ನಿಖಿಲ್ ಕುಮಾರಸ್ವಾಮಿ ನಿರ್ಮಾಪಕ ಮುನಿರತ್ನಗೆ ವಿಶ್ ಮಾಡಿದಕ್ಕೆ ಆಕ್ಷೇಪ: ಸ್ಪಷ್ಟನೆ ಕೊಟ್ಟ ಸ್ಯಾಂಡಲ್ವುಡ್ ಯುವರಾಜ

News

ರಾಜಕಾರಣಿ ನಿರ್ಮಾಪಕರೂ ಆಗಿರುವ ಮುನಿರತ್ನರವರಿಗೆ ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಹುಟ್ಟಿದ ಹಬ್ಬದ ಶುಭಾಶಯ ತಿಳಿಸಿದಕ್ಕೆ ನಿಖಿಲ್ ಅಭಿಮಾನಿಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಆದರೆ ಇದು ರಾಜಕೀಯ ಸತ್ಸಂಪ್ರದಾಯ ಎಂದು ನಿಖಿಲ್ ಉತ್ತರಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ನಿರ್ಮಾಪಕ ಮುನಿರತ್ನರವರಿಗೆ ಶುಭ ಕೋರಿ ಪೋಸ್ಟ್ ವೊಂದನ್ನ ಹಾಕಿದ್ದರು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಹಲವಾರು ಕಾಮೆಂಟ್ ಗಳನ್ನ ಮಾಡಿದ್ದರು,. ಆದರೆ ಇದಕ್ಕೆ ಉತ್ತರಿಸಿರುವ ನಿಖಿಲ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ..

“ಮುನಿರತ್ನ ಅವರ ಹುಟ್ಟಹಬ್ಬಕ್ಕೆ ಶುಭ ಕೋರಿದ್ದಕ್ಕೆ ಹಲವರು ಆಕ್ಷೇಪಿಸಿರುವುದು ನನ್ನ ಗಮನಕ್ಕೆ ಬಂತು. ‘ಕುಮಾರಸ್ವಾಮಿ ಅವರಿಗೆ ದ್ರೋಹ ಬಗೆದವರಿಗೆ ನೀವು ಶುಭಕೋರಬಾರದಿತ್ತು‘ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಎಲ್ಲರ ಅಭಿಪ್ರಾಯಗಳನ್ನೂ ಗೌರವಿಸುತ್ತೇನೆ. ನಿರ್ಮಾಪಕನಿಗೆ ನಟನಾಗಿ ನಾನು ಶುಭಕೋರಿದ್ದೇನೇ ಹೊರತು ಯುವ ಜನತಾದಳ ನಾಯಕನಾಗಿ ಅಲ್ಲ.

ರಾಜಕೀಯ ಸಂಘರ್ಷಗಳನ್ನು ಮೀರಿ ದೇವೇಗೌಡರು ಮೋದಿ ಅವರಿಗೆ ಶುಭ ಕೋರುತ್ತಾರೆ. ಮೋದಿ ದೇವೇಗೌಡರಿಗೆ ಶುಭ ಕೋರುತ್ತಾರೆ. ಯಡಿಯೂರಪ್ಪನವರು ಕುಮಾರಸ್ವಾಮಿ ಅವರಿಗೆ ಶುಭ ಆಶಿಸುತ್ತಾರೆ. ಕುಮಾರಸ್ವಾಮಿ ಅವರೂ ಶುಭಾರೈಕೆಗಳನ್ನು ತಿಳಿಸುತ್ತಾರೆ. ಇದು ಕರ್ನಾಟಕದ ರಾಜಕೀಯದ ಸತ್ಸಂಪ್ರದಾಯ. ಹೀಗಾಗಿ ನನ್ನ ಶುಭಕೋರಿಕೆಯಲ್ಲಿ ತಪ್ಪಿರದು ಎಂದು ಭಾವಿಸುತ್ತೇನೆ.

ಮುನಿರತ್ನ ರಾಜಕೀಯವಾಗಿ ಕುಮಾರಸ್ವಾಮಿ ಅವರಿಗೆ ಏನೇ ಮಾಡಿರಬಹುದು. ಅವುಗಳಿಗೆ ಕಣದಲ್ಲಿ ಉತ್ತರಿಸುವ ಪ್ರಯತ್ನ ಮಾಡೋಣ. ಅದರಲ್ಲಿ ಎರಡು ಮಾತಿಲ್ಲ. ಕಾರ್ಯಕರ್ತನಾಗಿ, ಯುವ ಜನತಾದಳದ ಮುಂದಾಳುವಾಗಿ ನನ್ನ ದುಡಿಮೆ ಪಕ್ಷಕ್ಕೆ ಮಾತ್ರ..” ಎಂದು ಮುನಿರತ್ನರವರಿಗೆ ಶುಭ ಕೋರಿದಕ್ಕೆ ಆಕ್ಷೇಪ ವ್ಯಕ್ತಪಡಿಸಿದವರಿಗೆ ಉತ್ತರಿಸಿದ್ದಾರೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಶೇರ್ ಮಾಡುವ ಮೂಲಕ ನಮ್ಮನ್ನ ಬೆಂಬಲಿಸಿ..ನಿಮ್ಮ

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.