ಚೀನಾಗೆ ಮತ್ತೊಂದು ಬಿಗ್ ಶಾಕ್ ! ರಾತ್ರೋ ರಾತ್ರಿ ಮಹತ್ವದ ನಿರ್ಧಾರಕ್ಕೆ ಬಂದ ಟ್ರಂಪ್ ?

News
Advertisements

ನಮಸ್ತೇ ಸ್ನೇಹಿತರೆ, ಕುತಂತ್ರಿ ಚೀನಾ ದೇಶಕ್ಕೆ ಬುದ್ದಿ ಕಲಿಸುವ ಸಲುವಾಗಿ ಭಾರತದಲ್ಲಿ ಲಕ್ಷಾಂತರ ಬಳಕೆದಾರರನ್ನ ಹೊಂದಿದ್ದ ಚೀನಾ ನಿರ್ಮಿತ ಟಿಕ್ ಟಾಕ್ ಜೊತೆಗೆ 59 ಆ್ಯಪ್ ಗಳನ್ನ ಭಾರತ ಈಗಾಗಲೇ ಬ್ಯಾನ್ ಮಾಡಿದೆ. ಈಗ ಇದರ ಬೆನ್ನಲ್ಲೇ ಅಮೆರಿಕಾ ಕೂಡ ಟಿಕ್ ಟಾಕ್ ನ್ನ ಸಂಪೂರ್ಣವಾಜಿ ಬ್ಯಾನ್ ಮಾಡುವ ಮಹತ್ವದ ನಿರ್ಧಾರ ಮಾಡಿದ್ದು ಚೀನಾಕ್ಕೆ ಬಿಗ್ ಪಂಚ್ ನೀಡಿದೆ. ಇನ್ನು ಇದರ ಹಿನ್ನಲೆಯಲ್ಲಿ ಅಮೆರಿಕಾ ಅಧ್ಯಕ್ಷ ಟ್ರಂಪ್ ಟಿಕ್ ಟಾಕ್ ನ್ನ ಸಂಪೂರ್ಣವಾಗಿ ನಿಷೇಧ ಮಾಡುವ ಆದೇಶಕ್ಕೆ ಹೊರಡಿಸಿದ್ದಾರೆ ಎನ್ನಲಾಗಿದೆ.

ಇನ್ನು ಮಾತೃ ಸಂಸ್ಥೆಯಾಗಿರುವ ಬೈಟ್ ಡ್ಯಾನ್ಸ್ ನ ಈ ಟಿಕ್ ಟಾಕ್ ಆ್ಯಪ್ ಬಳಕೆದಾರರಿಂದ ತನ್ನಷ್ಟಕ್ಕೆ ತಾನೇ ಬಳಕೆದಾರ ಇರುವ ಸ್ಥಳ, ಆಸ್ಥಳದ ಬ್ರೌಸಿಂಗ್ ಮತ್ತು ಸರ್ಚ್ ಹಿಸ್ಟರಿ ಮಾಹಿತಿಯನ್ನ ಸಂಗ್ರಹ ಮಾಡುತ್ತಿದ್ದು ಇದನ್ನ ಚೀನಾ ಸರ್ಕಾರಕ್ಕೆ ನೀಡುತ್ತಿದೆ ಎಂಬ ಆರೋಪ ಇದ್ದು ದೇಶದ ಭದ್ರತೆಗೆ ಅಪಾಯ ಎಂಬ ದೃಷ್ಟಿಯಿಂದ ಟಿಕ್ ಟಾಕ್ ನ್ನ ಸಂಪೂರ್ಣವಾಗಿ ನಿಷೇಧ ಮಾಡಲು ಅಮೆರಿಕಾ ಸರ್ಕಾರ ನಿರ್ಧಾರ ಮಾಡಿದೆ ಎಂದು ಹೇಳಲಾಗಿದೆ.

Advertisements

ಇನ್ನು ಇದಾರ ಮುಖಾಂತರ ಅಮೆರಿಕನ್ನರ ಮಾಹಿತಿಯೆಲ್ಲಾ ಚೀನಾ ಸರ್ಕಾರದ ಕೈಗೆ ಸೇರಲಿದ್ದು ದೇಶದ ಭದ್ರತೆಗೆ ತೊಂದರೆ ಸೇರಿದಂತೆ ಜನರನ್ನೂ ಕೂಡ ಬ್ಲಾಕ್ ಮೇಲ್ ಮಾಡುವ ಅಪಾಯ ಎದುರಾಗಲಿದೆ ಎಂದು ಅಮೆರಿಕಾ ಹೇಳಿದೆ. ಇನ್ನು ಮುಂದಿನ ೪೫ ದಿನಗಳಲ್ಲಿ ಟಿಕ್ ಟಾಕ್ ಸಂಪೂರ್ಣವಾಗಿ ಅಮೇರಿಕಾದಲ್ಲಿ ಬ್ಯಾನ್ ಆಗಲಿದೆ. ಒಟ್ಟಿನಲ್ಲಿ ಚೀನಾ ತಾನು ಮಾಡುವ ಕುತಂತ್ರಕ್ಕೆ ಸರಿಯಾದ ಫಲವನ್ನೇ ಪಡೆಯುತ್ತಿದೆ.