ಮಹಾಭಾರತದಲ್ಲಿ ಬರುವ ಅಕ್ಷೋಹಿಣಿ ಸೈನ್ಯ ಎಂದರೇನು? ಕೊನೆಗೆ ಬದುಕುಳಿದಿದ್ದು ಎಷ್ಟು ಜನ ಗೊತ್ತಾ ?

Adhyatma
Advertisements

ನಮಸ್ಕಾರ ಸ್ನೇಹಿತರೆ, ಮಹಾಭಾರತದಲ್ಲಿ ಸತತವಾಗಿ 18 ದಿನಗಳ ಕಾಲ ನಡೆದ ಕುರುಕ್ಷೇತ್ರದ ಯುದ್ದದ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ಹುಟ್ಟಿನಿಂದಲೇ ಪಾಂಡವರ ಬಗ್ಗೆ ಅಸೂಯೆ ದ್ವೇಷ ಬೆಳೆಸಿಕೊಂಡಿದ್ದ ದುರ್ಯೋಧನ ಯಾವಾಗ ಪಂಚ ಪಾಂಡವರ ಪತ್ನಿ ದ್ರೌಪಾದಿಯ ವಸ್ತ್ರಾಭರಣಕ್ಕೆ ಕಾರಣವಾಗುತ್ತಾನೋ ಆಗಲೇ ಮಹಾಭಾರತ ಯುದ್ಧ ಶುರುವಾದಂತಾಗುತ್ತದೆ. ಇನ್ನು 12 ವರ್ಷ ವನವಾಸ ಹಾಗೂ 1 ವರ್ಷ ಅಜ್ನ್ಯಾತವಾಸವನ್ನ ಮುಗಿಸಿಕೊಂಡು ಬಂದ ಪಾಂಡವರಿಗೆ ಅವರ ಸಾಮ್ರಾಜ್ಯವನ್ನ ಹಿಂದಿರುಗಿಸದೆ ಮಹಾ ಯುದ್ಧಕ್ಕೆ ಅಹ್ವಾನ ಕೊಡುತ್ತಾನೆ. ಐದು ಊರನ್ನಾದರೂ ಕೊಡಿ ಎಂದು ಸಂಧಾನಕ್ಕೆ ಹೋದ ವಾಸುದೇವ ಕೃಷ್ಣನನ್ನೇ ಕಟ್ಟಿ ಹಾಕುವ ಮೂರ್ಖತನದ ಕೆಲಸ ಮಾಡುತ್ತಾನೆ.

ಕುರುಕ್ಷೇತ್ರ ಯುದ್ಧವನ್ನು ತಡೆಯಲು ಧರ್ಮರಾಯ ಎಷ್ಟೇ ಪ್ರಯತ್ನ ಪಟ್ಟರೂ ಸಹ ದುರ್ಯೋಧನ ತನ್ನ ಹಠವನ್ನು ಬಿಡದೆ ಭೀಷ್ಮ ಪಿತಾಮಹ, ಗುರು ದ್ರೋಣ, ಮಹಾ ಧನುರ್ಧಾರಿ ಕರ್ಣ ಅವರಂತಹ ಯೋಧರು ಇರುವಾಗ ತನಗೆ ಜಯ ಖಚಿತ ಎಂದು ಯುದ್ಧವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಇನ್ನು ಪಾಂಡವರ ಕಡೆ 7 ಅಕ್ಷೋಹಿಣಿ‌ಯಷ್ಟು ಸೈನ್ಯವಿದ್ದರೆ‌ ಕೌರವರ ಪಡೆಗೆ ಬಲವಾಗಿ 11 ಅಕ್ಷೋಹಿಣಿ ಸೈನ್ಯವಿತ್ತು.

Advertisements

ಈ ಅಕ್ಷೋಹಿಣಿ ಎಂದರೆ ಏನು ಹಾಗೂ ಒಂದು ಅಕ್ಷೋಹಿಣಿ ಎಂದರೆ ಅದರಲ್ಲಿ ಎಷ್ಟು ಸೈನಿಕರು ಇರುತ್ತಾರೆ ಎಂದು ಅನೇಕರಿಗೆ ತಿಳಿದಿಲ್ಲ. ನಮ್ಮ ಭಾರತೀಯ ಸೇನೆಯಲ್ಲಿ ಒಂದು ತುಕಡಿಯಲ್ಲಿ ಸುಮಾರು 20 ರಿಂದ 30 ಜನ ಸೈನಿಕರಿರುತ್ತಾರೆ. ಮಾಹಾಭಾರತದ ಕಾಲದಲ್ಲಿ ಸೇನೆಯಲ್ಲಿನ‌ ವಿಭಾಗಗಳು ಅದರಲ್ಲಿದ್ದ ಸೇನೆ ಮತ್ತು ಅವುಗಳನ್ನು ಯಾವ ಯಾವ ಹೆಸರುಗಳಿಂದ ಕರೆಯುತ್ತಿದ್ದರು ಎಂದು ಇಲ್ಲಿ ತಿಳಿಯೋಣ ಬನ್ನಿ..

5 ಜನ ಕಾಲ್ದಳ, 1 ಆನೆ, 1 ರಥ ಹಾಗೂ 3 ಕುದುರೆ ಇಷ್ಟನ್ನು ಒಂದು ಪತ್ತಿ ಎಂದು ಕರೆಯುತ್ತಿದ್ದರು. ಈ ತರಹದ 3 ಪತ್ತಿಗಳು ಸೇರಿದರೆ ಒಂದು ಸೇನಾಮುಖ ಎಂದು ಕರೆಯಲಾಗುತ್ತಿತ್ತು. ಅಂದರೆ 3 ರಥ, 3 ಆನೆ 9 ಕುದುರೆ ಹಾಗೂ 15 ಜನ ಕಾಲ್ದಳ ಸೇರಿದರೆ ಒಂದು ಸೇನಾಮುಖ. ಈ ತರಹದ 3 ಸೇನಾಮುಖ ಸೇರಿದರು 1 ಕುಲ್ಮ ಎಂದು ಹೆಸರು. ಅಂದರೆ 9 ರಥ, 9 ಆನೆ, 27 ಕುದುರೆ ಹಾಗೂ 45 ಜನ ಕಾಲ್ದಳ ಸೇರಿದರೆ ಒಂದು ಕುಲ್ಮ ಎಂದು ಕರೆಯಲಾಗುತ್ತಿತ್ತು. ಇನ್ನು 3 ಕುಲ್ಮ‌ ಸೇರಿದರೆ 1 ಗಣ ಎಂದು‌ ಹೆಸರು. ಅಂದರೆ 27 ರಥ, 27 ಆನೆ 81 ಕುದುರೆ ಹಾಗೂ 135 ಜನ‌ ಕಾಲ್ದಳ ಸೇರಿದರೆ ಒಂದು ಗಣ ಎಂದು ಕರೆಯಲಾಗುತ್ತದೆ.

ಈ ತರಹದ 3 ಗಣ ಸೇರಿದರೆ ಒಂದು ವಾಹಿನಿ ಎಂದು‌ ಹೆಸರು. ಅಂದರೆ 81 ರಥ, 81 ಆನೆ, 243 ಕುದುರೆ ಹಾಗೂ 405 ಜನ ಕಾಲ್ದಳ ಸೇರಿದರೆ ಒಂದು ವಾಹಿನಿ. ಈ ತರಹದ 3 ವಾಹಿನಿ‌‌ ಸೇರಿದರೆ ಒಂದು ವೃತನ ಎಂದು ಹೆಸರು. ಅಂದರೆ 243 ರಥ, 243 ಆನೆ, 729 ಕುದು ರೆ ಹಾಗೂ 1215 ಜನ‌ ಕಾಲ್ದಳ‌ ಸೇರಿದರೆ ಒಂದು ವೃತನ ಎಂದು ಹೆಸರು. ಈ ತರಹದ 3 ವೃತನ ಸೇರಿದರೆ ಒಂದು ಚಮುವು ಎಂದು ಹೆಸರು. ಅಂದರೆ 729 ರಥ, 729 ಆನೆ, 2187 ಕುದುರೆ ಹಾಗೂ 3645 ಜನ‌ ಕಾಲ್ದಳ ಸೇರಿದರೆ ಒಂದು ಚಮುವು ಎಂದು ಹೆಸರು. ಈ ತರಹದ 3 ಚಮುವು ಸೇರಿದರೆ ಒಂದು ಅನಿಕಿನಿ‌ ಎಂದು ಹೆಸರು.

ಅಂದರೆ 2387 ರಥ, 2387 ಆನೆ, 6561 ಕುದುರೆ ಹಾಗೂ 10355 ಜನ‌ ಕಾಲ್ದಳ ಸೇರಿದರೆ ಒಂದು ಅನಿಕಿನಿ ಎಂದು ಕರೆಯಲಾಗುತ್ತಿತ್ತು.‌ ಈ ತರಹದ 10 ಅನಿಕಿನಿ‌ ಸೇರಿದರೆ ಒಂದು ಅಕ್ಷೋಹಿಣಿ ಸೈನ್ಯ ಎಂದು ಕರೆಯಲಾಗುತ್ತಿತ್ತು. ಅಂದರೆ ಒಂದು ಅಕ್ಷೋಹಿಣಿ ಸೈನ್ಯ ಎಂದರೆ 21870 ರಥ , 21870 ಆನೆ, 65610 ಕುದುರೆ ಹಾಗೂ 109350 ಜನ ಕಾಲ್ದಳ ಸೇರಿದರೆ ಒಂದು ಅಕ್ಷೋಹಿಣಿ‌ ಸೈನ್ಯ ಎಂದು ಕರೆಯಲಾಗುತ್ತದೆ.

ಈ ತರಹದ ಒಟ್ಟು 18 ಅಕ್ಷೋಹಿಣಿ ಸೈನ್ಯ ಕುರುಕ್ಷೇತ್ರ ಯುದ್ಧದಲ್ಲಿ ಪಾಲ್ಗೊಂಡಿತ್ತು. ಅಂದರೆ ಈ ಯುದ್ಧದಲ್ಲಿ ಒಟ್ಟು 396600 ರಥಗಳು, 396600  ಆನೆಗಳು, 1180980  ಕುದುರೆಗಳು ಹಾಗೂ 1968300 ಜನ ಕಾಲ್ದಳ ಕುರುಕ್ಷೇತ್ರ ಯುದ್ಧದಲ್ಲಿ ಭಾಗವಹಿಸಿತ್ತು. ಇಲ್ಲಿರುವ ಪ್ರತಿಯೊಂದು ರಥಕ್ಕೂ ಒಬ್ಬ ಸಾರಥಿ ಪ್ರತಿಯೊಂದು ಆನೆಗೂ ಒಬ್ಬ ಮಾವುತ ಹಾಗೂ ಸೈನಿಕರು ಸೇರಿ ಸರಿ ಸುಮಾರು 45 ಲಕ್ಷಕ್ಕೂ‌ ಅಧಿಕ ಜನ ಈ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಇನ್ನು ಇಷ್ಟು ಜನ ಸೈನಿಕರಲ್ಲಿ ಕೌರವರ ಕಡೆ ಬದುಕಿಳಿದಿದ್ದು 4 ಜನ ಹಾಗೂ ಪಾಂಡವರ ಕಡೆ ಬದುಕುಳಿದದ್ದು ಕೇವಲ‌ 8 ಜನ‌ ಮಾತ್ರ.

ಕೌರವರ ಕಡೆ ಕೃಪಾಚಾರ್ಯ, ಕೃತವರ್ಮ, ಅಶ್ವಥಾಮ ಹಾಗೂ ಸಂಜಯ ಬದುಕುಳಿದರು. ಹಾಗೂ ಪಾಂಡವರ ಕಡೆ ಧರ್ಮರಾಯ, ಅರ್ಜುನ , ಭೀಮ, ನಕುಲ, ಸಹದೇವ, ಸಿನಕ, ಹಾಗೂ ದುರ್ಯೋಧನನ ಮಲ‌ಸಹೋದರ ಯುಯುತ್ಸೋ ಹಾಗೂ ಶ್ರೀ ಕೃಷ್ಣ ಬದುಕುಳಿದವರು. ಈ ಮಾಹಿತಿಯಲ್ಲಿ ನಿಮ್ಮದೇನಾದರೂ ಅಭಿಪ್ರಾಯ ಇದ್ದರೆ ಕಾಮೆಂಟ್ ಮಾಡಿ ತಿಳಿಸಿ..