[widget id=”custom_html-4″]
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಕೆಲವೊಂದು ಫೋಟೋಗಳು ಹಾಗೂ ವಿಡಿಯೋಗಳು ನೆಟ್ಟಿಗರಲ್ಲಿ ಕುತೂಹಲ ಉಂಟುಮಾಡುವುದಲ್ಲದೆ ಹಲವಾರು ಪ್ರಶ್ನೆಗಳನ್ನ ಹುಟ್ಟು ಹಾಕುತ್ತವೆ. ಈಗ ಅಂತಹುದೇ ವಿಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಬಾರೀ ವೈರಲ್ ಆಗುತ್ತಿದೆ. ಇದು ಬಹಳ ಅಪರೂಪದ ಹಾಗೂ ಅಚ್ಚರಿ ಉಂಟುಮಾಡುವ ವಿಡಿಯೋ ಆಗಿದ್ದು ಅದರಲ್ಲಿ ತಕ್ಷಣಕ್ಕೆ ನಾಲ್ಕು ಆನೆಗಳು ಕಾಣಿಸಲಿದ್ದು ಕೊನೆಯತನಕ ನೋಡಿದಲ್ಲಿ ಮಾತ್ರ ಇದರಲ್ಲಿ ಎಷ್ಟು ಆನೆಗಳಿವೆ ಎಂದು ಗೊತ್ತಾಗಲಿದೆ.
[widget id=”custom_html-4″]
ಹೌದು, ಅದ್ಭುತ ಎನಿಸುವ ಆನೆಗಳಿರುವ ಈ ವಿಡಿಯೋದಲ್ಲಿ ನಮಗೆ ನೋಡಿದ ತಕ್ಷಣ ನಾಲ್ಕು ಆನೆಗಳು ಕಂಡುಬಂದರೂ ಈ ವಿಡಿಯೋವನ್ನ ಪೂರ್ತಿ ನೋಡಿದಾಗ ಮಾತ್ರ ಅಸಲಿ ಸತ್ಯ ತಿಳಿಯಲಿದೆ. ನಿಮ್ಮ ಕಣ್ಣನ್ನ ನೀವೇ ನಂಬುವುದಿಲ್ಲ. ಹೌದು, ವೈಲ್ಡ್ ಲೈನ್ಸ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೊ ಪೋಸ್ಟ್ ಆಗಿದ್ದು ಈ ವಿಡಿಯೋ ನೋಡಿದ ತಕ್ಷಣ ನಾಲ್ಕು ಆನೆಗಳು ಕಾಣಿಸುತ್ತವೆ. ಆದರೆ ಇದರಲ್ಲಿ ನಾಲ್ಕು ಆನೆಗಳಿಲ್ಲ. ಬದಲಿಗೆ ಎಷ್ಟು ಆನೆಗಳಿವೆ ಎಂಬುದನ್ನ ಕೆಳಗಿರುವ ಈ ವೀಡಿಯೊ ನೋಡಿ ಕಾಮೆಂಟ್ ಮಾಡಿ..
[widget id=”custom_html-4″]
Few days back we have posted this image as 7in1 Frame, now watch carefully till the end how this is 7in1 frame. #Elephant Love. #wildlense.@susantananda3 @ParveenKaswan @SudhaRamenIFS @Saket_Badola https://t.co/rvdXnGohrT pic.twitter.com/sN7Y9ag4me
— WildLense® (@WildLense_India) July 30, 2020
ಇನ್ನು ಕೆಲವು ದಿನಗಳ ಹಿಂದಷ್ಟೇ ಈ ನಾಲ್ಕು ಆನೆಗಳ ಫೋಟೋವನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಫೋಟೋ ನೋಡಿದ ನೆಟ್ಟಿಗರು ಫಿದಾ ಆಗಿದ್ದರು. ಆದರೆ ಈ ಆನೆಗಳ ಹಿಂದೆಯೇ ಪುಟಾಣಿ ಆನೆಗಳಿರುವುದನ್ನ ನೋಡಿ ಕ್ಯಾಮರಾ ಮಾಡಿದ ವ್ಯಕ್ತಿಯ ಕೈಚಳಕವನ್ನ ನೆಟ್ಟಿಗರು ಹಾಡಿ ಹೊಗಳಿದ್ದಾರೆ. ಇನ್ನು ಈ ವಿಡಿಯೋ ೭೦ ಸೆಕೆಂಡುಗಳ ಕಾಲ ಇದ್ದು ನೀರು ಕುಡಿದ ಆನೆಗಳು ಮುಂದೆ ಹೋದಾಗ ಪುಟಾಣಿ ಆನೆಗಳಿರುವುದು ಕಾಣಿಸುತ್ತದೆ. ಹಾಗಾದ್ರೆ ಒಟ್ಟು ಎಷ್ಟು ಆನೆಗಳಿವೆ ಎಂಬುದನ್ನ ಕಾಮೆಂಟ್ ಮಾಡಿ ತಿಳಿಸಿ..