ರಸ್ತೆ ಮಧ್ಯದಲ್ಲೇ ಮಹಿಳೆಯೊಬ್ಬರಿಗೆ ತರಾಟೆ ತೆಗೆದುಕೊಂಡ ಶಾಸಕ ಕುಮಾರ್ ಬಂಗಾರಪ್ಪ

News
Advertisements

ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದ ಶಾಸಕರಾಗಿರುವ ನಟ ರಾಜಕಾರಣಿ ಕುಮಾರ್ ಬಂಗಾರಪ್ಪ ರಸ್ತೆ ಮಧ್ಯೆಯೇ ಮಹಿಳೆಯೊಬ್ಬರಿಗೆ ತರಾಟೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು ಪರ ವಿರೋಧಗಳು ವ್ಯಕ್ತವಾಗಿವೆ. ಇದಕ್ಕೆ ಕಾರಣ ಸಿಮೆಂಟ್ ಅಂಗಡಿಯೊಂದರ ಮುಂದೆ ಮೇನ್ ರೋಡ್ ಗೆ ಅಡ್ಡವಾಗಿ ನಿಲ್ಲಿಸಲಾಗಿದ್ದ ವಾಹನ.

ಸೊರಬ ತಾಲ್ಲೂಕಿನ ಸಾಗರ ರಸ್ತೆಯಲ್ಲಿರುವ ಸಿಮೆಂಟ್ ಅಂಗಡಿಯೊಂದರ ಮುಂದೆ ಅದೂ ರಸ್ತೆಗೆ ವಾಹನವನ್ನ ಅಡ್ಡವಾಗಿ ನಿಲ್ಲಿಸಲಾಗಿದ್ದು ಸಿಮೆಂಟ್ ಅನ್ಲೋಡ್ ಮಾಡಲಾಗುತಿತ್ತು. ಇನ್ನು ರಸ್ತೆಗೆ ವಾಹನ ಅಡ್ಡವಾಗಿ ನಿಲ್ಲಿಸಿದ್ದರಿಂದ ಟ್ರಾಫಿಕ್ ಕೂಡ ಉಂಟಾಗಿತ್ತು. ಇನ್ನು ಇದೆ ವೇಳೆ ಅದೇ ರಸ್ತೆಯಲ್ಲಿ ಬಂದ ಶಾಸಕ ಕುಮಾರ್ ಬಂಗಾರಪ್ಪನವರು ತಮ್ಮ ಕಾರಿನಿಂದ ಇಳಿದು ಬಂದು ಆ ವಾಹನದ ಚಾಲಕನಿಗೆ ತರಾಟೆ ತೆಗೆದುಕೊಂಡರು. ನಿನ್ನ ಡ್ರೈವಿಂಗ್ ಲೈಸೆನ್ಸ್ ಕೊಡು ಎಂದು ಚಾಲಕನಿಂದ ಡಿಎಲ್ ತೆಗೆದುಕೊಂಡರು.

Advertisements

ಬಳಿಕ ಆ ಅಂಗಡಿಯ ಮಾಲೀಕನನ್ನ ಕರೆಯಿರಿ ಎಂದಾಗ ಮಹಿಳೆಯೊಬ್ಬರು ಬಂದರು. ಇನ್ನು ರಸ್ತೆ ಮಧ್ಯೆಯೇ ಆ ಮಹಿಳೆಗೂ ಕೂಡ ರಸ್ತೆಗೆ ಅಡ್ಡಲಾಗಿ ವಾಹನ ನಿಲ್ಲಿಸಿರುವುದಕ್ಕೆ ಏಕ ವಚನದಲ್ಲೇ ತರಾಟೆ ತೆಗೆದುಕೊಂಡರು. ಇನ್ನು ಇದು ನನ್ನ ಕೆಲಸವಲ್ಲ ವಾಹನದ ಚಾಲಕನ ಕೆಲಸ ಎಂದು ಆ ಮಹಿಳೆ ತನಗೇನು ಗೊತ್ತಿಲ್ಲ ಎಂಬಂತೆ ಬೇಜವಾಬ್ದಾರಿಯಿಂದ ಸಮಜಾಯಿಷಿ ನೀಡಿದಾಗ, ಇದರಿಂದ ಕುಪಿತರಾದ ಕುಮಾರ್ ಬಂಗಾರಪ್ಪ ವಾಹನದ ಡ್ರೈವರ್ ವಾಹನವನ್ನ ರಸ್ತೆಗೆ ಅಡ್ಡವಾಗಿ ನಿಲ್ಲಿಸಿದ್ರೆ ಮಾಲೀಕರಾದವರು ಅವರಿಗೆ ತಿಳಿಹೇಳಬೇಕು ಎಂದು ಗದರಿದ್ದಾರೆ. ಬಳಿಕ ಆ ಮಹಿಳೆ ಏನೂ ಮಾತನಾಡದೆ ಅಂಗಡಿಯ ಒಳಗಡೆ ಹೋಗಿದ್ದಾರೆ.

ಇನ್ನು ಇಷ್ಟಕ್ಕೂ ಸುಮ್ಮನಾಗದ ಶಾಸಕರು ಅಂಗಡಿಯ ಪರವಾನಗಿಯನ್ನ ರದ್ದು ಮಾಡಲು ಪುರಸಭೆ ಅಧಿಕಾರಿಗೆ ಇಲ್ಲಿಗೆ ಬರಲು ಹೇಳಿ ಎಂದು ಅಲ್ಲಿದ್ದವರಿಗೆ ಹೇಳಿದ್ದಾರೆ. ಇನ್ನು ಇದರ ನಡುವೆಯೇ ಕುಮಾರ್ ಬಂಗಾರಪ್ಪನವರು ನಡೆದುಕೊಂಡ ರೀತಿಗೆ ಪರ ವಿರೋಧಗಳು ವ್ಯಕ್ತವಾಗಿವೆ. ಅನೇಕರು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಟ್ರಾಫಿಕ್ ಜಾಮ್ ಮಾಡಿದ್ದು ಆ ವಾಹನದ ಚಾಲಕ ಹಾಗೂ ಅಂಗಡಿ ಮಾಲೀಕರ ತಪ್ಪು ಎಂದು ಶಾಸಕರು ಮಾಡಿದ್ದು ಸರಿ ಎಂದು ಅನೇಕರು ಹೇಳಿದ್ದಾರೆ. ಕುಮಾರ್ ಬಂಗಾರಪ್ಪನವರು ಸರಿಯಾಗಿಯೇ ಮಾಡಿದ್ದಾರೆ ಇದರಲ್ಲಿ ಯಾವುದೇ ತಪ್ಪಿಲ್ಲ ಎಂಬುದು ಬಹುತೇಕರ ಅಭಿಪ್ರಾಯ. ಇನ್ನು ಕೆಲವರು ಮಹಿಳೆಯೊಬ್ಬರಿಗೆ ಸಾರ್ವಜನಿಕವಾಗಿ ಬೈದಿದ್ದು ತಪ್ಪು..ಶಾಸಕರು ತಾಳ್ಮೆ ಕಳೆದುಕೊಳ್ಳಬಾರದಿತ್ತು. ಇನ್ನು ಬಡ ಚಾಲಕನ ಲೈಸೆನ್ಸ್ ತೆಗೆದುಕೊಂಡಿದ್ದು ಸರಿ ಇಲ್ಲ ಎಂದು ಹಲವರ ವಾದವಾಗಿದೆ. ಆದರೆ ಕೆಳಗಿರುವ ಈ ವೀಡಿಯೊ ನೋಡಿದ್ರೆ ಶಾಸಕರು ಮಾಡಿದ್ದೆ ಸರಿ ಎಂದು ಸ್ಪಷ್ಟವಾಗಿ ತಿಳಿಯುತ್ತದೆ.. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಶೇರ್ ಮಾಡುವ ಮೂಲಕ ನಮ್ಮನ್ನ ಬೆಂಬಲಿಸಿ..ನಿಮ್ಮ ಪ್ರತಿಯೊಂದು ಲೈಕ್ ಮತ್ತೆ ಶೇರ್ ನಮಗೆ ಸ್ಫೂರ್ತಿಯಾಗಲಿದೆ ಧನ್ಯವಾದಗಳು..

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.