ಅಂದು ಸ್ಯಾಂಡಲ್ವುಡ್ ನ ಖ್ಯಾತ ಬಾಲನಟಿ..ಈಗ IAS ಅಧಿಕಾರಿ ! ಇಡೀ ದೇಶಕ್ಕೆ 167ನೇ ರ್ಯಾಂಕ್

Cinema Inspire
Advertisements

[widget id=”custom_html-4″]

ನಮಸ್ತೇ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ಬಾಲನಟಿಯಾಗಿ ಮಿಂಚಿದ ಕೀರ್ತನಾ ಅವರ ಬಗ್ಗೆ ನಿಮಗೆ ಗೊತ್ತಿರಬೇಕಲ್ಲವೇ. ಚಂದನವನದ ಟಾಪ್ ನಂತರ ಜೊತೆಯಲಿ ಬಾಲ ನಟಿಯಾಗಿ ನಟಿಸಿದ್ದಾರೆ. ನಟ ಕಲ್ಯಾಣ್ ಕುಮಾರ್, ಶಿವರಾಜ್ ಕುಮಾರ್, ಶಶಿ ಕುಮಾರ್, ರಮೇಶ್, ಉಪೇಂದ್ರ ಸೇರಿದಂತೆ ಹಲವು ಸ್ಟಾರ್ ನಟ ನಟಿಯರ ಜೊತೆಯಲ್ಲಿ ಬಾಲನಟಿಯಾಗಿ ಮಿಂಚಿದ್ದಾರೆ ಕೀರ್ತನಾ. ಚಿಕ್ಕ ವಯಸ್ಸಿನಲ್ಲಿರುವಾಗಲೇ ತನ್ನ ಅದ್ಭುತ ನಟನೆಗೆ ಹಲವಾರು ಪ್ರಶಸ್ತಿಗಳನ್ನ ಕೂಡ ಪಡೆದುಕೊಂಡಿದ್ದಾರೆ.

[widget id=”custom_html-4″]

Advertisements

ಇನ್ನು ನಟನೆಯ ಜೊತೆಗೆ ಓದಿನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಬಾಲನಟಿ ಕೀರ್ತನಾ ಈಗ ಐಎಎಸ್ ಅಧಿಕಾರಿಯಾಗಿಕೆಲಸ ಮಾಡುತ್ತಿದ್ದಾರೆ. ಈಗಾಗಲೇ BBMPಯಲ್ಲಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿರುವ ಕೀರ್ತನಾ IAS ಅಧಿಕಾರಿಯಾಗಿ ಜನರ ಸೇವೆ ಮಾಡಬೇಕೆಂಬ ಛಲದಿಂದ ಸತತವಾಗಿ ಆರನೇ ಪ್ರಯತ್ನದಲ್ಲಿ ಭಾರತದ ಅತೀ ದೊಡ್ಡ ಪರೀಕ್ಷೆ ಐಎಎಸ್ ಉತ್ತೀರ್ಣರಾಗಿ 167ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

ನಟ ಶಿವರಾಜ್ ಕುಮಾರವರು ನಟಿಸಿದ್ದ ದೊರೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಕೀರ್ತನಾ ಇಲ್ಲಿವರೆಗೂ ಸುಮಾರು ನೂರಕ್ಕಿಂತ ಅಧಿಕ ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾರೆ. ಇನ್ನು ಉಪೇಂದ್ರರವರ ಎ ಚಿತ್ರದಲ್ಲೂ ತಮ್ಮ ಅಭಿನಯ ತೋರಿದ್ದಾರೆ ಕೀರ್ತನಾ. ಇಷ್ಟೇ ಅಲ್ಲದೆ ತಮ್ಮ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿ ಜೊತೆಗೆ ರಾಷ್ಟೀಯ ಬಾಲ ಪುರಸ್ಕಾರಕ್ಕೂ ಭಾಜನರಾಗಿದ್ದಾರೆ. ತನ್ನ ನಟನೆಯಿಂದಲೇ ಎಲ್ಲರನ್ನು ರಂಜಿಸುತ್ತಿದ್ದ ನಟಿ ಕೀರ್ತನಾ ಈಗ ಐಎಸ್ ಅಧಿಕಾರಿಯಾಗಿದ್ದು, ಶೋ’ಷಿತ ವರ್ಗದವರ, ಬಡವರ ಪರವಾಗಿ ಉತ್ತಮ ಕೆಲಸಗಳನ್ನ ಮಾಡಲಿ ಎಂದು ನಾವೆಲ್ಲರೂ ಆಶಿಸೋಣ.