ಈ ಗಿಡಗಳನ್ನ ನೆಟ್ಟರೆ ಹಾವುಗಳು ನಿಮ್ಮ ಮನೆಯ ಬಳಿ ಸುಳಿಯುವುದೇ ಇಲ್ಲ !

Advertisements

ಹಾವು ಎಂದಾಕ್ಷಣ ಕನಸಿನಲ್ಲೂ ಬೆಚ್ಚಿ ಬೀಳುವವರೇ ಹೆಚ್ಚು. ಮನೆಯ ಒಳಗಡೆ ಬಂದರಂತೂ ಮುಗಿದೇ ಹೋಯಿತು. ಆದರೆ ಮನೆಯ ಬಳಿ ಕೆಲವೊಂದು ಗಿಡಗಳನ್ನ ನೆಡುವುದರಿಂದ ಹಾವುಗಳು ಮನೆಯ ಕಾಂಪೌಂಡ್ ಬಳಿಯೂ ಕೂಡ ಸುಳಿಯುವುದಿಲ್ಲವಂತೆ. ಬೆಳ್ಳುಳ್ಳಿಯ ಗಿಡ, ಸರ್ಪ ಗಂಧ, ಗೊಂಡೆ ಹೂವು, ಮಾಚಿ ಪತ್ರೆ, ಪಚ್ಛಿಮ ಭಾರತದ ಕಡೆ ಬೆಳೆಯುವ ಮಜ್ಜಿಗೆ ಹುಲ್ಲು ಈ ಗಿಡಗಳು ಮನೆಯ ಬಳಿ ಇದ್ದರೆ ಅತ್ತಕಡೆ ಸರ್ಪಗಳು ಸುಳಿಯುವುದಿಲ್ಲ ಎಂದು ಹೇಳಲಾಗಿದೆ. ಈ ಗಿಡಗಳ ಪರಿಮಳದಲ್ಲಿ ಹಾವುಗಳನ್ನ ವಿಕರ್ಷಣೆ ಮಾಡುವ ಗುಣ ಎನ್ನುವ ಮಾಹಿತಿಯಿದೆ. ಹಾವುಗಳು ಮನೆಯ ಬಳಿ ಸುಳಿಯದಂತೆ ಓಡಿಸುವ ಎಷ್ಟೋ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಬಂದಿದ್ದರೂ ಅಷ್ಟೊಂದು ಪ್ರಯೋಜನಕಾರಿಯಾಗಿ ಕೆಲಸ ಮಾಡುವುದಿಲ್ಲ.

Advertisements

ಹಾಗಾಗಿ ನಮ್ಮ ಮನೆಯ ಬಳಿ ಬೆಳೆಯುವ ಕೆಲವೊಂದು ನೈಸರ್ಗಿಕ ಹೂಗಳೇ ಸರ್ಪಗಳನ್ನ ದೂರವಿಡುವ ಕೆಲಸ ಮಾಡಬಲ್ಲವು. ಅದರಲ್ಲಿ ದೇವರಿಗೆ ಬಳಸುವ ಚೆಂಡು ಹೂ : ಗಾಢವಾದ ಹಳದಿ ಬಣ್ಣ ಹೊಂದಿರುವ ಈ ಚೆಂಡೂ ಹೂ ಹಾವುಗಳು ಸೇರಿದಂತೆ ಇನ್ನಿತರೇ ಕ್ರಿಮಿಕೀಟಗಳನಂ ವಿಕರ್ಷಣೆ ಮಾಡುವ ಗುಣ ಹೊಂದಿದೆ. ಇನ್ನು ಈ ಚೆಂಡೂ ಹೂವಿನ ಪರಿಮಳ ಸರ್ಪಗಳಿಗೆ ಸಹಿಸಲು ಅಸಾಧ್ಯವಂತೆ. ಇನ್ನು ಈ ಹೂವಿನ ರಸ ರೆಪ್ಪೆಯೆ ಇಲ್ಲದಿರುವ ಹಾವಿನ ಕಣ್ಣಿಗೆ ಏನಾದರು ಬಿದ್ದರೆ ಕುರುಡುತನ ಹಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸರ್ಪಗಂಧ ಮತ್ತು ಮಜ್ಜಿಗೆ ಹುಲ್ಲು : ಇಂಡಿಯನ್ ಸ್ನೇಕ್ ರೂಟ್ ಎಂದೇ ಕರೆಯಲಾಗುವ ಸರ್ಪಗಂಧ ಗಿಡ ಸರ್ಪಗಳನ್ನ ವಿಕರ್ಷಿಸುವ ಗುಣಗಳನ್ನ ಹೊಂದಿದೆ. ಇನ್ನು ಮಜ್ಜಿಗೆ ಹುಲ್ಲಿನಿಂದ ಬಿಡುಗಡೆಯಾಗುವ ಪರಿಮಳ ಸರ್ಪಗಳು ಮನೆಯ ಬಳಿ ಸುಳಿಯದಂತೆ ತಡೆಯುತ್ತದೆ.

ಗುಲಾಬಿ ಅಗಾಪಂಥಸ್ : ಈರುಳ್ಳಿ ಜಾತಿಗೆ ಸೇರಿದ್ದು ಎಂದೇ ಹೇಳಲಾಗುವ ಈ ಗಿಡ ವಿವಿಧ ಬಗೆಯ ಹೂಗಳನ್ನ ಬಿಡುತ್ತದೆ. ಇನ್ನು ಈ ಗಿಡ ಗುಲಾಬಿ ಬಣ್ಣ ಸೇರಿದಂತೆ ನೇರಳೆ, ಬಿಳಿ, ನೀಲಿ ಬಣ್ಣದ ಹೂಗಳನ್ನ ಬಿಡುತ್ತದೆ. ಇನ್ನು ಇದರಲ್ಲಿ ಬಿಡುವ ಗುಲಾಬಿ ಬಣ್ಣದ ಹೂ ಸರ್ಪಗಳು ಮನೆಯ ಬಳಿ ಬರದಂತೆ ಮಾಡುತ್ತದೆ.

ಹಾವಿನ ಸಸ್ಯ : ಇನ್ನು ಈ ಗಿಡ ನೋಡಲು ಥೇಟ್ ಹಾವಿನ ರೂಪದಂತೆ ಕಾಣಿಸಲಿದ್ದು ಇದರ ಆಕಾರವನ್ನ ನೋಡಿ ಸರ್ಪಗಳು ತಮ್ಮ ಎದುರಿಗೆ ಇರುವುದು ತಮ್ಮ ವೈರಿ ಸರ್ಪವೆಂದು ತಿಳಿದು ಅಲ್ಲಿಂದ ಹಿಂದೆ ಸರಿಯುತ್ತವೆ.