ವಾಸುದೇವ ಶ್ರೀ ಕೃಷ್ಣನಿಗೆ ಸುದರ್ಶನ ಚಕ್ರ ಸಿಕ್ಕಿದ್ದು ಹೇಗೆ ? ಇದನ್ನ ಕೊಟ್ಟಿದ್ದು ಯಾರು ಗೊತ್ತಾ ?

Adhyatma
Advertisements

ಶ್ರೀಮನ್ನಾರಾಯಣನ ದಶ ಅವತಾರಗಳಲ್ಲಿ ಎಂಟನೆಯ ಹಾಗೂ ಸಂಪೂರ್ಣವಾದ ಅವತಾರ ಎಂದರೆ ಕೃಷ್ಣಾವತಾರ. ದುಷ್ಟ ಅಧರ್ಮಿಯರಿಂದ ತುಂಬಿ ಹೋಗಿದ್ದ ಭೂಭಾರವನ್ನ ಕಡಿಮೆ ಮಾಡಿ ಧರ್ಮ ಸಂಸ್ಥಾಪನೆ ಮಾಡುವ ಸಲುವಾಗಿ ದ್ವಾಪರಯುಗದಲ್ಲಿ ಮಹಾ ವಿಷ್ಣುವಿನ ಶ್ರೀ ಕೃಷ್ಣ ಅವತಾರವಾಗುತ್ತದೆ. ಶ್ರೀಹರಿಯ ಶಯನವಾದ ಆದಿಶೇಷ ಬಲರಾಮನಾಗಿ ಜನಿಸುತ್ತಾನೆ. ಇನ್ನು ಭಗವಾನ್ ಶ್ರೀ ಕೃಷ್ಣನ ಪ್ರಮುಖ ಆಯುಧವೆಂದರೆ ಸುದರ್ಶನ. ಮಹಾದೇವನ ತ್ರಿಶೂಲದಂತೆ ಇಡೀ ಬ್ರಹ್ಮಾಂಡದಲ್ಲಿ ಅತ್ಯಂತ ಶಕ್ತಿಶಾಲಿಯಾದ ಅಸ್ತ್ರ. ಒಂದು ಬರಿ ಈ ಸುದರ್ಶನವನ್ನ ಪ್ರಯೋಗ ಮಾಡಿದ್ರೆ ದುಷ್ಟರ ಸ’ರ್ವನಾಶ ಕಟ್ಟಿಟ್ಟಬುತ್ತಿ, ಸಂ’ಹಾರ ಮಾಡದೇ ಹಿಂತಿರುಗುವುದೇ ಇಲ್ಲ ಎಂದು ಸ್ವಯಂ ಶ್ರೀಕೃಷ್ಣನೇ ಹೇಳಿದ್ದಾನೆ.

[widget id=”custom_html-4″]

Advertisements

ಇನ್ನು ಮೊದಲಿಗೆ ಪರಬ್ರಹ್ಮನಾದ ಮಹಾವಿಷ್ಣುವಿಗೆ ಈ ಮಹಾ ಆಯುಧ ಸುದರ್ಶನ ಚಕ್ರ ಸಿಕ್ಕಿದ್ದು ಹೇಗೆ ಎಂಬುದರ ಪುರಾಣದಲ್ಲಿ ಹಲವಾರು ಕತೆಗಳಿವೆ. ಶಿವಪುರಾಣದಲ್ಲಿ ಉಲ್ಲೇಖ ಮಾಡಿರುವಂತೆ ಮಹಾ ವಿಷ್ಣುವು ದುಷ್ಟರ ಸಂ’ಹಾರ ಮಾಡುವ ಸಲುವಾಗಿ ಮಹಾ ಅಸ್ತ್ರವೊಂದು ಬೇಕೆಂದು ತಿಳಿದು ಅದನ್ನ ಪಡೆಯುವ ಸಲುವಾಗಿ ಮ ಹಾದೇವನನ್ನ ಕುರಿತು ಅನೇಕ ವರ್ಷಗಳ ಕಾಲ ತಪಸ್ಸು ಮಾಡುತ್ತಾನೆ. ಇನ್ನು ಮಹಾದೇವನನ್ನ ಮೆಚ್ಚಿಸುವ ಸಲುವಾಗಿ ಒಂದು ಸಾವಿರ ಕಮಲಗಳಿಂದ ಪೂಜೆ ಮಾಡಲು ಭಗವಾನ್ ವಿಷ್ಣುವು ರೆಡಿಯಾಗುತ್ತಾರೆ.

[widget id=”custom_html-4″]

ಇನ್ನು ಪೂಜೆಗೆ ಬೇಕಾದ ಸಾವಿರ ಕಮಲಗಳು ಹಾಗೂ ಪೂಜಾ ಸಾಮಗ್ರಿಗಳನ್ನ ಹೊಂದಿಸಿ ಮಹಾಶಿವನ ಪೂಜೆ ಶುರು ಮಾಡುತ್ತಾರೆ. ಇನ್ನೇನು ಪೂಜೆ ಪೂರ್ತಿಗೊಳ್ಳಬೇಕು ಎನ್ನುವ ವೇಳೆ ಸಾವಿರ ಕಮಲಗಳಲ್ಲಿ ಕೊನೆಯದಾಗಿ ಒಂದು ಹೂ ಕಡಿಮೆಯಾಗುತ್ತೆ. ಆಗ ಭಗವಾನ್ ವಿಷ್ಣುವು ತನ್ನ ಪೂಜೆಯಲ್ಲಿ ಯಾವುದೇ ವಿಘ್ನ ಉಂಟಾಗಬಾರದೆಂದು ಕಮಲದ ಬದಲಾಗಿ ತನ್ನ ಕಣ್ಣನ್ನೇ ಕಿತ್ತು ಶಿವಲಿಂಗಕ್ಕೆ ಅರ್ಪಿಸುತ್ತಾನೆ. ಅಸಲಿಗೆ ಸ್ವಯಂ ಮಹಾದೇವನೇ ವಿಷ್ಣುವಿನ ಭಕ್ತಿಯನ್ನ ಪರೀಕ್ಷಿಸುವ ಸಲುವಾಗಿ ಒಂದು ಕಮಲವನ್ನ ಮಾಯ ಮಾಡಿರುತ್ತಾನೆ ಎಂದು ಪುರಾಣಗಳಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ಶ್ರೀ ಹರಿಯ ತಪಸ್ಸಿಗೆ ಮೆಚ್ಚಿದ ಶಿವಶಂಕರ ಪ್ರತ್ಯಕ್ಷನಾಗಿ ತನ್ನನ್ನ ಕುರಿತು ತಪಸ್ಸು ಮಾಡಲು ಕಾರಣವೆಂದು ಕೇಳುತ್ತಾನೆ.

[widget id=”custom_html-4″]

ಆಗ ನಾರಾಯಣನು ದುಷ್ಟ ಅಸುರ ರಕ್ಕಸರನ್ನ ಸಂ’ಹಾರ ಮಾಡುವ ಸಲುವಾಗಿ ತನಗೊಂದು ಮಹಾ ಅಸ್ತ್ರ ಬೇಕೆಂದು ಕೇಳುತ್ತಾನೆ. ಆಗ ಶಿವನು ವಿಷ್ಣುವಿಗೆ ವರವಾಗಿ ಸುದರ್ಶನ ಚಕ್ರವನ್ನ ನೀಡುತ್ತಾನೆ. ಇನ್ನು ಈ ಸುದರ್ಶನ ಚಕ್ರವೂ ಶತ್ರುಗಳನ್ನ ಹಿಂಬಾಲಿಸಿಕೊಂಡು ಹೋಗಿ ಸಂ’ಹಾರ ಮಾಡುವ ಮಹಾ ಶಕ್ತಿ ಹೊಂದಿದೆ.

ಇನ್ನು ಈ ಸುದರ್ಶನ ಮಹಾ ಅಸ್ತ್ರ ಕೃಷ್ಣನ ಕೈಗೆ ಬಂದಿದ್ದು ಹೇಗೆ ಎಂದು ನೋಡುವುದಾದರೆ ದ್ವಾಪರ ಯುಗದ ಸಂಧರ್ಭದಲ್ಲಿ ಎಲ್ಲರಿಗೂ ಆರೋಗ್ಯ ಪ್ರಧಾನ ಮಾಡುವ ಅಗ್ನಿದೇವ ಯಜ್ಞಗಳಿಂದ ಬಂದಿದ್ದ ತುಪ್ಪನ್ನ ಸಾಕಷ್ಟು ತಿಂದಿದ್ದ ಅನಾರೋಗ್ಯ ಈಡಾಗಿರುತ್ತಾನೆ. ಇನ್ನು ಇದೆ ಸಮಯದಲ್ಲಿ ಅಗ್ನಿದೇವನ ಸಹಾಯಕ್ಕೆ ಬಂದ ಅರ್ಜುನ ಮತ್ತು ವಾಸುದೇವ ಕೃಷ್ಣ ಖಂಡವನ ದಹನ ಮಾಡಲು ಸಹಾಯ ಮಾಡುತ್ತಾರೆ. ಇನ್ನು ಇದರಿಂದ ಸಂತಸಪಟ್ಟ ಅಗ್ನಿದೇವನು ಶ್ರೀಕೃಷ್ಣನಿಗೆಸುದರ್ಶನ ಚಕ್ರವನ್ನು ಹಾಗೂ ಅರ್ಜುನನಿಗೆ ಗಾಂಡೀವ ಧನಸ್ಸನ್ನು ಕೊಡುತ್ತಾನೆ. ಹೀಗೆ ಶ್ರೀಕೃಷ್ಣನಿಗೆ ಸುದರ್ಶನ ಬಂತೆಂದುಪುರಾಣಗಳಲ್ಲಿ ಉಲ್ಲೇಖ ಮಾಡಲಾಗಿದೆ..