇಳಲಾಗಿದೆ. ಎರಡು ಕಾರ್ ಕೊಳ್ಳಬಹುದಾಗಿದ್ದಷ್ಟು ಕೋಟಿ ಹಣವನ್ನ ಕೇವಲ ನಂಬರ್ ಪ್ಲೇಟ್ ಗಾಗಿ ವ್ಯಯಿಸಿದ ಆ ವ್ಯಕ್ತಿ ಮೂರ್ಖನೊ ಇಲ್ಲ ಬುದ್ದಿವಂತನೋ ಅನ್ನೋ ಚರ್ಚೆ ನಡೆದಿದೆ ನೆಟ್ಟಿಗರ ನಡುವೆ. ಕೋಟ್ಯಂತರ ಜನ ಒಂದೊತ್ತಿನ ಊಟಕ್ಕೂ ಕಷ್ಟಪಡುತ್ತಿರುವಾಗ ತಮ್ಮ ಕ್ರೇಜ್ ಗೋಸ್ಕರ ಕೋಟ್ಯಂತರ ರೂಪಾಯಿಗಳನ್ನ ವ್ಯಯಿಸುತ್ತಾರೆ ಎಂದರೆ ಈ ಜಗತ್ತು ಎಷ್ಟು ವಿಚಿತ್ರ ನೀವೇ ಹೇಳಿ..