ಕನ್ನಡದಲ್ಲಿ ಪೋಸ್ಟ್ ಮಾಡಿ ಎಂದಿದ್ದಕ್ಕೆ ಕಿರಿಕ್ ಮಾಡಿ ವಿವಾದ ಮಾಡಿಕೊಂಡ ರಾಮಾಚಾರಿ ನಟಿ !

Cinema
Advertisements

ಕನ್ನಡದ ಎಷ್ಟೋ ನಟಿಯರಿಗೆ ತಾವು ಬೆಳೆದು ಸೆಲೆಬ್ರೆಟಿ ಆಗೋದಕ್ಕೆ ಮಾತ್ರ ಕನ್ನಡ ಭಾಷೆ ಬೇಕು ಆದರೆ ಬಳಸೋದಕ್ಕಲ್ಲ ಅನ್ನೋ ತಾತ್ಸಾರ ಮನೋಭಾವ ಅನೇಕರಲ್ಲಿದೆ. ಇತ್ತೀಚಿಗೆ ಕೆಲ ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಬಳಸುವುದನ್ನೇ ಮರೆತುಬಿಟ್ಟಿದ್ದಾರೆ ಅನ್ನಿಸುತ್ತೆ..ಅವರ ಇಂಗ್ಲಿಷ್ ಪೋಸ್ಟ್ ಗಳನ್ನ ನೋಡಿದಾಗ..

ಇತ್ತೀಚೆಗಷ್ಟೇ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟಿ ನಯನಾ ಕೂಡ ಇಂಗ್ಲಿಷ್ ನಲ್ಲಿ ಪೋಸ್ಟ್ ಮಾಡಿದ್ದು ಕನ್ನಡದಲ್ಲಿ ಪೋಸ್ಟ್ ಮಾಡಿ ಎಂದ ವ್ಯಕ್ತಿಯೊಬ್ಬರಿಗೆ ವ್ಯಂಗ್ಯಭರಿತವಾಗಿ ಅಪ್ಪಾ ಕನ್ನಡದ ಭಕ್ತ ಎಂದಿದ್ದಲ್ಲದೆ ಕೀಳುಮಟ್ಟದ ಪದ ಕೂಡ ಬಳಸಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದರು. ಬಳಿಕ ಕ್ಷಮೆ ಕೇಳಿದ್ರು ಬಿಡಿ. ಈಗ ಮತ್ತೊಬ್ಬ ನಟಿ ಇದೆ ರೀತಿಯ ಕಿರಿಕ್ ಮಾಡಿಕೊಂಡಿದ್ದಾರೆ.

Advertisements

ರಾಮಾಚಾರಿ ಚಿತ್ರದಲ್ಲಿ ನಟಿಸಿದ್ದ ಅವಳಿ ಸಹೋದರಿಯರಲ್ಲಿ ಒಬ್ಬರಾದ ಅಶ್ವಿತಿ ಶೆಟ್ಟಿ ವಿವಾದ ಮಾಡಿಕೊಂಡಿರುವ ನಟಿ. ಸಾಮಾಜಿಕ ಜಾಲತಾಣದಲ್ಲಿ ಕನ್ನಡದಲ್ಲಿ ಪೋಸ್ಟ್ ಹಾಕಿ ಎಂದು ಕನ್ನಡಾಭಿಮಾನಿಗಳು ಕೇಳಿದಕ್ಕೆ ಅವರ ಕೊಟ್ಟ ಉತ್ತರ ನೋಡಿ ನೆಟ್ಟಿಗರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ನಟಿ ಅಶ್ವಿತಿ ಶೆಟ್ಟಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದು ಇಂಗ್ಲಿಷ್ ನಲ್ಲೆ ಮಾತನಾಡಿದ್ದರು. ವ್ಯಕ್ತಿಯೊಬ್ಬರು ದಯವಿಟ್ಟು ಕನ್ನಡ ಬಳಸಿ ಮೇಡಂ ಎಂದು ಮನವಿ ಮಾಡಿಕೊಂಡಿದ್ದರು. ಅದಕ್ಕೆ ರಿಪ್ಲಯ್ ಮಾಡಿದ್ದ ನಟಿ ನಿಮ್ಮ ಬಯೋದಲ್ಲಿ ಏಕೆ ಇಂಗ್ಲಿಷ್ ಎಂದು ಮರುಪ್ರಶ್ನೆ ಮಾಡಿದ್ದರು.

ಇನ್ನು ಮತ್ತೊಬ್ಬರು ನಾವು ಕನ್ನಡ ಮಾತ್ರ ಬಳಸಿ ಎಂದು ಹೇಳುತ್ತಿಲ್ಲ..ಕನ್ನಡವನ್ನು ಬಳಸಿ ಎಂದು ಕೇಳಿದ್ದೇವೆ. ನೀವು ಕನ್ನಡದ ನಿರ್ದೇಶಕರ ಜೊತೆ ತಾನೇ ಸಿನಿಮಾ ಮಾಡುತ್ತಿರುವುದು. ನಿಮ್ಮ ನಟನೆಯನ್ನ ಕನ್ನಡದವರು ಹೆಚ್ಚಾಗಿ ನೋಡಿದ್ದಾರೆಯೇ ಹೊರತು ಬೇರೆ ಭಾಷೆಯವರಲ್ಲ..ನಾವು ಇಂಗ್ಲಿಷ್ ಭಾಷೆಯನ್ನ ಊಟದ ಜೊತೆ ಉಪ್ಪಿನಕಾಯಿ ರೀತಿ ಬಳಸುತ್ತೇವೆಯೋ ಹೊರತು ಊಟದ ರೀತಿ ಅಲ್ಲ ಎಂದು ನಟಿ ಅಶ್ವಿತಿ ಶೆಟ್ಟಿಯವರಿಗೆ ಬೆವರಿಳಿಸಿದ್ದಾರೆ. ಇನ್ನು ಈ ನಟಿ ಕೊಟ್ಟ ಉತ್ತರಕ್ಕೆ ಗರಂ ಆಗಿರುವ ನೆಟ್ಟಿಗರು ನಿಮಗೇಕೆ ಇಂಗ್ಲಿಷ್ ಭಾಷೆ ಮೇಲೆ ಇಷ್ಟೊಂದು ವ್ಯಾಮೋಹ, ಕನ್ನಡದಿಂದಲೇ ಬೆಳೆದ ನಿಮಗೆ ಕನ್ನಡದ ಮೇಲೇಕೆ ಇಷ್ಟೊಂದು ತಾತ್ಸಾರ ಮನೋಭಾವ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನು ನಟಿಯ ಮೇಲೆ ವಿರೋಧ ಹೆಚ್ಚಾಗುತ್ತಿದ್ದಂತೆ ಇಂಗ್ಲಿಷ್ ಪೋಸ್ಟ್ ನ್ನ ಡಿಲೀಟ್ ಮಾಡಿದ ನಟಿ ಕನ್ನಡದ ಪೋಸ್ಟ್ ಗಳನ್ನ ಹಾಕಿದ್ದಾರೆ. ಬಳಿಕ ನಟಿ ಅಶ್ವಿತಿ ಶೆಟ್ಟಿಗೆ ಕನ್ನಡ ಬಳಸಿದಕ್ಕೆ ಧನ್ಯವಾದಳು ಎಂದು ಹೇಳಿದ್ದಾರೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಶೇರ್ ಮಾಡುವ ಮೂಲಕ ನಮ್ಮನ್ನ ಬೆಂಬಲಿಸಿ..ನಿಮ್ಮ ಪ್ರತಿಯೊಂದು ಲೈಕ್ ಮತ್ತೆ ಶೇರ್ ನಮಗೆ ಸ್ಫೂರ್ತಿಯಾಗಲಿದೆ ಧನ್ಯವಾದಗಳು..

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.