ಕನ್ನಡದಲ್ಲೇ UPSC ಪರೀಕ್ಷೆ ಬರೆದು ಆಯ್ಕೆಯಾದ ಹಳ್ಳಿ ಯುವಕ ! ಪಡೆದ ರ‍್ಯಾಂಕ್ ಎಷ್ಟು ಗೊತ್ತಾ ?

Inspire
Advertisements

ನಮಸ್ಕಾರ ಸ್ನೇಹಿತರೆ, ಯುಪಿಎಸ್‍ಸಿ ಪರೀಕ್ಷೆ ಬರೆದು ಉತ್ತಮ ರ್ಯಾಂಕ್ ನ್ನ ಪಡೆದುಕೊಳ್ಳಬೇಕೆನ್ನುವುದು ಅನೇಕ ಯುವಕ ಯುವತಿಯರ ಜೀವನದ ಕನಸಾಗಿರುತ್ತೆ. ಆದರೆ ಅದಕ್ಕೆ ಅದರದ್ದೇ ಆದ ಪರಿಶ್ರಮ ಅತ್ಯಗತ್ಯ. ಅದರಲ್ಲೂ ತಮ್ಮ ಮಾತೃಭಾಷೆಯಲ್ಲೇ ಯುಪಿಎಸ್‍ಸಿ ಪರೀಕ್ಷೆ ಬರೆದು ಪಾಸಾದರೆ ಹೇಗಿರುತ್ತೆ ಆಲ್ವಾ..ಹೌದು ಸ್ನೇಹಿತರೆ ಹಾಸನದ ಯುವಕನೊಬ್ಬ ಕನ್ನಡದಲ್ಲಿ ಯುಪಿಎಸ್‍ಸಿ ಪರೀಕ್ಷೆ ಬರೆಯುವ ಮೂಲಕ 594 ನೇ ರ‍್ಯಾಂಕ್ ಇಡೀ ಜಿಲ್ಲೆಗೆ ಕೀರ್ತಿ ಹೆಚ್ಚಿಸುವಂತೆ ಮಾಡಿದ್ದಾನೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹರಳಕಟ್ಟೆ ಎಂಬ ಗ್ರಾಮದ ದರ್ಶನ್ ಈ ಅಪ್ರತಿಮ ಸಾಧನೆ ಮಾಡಿದ ಯುವಕ. ಇನ್ನು ತಮ್ಮ ಸ್ವಂತ ಊರಿನಲ್ಲೆ ಒಂದರಿಂದ ನಾಲ್ಕನೇ ತರಗತಿವರೆಗಿನ ವಿಧ್ಯಾಭ್ಯಾಸವನ್ನ ಮುಗಿಸಿದ್ದಾನೆ.

ಇನ್ನು ದರ್ಶನ್ ಐದನೇ ತರಗತಿಯಿಂದ ಎಂಟನೇ ತರಗತಿವರೆಗಿನ ವಿಧ್ಯಾಭ್ಯಾಸವನ್ನ ರಾಷ್ಟ್ರೋತ್ಥಾನ ಎಂಬ ಶಾಲೆಯಲ್ಲಿ ಓದಿದ್ದಾನೆ. ಇನ್ನು ತಿಪಟೂರಿನ SVP ಶಾಲೆಯಲ್ಲಿ ಒಂಬತ್ತರಿಂದ ಹತ್ತನೇ ತರಗತಿವರೆಗೆ ಓದಿದ್ದಾನೆ. ಇನ್ನು ಓದಿನಲ್ಲಿ ಚುರುಕಾಗಿದ್ದ ಹಳ್ಳಿಯ ಯುವಕ ದರ್ಶನ್ ೨೦೦೯ರಲ್ಲೇ ಇಂಜಿನಿಯರಿಂಗ್ ಪದವಿ ಮುಗಿಸಿ ಐಟಿ ದೈತ್ಯ ಇನ್ಫೋಸಿಸ್ ನಲ್ಲಿ ಸುಮಾರು ಆರು ವರ್ಷ ಕೆಲಸ ಮಾಡಿದ್ದಾನೆ.

Advertisements

ಹಳ್ಳಿಯಲ್ಲಿ ಹುಟ್ಟಿ ಬೆಳೆದ ದರ್ಶನ್ ಅಮೆರಿಕಾದಲ್ಲೂ ಕೂಡ ಎರಡೂ ವರ್ಷಗಳ ಕಾಲ ಉದ್ಯೋಗ ಮಾಡಿದ್ದಾರೆ. ಆದರೆ ಇಷ್ಟಕ್ಕೆ ತೃಪ್ತನಾಗದ ದರ್ಶನ್ ಅಧಿಕಾರಿಯಾಗಿ ಜನರ ಸೇವೆ ಮಾಡಬೇಕೆಂಬ ಹೆಬ್ಬೆಯಕೆಯಿಂದ ಇನ್ಫೋಸಿಸ್ ನ ಕೆಲಸಕ್ಕೆ ರಾಜೀನಾಮೆ ಕೊಟ್ಟು UPSC ಪರೀಕ್ಷೆ ಬರೆದು ಅದರಲ್ಲಿ ನಾಲ್ಕನೇ ಬಾರಿಗೆ ಉತ್ತೀರ್ಣರಾಗುವಲ್ಲಿ ಸಫಲರಾಗಿದ್ದಾರೆ. ವಿಶೇಷ ಏನೆಂದರೆ ಈ ಬಾರಿಯ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಯುಪಿಎಸ್‍ಸಿ ಪರೀಕ್ಷೆ ಬರೆದು ಆಯ್ಕೆಯಾದ ಏಕೈಕ ವ್ಯಕ್ತಿ ದರ್ಶನ್ ಎನಿಸಿಕೊಂಡಿರುವುದು ಕನ್ನಡಿಗರ ಸಂತಸಕ್ಕೆ ಕಾರಣವಾಗಿದೆ.ಇನ್ನು ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ದರ್ಶನ್ ನನಗೆ ಯಾವುದೇ ಹುದ್ದೆ ಸಿಕ್ಕರೂ ಸಂತೋಷವೇ ಎಂದು ಹೇಳಿದ್ದಾರೆ.

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.