ಶ್ರೀರಾಮನಿಗೆ ಅಯೋಧ್ಯಯಲ್ಲಿ ಭೂಮಿ ಸಿಗುವಲ್ಲಿ ಮುಖ್ಯ ಕಾರಣ ಇವರೇ ನೋಡಿ ! ದೇವತೆಗಳ ಲಾಯರ್ ಎನ್ನುವ ಇವರ ವಯಸ್ಸೆಷ್ಟು ಗೊತ್ತಾ ?

Advertisements

ಆಗಸ್ಟ್ ೫ರಂದು ಅಯೋಧ್ಯಯಲ್ಲಿ ಶ್ರೀರಾಮ ಮಂದಿರದ ಶಿಲಾನ್ಯಾಸ ನೆರವೇರಿದ್ದು ಕೋಟ್ಯಾಂತರ ಹಿಂದೂಗಳ ಶತ ಶತಮಾನಗಳ ಕನಸು ನೆರವೇರಿದಂತಾಗಿದೆ. ಇನ್ನು ಈ ಭೂಮಿ ಪೂಜೆಯನ್ನ ಪ್ರಧಾನಿ ಮೋದಿಯವರು ನೆರವೇರಿಸಿದ್ದಾರೆ. ಇನ್ನು ೧೭೫ ಗಣ್ಯರು ಭಾಗವಹಿಸಿದ್ದ ಈ ಪೂಜಾ ಕಾರ್ಯಕ್ರಮದಲ್ಲಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಸೇರಿದಂತೆ ಹಲವು ನಾಯಕರು ಕೊ’ರೋನಾ ಭೀತಿಯ ಹಿನ್ನಲೆಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಇನ್ನು ಇದರೊಲ್ಲಬ್ಬರು ಅತೀ ಮುಖ್ಯವಾದ ವ್ಯಕ್ತಿ ಎಂದರೆ ಅದು ಪರಶರನ್. ಸ್ನೇಹಿತರೆ ಅಯೋಧ್ಯಯಲ್ಲಿರುವ ಭೂಮಿ ರಾಮ ಲಲ್ಲಾನಿಗೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್ ನಲ್ಲಿ ವಾದಿಸಿದ್ದ ವಕೀಲರು ಇವರೇ. ಜೊತೆಗೆ ರಾಮ ಜನ್ಮ ಭೂಮಿಯ ಟ್ರಸ್ಟ್ ಸದಸ್ಯರಲ್ಲಿ ಇವರು ಒಬ್ಬರಾಗಿದ್ದಾರೆ.

ಇನ್ನು ಅಯೋಧ್ಯೆಯಲ್ಲಿ ಭೂಮಿ ಪೂಜಾ ಕಾರ್ಯಕ್ರಮವನ್ನ ತಮ್ಮ ಮನೆಯಿಂದಲೇ ವೀಕ್ಷಣೆ ಮಾಡಿದ್ದ 92 ವರ್ಷದ ಪರಶರನ್ ಅವರ ಶ್ರದ್ಧಾ ಭಕ್ತಿ ಹೇಗಿತ್ತು ಎಂದರೆ ಸನಾತನದ ಧರ್ಮದ ಪಾರಂಪರಿಕ ಉಡುಗೆಗಳನ್ನ ತೊಟ್ಟಿದ್ದು ಈ ಫೋಟೋಗಳೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ. ಇನ್ನು ಸುಪ್ರೀಂ ಕೋರ್ಟ್ ನಲ್ಲಿ ಶ್ರೀರಾಮ ಮಂದಿರದ ಪರವಾಗಿ ವಾದಿಸಲು ಪರಶರನ್ ನಿಂತಾಗ ಆಗ ಮುಖ್ಯ ನ್ಯಾಯ ಮೂರ್ತಿಯಾಗಿದ್ದ ರಂಜನ್ ಗೋಗಯ್ ಅವರು ನೀವು ಕುಳಿತುಕೊಂಡು ವಾದ ಮಾಡುತ್ತೀರಾ ಎಂದು ಕೇಳಿದ್ದರು. ಆಗ ೯೨ ವರ್ಷದ ಪರಶರನ್ ಅವರು ಕೋರ್ಟ್ ನಲ್ಲಿ ನಿಂತುಕೊಂಡೆ ವಾದ ಮಾಡುವ ಪರಂಪರೆ ಇದ್ದು ನಾನು ಹಾಗೆಯೇ ಮಾಡುತ್ತೇನೆ ಎಂದು ಹೇಳಿದ್ದರು.

Advertisements

ಇನ್ನು ಪರಶರನ್ ಅವರನ್ನ ದೇವರುಗಳ ವಕೀಲ ಅಂತಲೂ ಕರೆಯುತ್ತಾರೆ. ಕಾರಣ ಶಬರಿ ಮಲೆ ಸ್ವಾಮಿ ಅಯ್ಯಪ್ಪನ ದೇವಸ್ಥಾನಕ್ಕೆ ಮಹಿಳೆಯರಿಗೆ ಅವಕಾಶ ನೀಡದಿರುವ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನೇ ಮುಂದುವರಿಸಬೇಕೆಂದು ವಾದ ಮಾಡಿ ಸೈ ಎನಿಸಿಕೊಂಡಿದ್ದವರು. ತಮಿಳುನಾಡಿನ ಶ್ರೀರಂಗಂ ನಲ್ಲಿ 1927 ಇಸವಿಯ ಆಕ್ಟೊಬರ್ ತಿಂಗಳಿನಲ್ಲಿ ಜನಿಸಿದ ಇವರು ಸರ್ಕಾರದಿಂದ ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಸ್ನೇಹಿತರೆ ಅಯೋಧ್ಯಯಲ್ಲಿ ರಾಮ ಜನ್ಮ ಭೂಮಿ ರಾಮ ಲಲ್ಲಾನಿಗೆ ಸೇರುವಂತಾಗಲು ಮುಖ್ಯ ಕಾರಣಕರ್ತರಾಗಿರುವ ಈ ಹಿರಿಯ ಜೀವಕ್ಕೆ ನಿಮ್ಮದೊಂದು ಧನ್ಯವಾದ ತಿಳಿಸಿ.. ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. 9663034244 Dr.ದುರ್ಗಾ ಪ್ರಸಾದ್ ಗುರೂಜಿ