ತಮ್ಮ ನೆಚ್ಚಿನ ನಟನನ್ನ ಎದುರಿಗೆ ನೋಡಿದ ಖುಷಿಯಲ್ಲಿ ಯಡವಟ್ಟು ಮಾಡಿಕೊಂಡ ಬಂಕ್ ಸಿಬ್ಬಂದಿ !

Cinema

ನಮಸ್ತೇ ಸ್ನೇಹಿತರೇ, ತಮ್ಮ ನೆಚ್ಚಿನ ನಟರು ಎಂದರೆ ಅಭಿಮಾನಿಗಳಿಗೆ ಅದೇನೋ ಪ್ರೀತಿ. ಒಂದು ವೇಳೆ ನೆಚ್ಚಿನ ನಟ ಎದುರುಗಡೆ ಬಂದುಬಿಟ್ಟರೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತೆ ಖುಷಿ ಪಡುತ್ತಾರೆ. ಆದರೆ ಇದೆ ವೇಳೆ ಕೆಲವೊಂದು ಸಮಯದಲ್ಲಿ ಅಭಿಮಾನಿಗಳಿಂದ ನಟರು ಕಿರಿಕಿರಿ ಅನುಭವಿಸಿದ ಹಲವಾರು ಪ್ರಕರಣಗಳು ನಡೆದಿವೆ. ಹೌದು, ಸ್ಯಾಂಡಲ್ವುಡ್ ನ ಚಿನ್ನಾರಿ ಮುತ್ತ ನಟ ವಿಜಯ ರಾಘವೇಂದ್ರ ಅವರನ್ನ ನೋಡಿದ ಅಭಿಮಾನಗಳುಿ ಎಡವಟ್ಟು ಮಾಡಿಬಿಟ್ಟಿದ್ದಾರೆ.

ನಟ ವಿಜಯ ರಾಘವೇಂದ್ರ ಅವರು ತಮ್ಮ ಕಾರಿಗೆ ಪೆಟ್ರೋಲ್ ಹಾಕಿಸುವ ಸಲುವಾಗಿ ಪೆಟ್ರೋಲ್ ಬಂಕ್ ಗೆ ಹೋಗಿದ್ದು ನೆಚ್ಚಿನ ನಟನನ್ನ ನೋಡಿದ ಅಲ್ಲಿನ ಸಿಬ್ಬಂದಿ ಕಾರಿಗೆ ಪೆಟ್ರೋಲ್ ಹಾಕುವ ಬದಲು ಡೀಸೆಲ್ ಹಾಕಿ ಯಡವಟ್ಟು ಮಾಡಿದ್ದಾರೆ. ಹೌದು, ವಿಜಯ ರಾಘವೇಂದ್ರ ಅವರು ಶಿವಮೊಗ್ಗ ಪ್ರವಾಸಕ್ಕೆಂದು ತಮ್ಮ ಕುಟುಂಬದವರೊಂದಿಗೆ ಹೋಗಿದ್ದು ಜೋಗ್ ನೋಡಿಕೊಂಡು ಬರುವಾಗ ಬಂಕ್ ಒಂದರಲ್ಲಿ ಕಾರಿಗೆ ಪೆಟ್ರೋಲ್ ಫಿಲ್ ಮಾಡುವಂತೆ ಹೇಳಿದ್ದಾರೆ.

ಇನ್ನು ತಮ್ಮ ನೆಚ್ಚಿನ ನಟನನ್ನ ಹತ್ತಿರದಿಂದ ನೋಡಿದ ಪೆಟ್ರೋಲ್ ಬಂಕ್ ಸಿಬ್ಬಂದಿ ತಮ್ಮ ಖುಷಿಯ ನಡುವೆ ಪೆಟ್ರೋಲ್ ಹಾಕುವ ಬದಲು ಕಾರಿಗೆ ಡೀಸೆಲ್ ತುಂಬಿಸಿಬಿಟ್ಟಿದ್ದಾರೆ.ಇನ್ನು ತಾವು ಮಾಡಿದ್ದೂ ಯಡವಟ್ಟು ಎಂದು ಗೊತ್ತಾಗುತ್ತಲೇ ವಿಜಯ್ ರಾಘವೇಂದ್ರ ಬಳಿ ಬಂಕ್ ಸಿಬ್ಬಂದಿ ಕ್ಷಮೆ ಕೇಳಿದ್ದು ಬಳಿಕ ತಮ್ಮ ಕಾರನ್ನ ಸರ್ವಿಸ್ ಗೆ ಕಳುಹಿಸಿಕೊಟ್ಟಿದ್ದು ನಟ ವಿಜಯ್ ರಾಘವೇಂದ್ರ ಕುಟುಂಬದವರೊಂದಿಗೆ ಬೇರೆ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಒಟ್ಟಿನಲ್ಲಿ ಅಭಿಮಾನಿಗಳು ನಟರ ನಡುವೆ ಇಂತಹ ಕಿರಿ ಕಿರಿಗಳು ನಡೆಯುವುದು ಸಾಮಾನ್ಯವಾಗಿದೆ. ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಸಂಪರ್ಕಿಸಿ ದುರ್ಗಾ ಪ್ರಸಾದ್ ಗುರೂಜಿ 9663034244