ಜಗತ್ತಿನ ಹಿಂದೂಗಳ ಪಾಲಿಗೆ ಐತಿಹಾಸಿಕ ದಿನ ಎಂದ ಪಾಕ್ ಮಾಜಿ ಆಟಗಾರ

News Sports
Advertisements

ರಾಮ ಜನ್ಮಭೂಮಿ ಅಯೋಧ್ಯಯಲ್ಲಿ ಶ್ರೀರಾಮನ ಮಂದಿರ ಕಟ್ಟಬೇಕು ಎನ್ನುವುದು ಜಗತ್ತಿನ ಕೋಟ್ಯಾಂತರ ಹಿಂದೂಗಳ ಕನಸಾಗಿತ್ತು. ಈಗ ಅಯೋಧ್ಯಲ್ಲಿ ರಾಮ ಮಂದಿರದ ಶಿಲಾನ್ಯಾಸದ ಭೂಮಿ ಪೂಜೆ ನೆರವೇರಿದ್ದು ಹಿಂದೂಗಳ ಶತ ಶತಮಾನಗಳ ಕನಸು ಕೆಲವೇ ವರ್ಷಗಳಲ್ಲಿ ಈಡೇರಲಿದೆ. ಹೌದು ಆಗಸ್ಟ್ ೫ ಜಗತ್ತಿನಲ್ಲಿರುವ ಎಲ್ಲಾ ಹಿಂದೂಗಳ ಪಾಲಿಗೆ ಅದ್ಭುತ ದಿನವಾಗಿದೆ. ಇನ್ನು ಪಾಕಿಸ್ತಾನದ ಮಾಜಿ ಆಟಗಾರರೊಬ್ಬರು ಅಯೋಧ್ಯಯಲ್ಲಿ ರಾಮ ಮಂದಿರದ ಭೂಮಿ ಪೂಜೆ ನೆರವೇರಿದ್ದು ಇದು ಹಿಂದೂಗಳ ಪಾಲಿಗೆ ಐತಿಹಾಸಿಕ ದಿನ ಎಂದು ಹೇಳಿದ್ದು ಶ್ರೀರಾಮ ನಮಗೆ ಆದರ್ಶ ಪುರುಷ ಎಂದು ಟ್ವೀಟ್ ಮಾಡಿದ್ದಾರೆ.

ಹೌದು ಸ್ನೇಹಿತರೆ, ಹೀಗೆ ಹೇಳಿದ್ದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಆಗಿರುವ ಡ್ಯಾನಿಶ್ ಕನೇರಿಯಾ. ಶ್ರೀರಾಮನ ಸೌಂದರ್ಯವು ಅವನ ಹೆಸರಿನಲ್ಲಿ ಇಲ್ಲ, ಅವನ ವ್ಯಕ್ತಿತ್ವದಲ್ಲಿದೆ. ದುಷ್ಟಶಕ್ತಿಗಳ ಮೇಲಿನ ವಿಜಯದ ಸಂಕೇತವೇ ಶ್ರೀರಾಮ. ಇಂದು ಜಗತ್ತಿನಲ್ಲೆಡೆ ಸಂಭ್ರಮದ ದಿನ..ಬಹಳ ತೃಪ್ತಿ ಪಟ್ಟ ಕ್ಷಣದ ದಿನ..ಜೈ ಶ್ರೀರಾಮ್ ಎಂದು ಡ್ಯಾನಿಶ್ ಕನೇರಿಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದು ಜೊತೆಗೆ ಪ್ರಭು ಶ್ರೀರಾಮನ ಚಿತ್ರವನ್ನೂ ಸಹ ಪೋಸ್ಟ್ ಮಾಡಿಕೊಂಡಿದ್ದಾರೆ.

ಭಗವಾನ್ ಶ್ರೀರಾಮನ ಜೀವನವು ನಮಗೆ ಸಹೋದರತೆ ಮತ್ತು ಏಕತೆಯನ್ನ ಕಲಿಸುತ್ತದೆ. ಇನ್ನು ನಮ್ಮ ಧಾರ್ಮಿಕ ನಂಬಿಕೆಗಳೊಂದಿಗೆ ಯಾರಿಗೂ ಯಾವುದೇ ತರಹದ ಸಮಸ್ಯೆ ಇರಬಾರದು ಎಂದು ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇನ್ನು ಡ್ಯಾನಿಶ್ ಕನೇರಿಯಾ ಅವರ ಬಗ್ಗೆ ಹೇಳಬೇಕೆಂದರೆ ಪಾಕಿಸ್ತಾನ ಕ್ರಿಕೆಟ್ ತಂಡದ ಪರ ಆಡಿದ ಎರಡನೇ ಹಿಂದೂ ಆಟಗಾರ. ಇನ್ನು ಇವರಿಗೂ ಮುನ್ನ ಇವರ ಸಹೋದರ ಸಂಭಂದಿಯಾಗಿರುವ ಅನಿಲ್ ದಲಪತ್ ಬ್ಯಾಟ್ಸಮನ್ ವಿಕೆಟ್ ಕೀಪರ್ ಆಗಿ ಪಾಕ್ ತಂಡದ ಪರ ಆಡಿದ್ದಾರೆ.